MS Dhoni Entertainment: 3 ಭಾಷೆಗಳಲ್ಲಿ ಚಿತ್ರ ನಿರ್ಮಿಸಲಿದೆ ಧೋನಿ ಎಂಟರ್‌ಟೈನ್‌ಮೆಂಟ್

MS Dhoni Entertainment: ಧೋನಿ ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಎಂಎಸ್​ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರ ಒಡೆತನದಲ್ಲಿದೆ.

MS Dhoni Entertainment: 3 ಭಾಷೆಗಳಲ್ಲಿ ಚಿತ್ರ ನಿರ್ಮಿಸಲಿದೆ ಧೋನಿ ಎಂಟರ್‌ಟೈನ್‌ಮೆಂಟ್
MS Dhoni
Edited By:

Updated on: Oct 10, 2022 | 3:09 PM

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಆದರೆ ಈ ಬಾರಿ ಕ್ರೀಡಾಲೋಕದಲ್ಲಿ ಅಲ್ಲ ಎಂಬುದು ವಿಶೇಷ. ಅಂದರೆ ಈ ಸಲ ಧೋನಿ ಬಂಡವಾಳ ಹೂಡಲು ಮುಂದಾಗಿರುವುದು ಚಿತ್ರರಂಗದಲ್ಲಿ. ಇದಕ್ಕಾಗಿ ಧೋನಿ ಎಂಟರ್‌ಟೈನ್‌ಮೆಂಟ್ (MS Dhoni Entertainment) ಕಂಪೆನಿಯನ್ನೂ ಕೂಡ ಪ್ರಾರಂಭಿಸಿದೆ. ಈ ಮೂಲಕ ಸಿನಿರಂಗದಲ್ಲಿ ನಿರ್ಮಾಪಕರಾಗಿಯೂ ಧೋನಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಆರಂಭದಲ್ಲಿ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ನಿರೀಕ್ಷೆಯಂತೆ ಈ ಕಂಪೆನಿಯ ಮೊದಲ ಆದ್ಯತೆ ತಮಿಳು ಸಿನಿಮಾ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಗೆ ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕಾಲಿವುಡ್ ಮೂಲಕವೇ ಧೋನಿ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತ. ಇದಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳನ್ನೂ ಕೂಡ ನಿರ್ಮಿಸಲಿದೆ. ಅಂದರೆ ಆರಂಭದಲ್ಲಿ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿ ಮುಂದಾಗಿದೆ.

ಇನ್ನು ಧೋನಿ ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಎಂಎಸ್​ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರ ಒಡೆತನದಲ್ಲಿದೆ. ಈ ಪ್ರೊಡಕ್ಷನ್ ಹೌಸ್ ಬೇರೆ ನಿರ್ಮಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೋರ್ ಆಫ್ ದಿ ಲಯನ್, ಬ್ಲೇಜ್ ಟು ಗ್ಲೋರಿ ಮತ್ತು ದಿ ಹಿಡನ್ ಹಿಂದೂ ಮುಂತಾದ ವೆಬ್ ಸಿರೀಸ್​ಗಳನ್ನು ನಿರ್ಮಿಸಿದೆ. ಇದೀಗ ಪೂರ್ಣ ಪ್ರಮಾಣ ನಿರ್ಮಾಣ ಸಂಸ್ಥೆಯಾಗಿ ಕಾಲಿವುಡ್ ಮೂಲಕ ಎಂಟ್ರಿ ಕೊಡಲು ಧೋನಿ ಎಂಟರ್‌ಟೈನ್‌ಮೆಂಟ್ ಮುಂದಾಗಿರುವುದು ವಿಶೇಷ.

ಇದನ್ನೂ ಓದಿ
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಈ ಹಿಂದೆ ಕಡಕ್​ನಾತ್ ಕೋಳಿ ಸಾಕಾಣಿಯ ಮೂಲಕ ಗಮನ ಸೆಳೆದಿದ್ದ ಧೋನಿ ಈ ಬಾರಿ ಬಣ್ಣದ ಲೋಕದತ್ತ ಹೆಜ್ಜೆ ಹಾಕಿದ್ದಾರೆ. ಇದಲ್ಲದೆ ಧೋನಿ ಕ್ರೀಡಾ ಅಕಾಡೆಮಿಗಳಲ್ಲೂ ಕೂಡ ಬಂಡವಾಳ ಹೂಡಿದ್ದಾರೆ. ಒಟ್ಟಿನಲ್ಲಿ ಐಪಿಎಲ್​ನಲ್ಲಿ ಮಾತ್ರ ಸಕ್ರೀಯರಾಗಿರುವ ಧೋನಿ ಇದೀಗ ಇತರೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.

 

Published On - 3:09 pm, Mon, 10 October 22