ಭಾರತದ ಅಗ್ರಮಾನ್ಯ ಮಹಿಳಾ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಮಲೇಷ್ಯಾ ಮಾಸ್ಟರ್ಸ್ (Malayisa Matsers) ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಕೌಲಾಲಂಪುರದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಚೀನಾದ ಆಟಗಾರ ಹಿ ಬಿಂಗ್ ಜಿಯಾವೊ ಅವರನ್ನು ಸೋಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಅವರು ಚೀನಾದ ಆಟಗಾರ್ತಿ ವಿರುದ್ಧದ ತನ್ನ ಸೋಲಿಗೆ ಸೇಡನ್ನು ತೀರಿಸಿಕೊಂಡಿದ್ದಲ್ಲದೆ 1 ಗಂಟೆಗಳ ಕಾಲ ನಡೆದ ಕಠಿಣ ಪಂದ್ಯವನ್ನು ಗೆದ್ದರು. ಆದಾಗ್ಯೂ, ಮಾಜಿ ವಿಶ್ವ ನಂಬರ್ ಒನ್ ಮತ್ತು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಗೆಲುವಿನ ವೇಗವನ್ನು ಮರಳಿ ಪಡೆಯುವ ಕಾಯುವಿಕೆ ಮತ್ತೆ ಹೆಚ್ಚಾಯಿತು. ಸತತ ಎರಡನೇ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದರು.
ಒಂದು ಗಂಟೆಯಲ್ಲಿ ನಿರ್ಧಾರ
ಭಾರತದ ಯಶಸ್ವಿ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ವಿಶ್ವದ ಏಳನೇ ಶ್ರೇಯಾಂಕಿತೆ ಸಿಂಧು ಚೀನಾ ಆಟಗಾರ್ತಿಯನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಅವರು ಬಿಂಗ್ ಕ್ಸಿಯಾವೊ ಅವರನ್ನು 21-13 17-21 21-15 ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಈ ಗೆಲುವಿನೊಂದಿಗೆ ಸಿಂಧು ಕಳೆದ ತಿಂಗಳು ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯ ಮೊದಲ ಸುತ್ತಿನಲ್ಲಿ ಬಿಂಗ್ ಕ್ಸಿಯಾವೋ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ಆದಾಗ್ಯೂ, ಚೀನಾದ ಆಟಗಾರ್ತಿ ಸಿಂಧು ವಿರುದ್ಧ ಇನ್ನೂ 10-9 ಸೋಲು-ಗೆಲುವಿನ ದಾಖಲೆ ಹೊಂದಿದ್ದಾರೆ.
ಪ್ರಣೀತ್-ಕಶ್ಯಪ್ಗೂ ಗೆಲುವು
ಅದೇ ಸಮಯದಲ್ಲಿ, ಪುರುಷರ ಸಿಂಗಲ್ಸ್‌ನಲ್ಲಿ, ಬಿ ಸಾಯಿ ಪ್ರಣೀತ್ ಮತ್ತು ಪರುಪಳ್ಳಿ ಕಶ್ಯಪ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಪ್ರದರ್ಶನಕ್ಕಾಗಿ ಹೋರಾಡುತ್ತಿರುವ ಈ ಇಬ್ಬರೂ ಆಟಗಾರರು ತಮ್ಮ ತಮ್ಮ ಪಂದ್ಯಗಳನ್ನು ಗೆದ್ದಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಪ್ರಣೀತ್ ಏಕಪಕ್ಷೀಯ ಸ್ಪರ್ಧೆಯಲ್ಲಿ ಗ್ವಾಟೆಮಾಲಾದ ಕೆವಿನ್ ಕಾರ್ಡೆನ್ ಅವರನ್ನು 21-8 21-9 ಅರ್ಧ ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸೋಲಿಸಿದರು. ಅದೇ ಸಮಯದಲ್ಲಿ, 2014 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕಶ್ಯಪ್ ಸ್ಥಳೀಯ ಸ್ಪರ್ಧಿ ಟಾಮಿ ಸುಗಿಯಾರ್ಟೊ ಅವರನ್ನು 16-21 21-16 21-16 ರಿಂದ ಸೋಲಿಸುವ ಮೂಲಕ ಪುನರಾಗಮನ ಮಾಡಿದರು.
ಆರಂಭದಲ್ಲಿಯೇ ಸೈನಾಗೆ ಮತ್ತೊಮ್ಮೆ ಸೋಲು
ಆದರೆ, ಭಾರತದ ಎರಡನೇ ದೊಡ್ಡ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ಯಶಸ್ಸು ಸಿಗಲಿಲ್ಲ. ಮೊದಲ ಗೇಮ್ ಗೆದ್ದಿದ್ದರೂ, ಸೈನಾ 21-16, 17-21 14-21 ರಲ್ಲಿ ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ ವಿರುದ್ಧ ಸೋತರು. ಕಳೆದ ವಾರ ಮಲೇಷ್ಯಾ ಓಪನ್ ಸೂಪರ್ 750 ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವದ 24ನೇ ಶ್ರೇಯಾಂಕಿತೆ ಸೈನಾ ಸೋಲನುಭವಿಸಿದ್ದರು. ಪುರುಷರಲ್ಲಿ ಸಮೀರ್ ವರ್ಮಾ ಅವರು 21-10 12-21 14-21 ರಿಂದ ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಸೋತರು.
Published On - 8:07 pm, Wed, 6 July 22