ಬೆಂಗಳೂರು: ಟಿವಿ9 ಕರ್ನಾಟಕ ತಂಡವು ಟಿ-10 ಮೀಡಿಯಾ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಅಮೋಘ ಸಾಧನೆ ಮಾಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಿಟಿವಿ ಕ್ರಿಕೆಟ್ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಫೈನಲ್ಸ್ನಲ್ಲಿ ಟಿವಿ9 ಕರ್ನಾಟಕ ತಂಡವು ನಿಗದಿತ10 ಓವರ್ಗಳಲ್ಲಿ 79 ರನ್ ಗಳಿಸಿ, ಎದುರಾಳಿ ಬಿಟಿವಿ ತಂಡಕ್ಕೆ 80 ರನ್ಗಳ ಟಾರ್ಗೆಟ್ ನೀಡಿತು. ಬಿಟಿವಿ ಕ್ರಿಕೆಟ್ ತಂಡವು 8 ವಿಕೆಟ್ಗಳ ನಷ್ಟಕ್ಕೆ 52 ರನ್ ಗಳಿಸಿ, ಸೋಲನ್ನೊಪ್ಪಿತು. ಕಿರಣ್ ಹೆಚ್ ವಿ ನಾಯಕತ್ವದಲ್ಲಿ ಟಿವಿ9 ತಂಡ ಈ ಅಮೋಘ ಜಯ ದಾಖಲಿಸಿದೆ.
PCB-PES ಜಂಟಿ ಆಯೋಜನೆ ಪ್ರತಿಷ್ಠಿತ ಟೂರ್ನಿಯನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಪಿಇಎಸ್ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿತ್ತು. ಸೆಮಿಫೈನಲ್ಸ್ನಲ್ಲಿ ಟಿವಿ9, ಬೆಂಗಳೂರು ಕ್ರೈಂ ರಿಪೋರ್ಟರ್ಸ್ ತಂಡವನ್ನ ಸೋಲಿಸಿ, ಫೈನಲ್ಗೆ ಪ್ರವೇಶಿಸಿತ್ತು. ಮತ್ತೊಂದು ಸೆಮಿಫೈನಲ್ಸ್ನಲ್ಲಿ ಬಿಟಿವಿ ಕ್ರಿಕೆಟ್ ತಂಡವು ನ್ಯೂಸ್ 9 ತಂಡವನ್ನ ಸೋಲಿಸಿತ್ತು.
ಬಿಎಸ್ವೈ-ವೀರೇಂದ್ರ ಹೆಗಡೆ ಅವರಿಂದ ಅರಮನೆ ಮೈದಾನದಲ್ಲಿ ಪ್ರಶಸ್ತಿ ವಿತರಣೆ ಅರಮನೆ ಮೈದಾನದಲ್ಲಿ ಡಿಸೆಂಬರ್ 31ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ, ಪಬ್ಲಿಕ್ ಟಿವಿ, ಟಿವಿ 5, ಪ್ರೆಸ್ ಕ್ಲಬ್ ಸೇರಿದಂತೆ ಒಟ್ಟು 21 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.