ಚೆನ್ನೈ ಸೂಪರ್ ಕಿಂಗ್ಸ್ IPLನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗಿಂತ ಭಿನ್ನವಾದ ತಂಡ ಎಂಬುದು ಈಗಾಗಲೇ ಗೋಚರವಾಗಿದೆ. ಈ ತಂಡದ ಜನಪ್ರಿಯತೆ ಮತ್ತು ಯಶಸ್ಸಿಗೆ ಮಹೇಂದ್ರ ಸಿಂಗ್ ಧೋನಿ ಅದರ ನಾಯಕರಾಗಿರುವುದೇ ಮುಖ್ಯ ಕಾರಣವಾಗಿದೆ.
IPL ಮೊದಲ ಆವೃತಿಯಿಂದ ಧೋನಿ ತಂಡದ ಭಾಗವಾಗಿದ್ದಾರೆ. ಆದರೆ ಧೋನಿ ತಂಡದ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ರೋಚಕ ಮಾಹಿತಿ ಈಗ ಹೊರಬಿದ್ದಿದೆ. ಚೆನ್ನೈ ಫ್ರ್ಯಾಂಚೈಸ್ನ ಆಡಳಿತ ಮಂಡಳಿಯು ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ರನ್ನು ಧೋನಿಯ ಬದಲು ನಾಯಕನನ್ನಾಗಿ ಮಾಡಲು ಬಯಸಿತು ಎಂಬ ವಿಚಾರವನ್ನು ಚೆನ್ನೈನ ಮಾಜಿ ಬ್ಯಾಟ್ಸ್ಮನ್ ಸುಬ್ರಮಣಿಯಂ ಬದ್ರಿನಾಥ್ ಬಹಿರಂಗಪಡಿಸಿದ್ದಾರೆ.
IPL ಪಂದ್ಯಾವಳಿಯ ಮೊದಲ ಹರಾಜಿನಲ್ಲಿ CSK ಫ್ರ್ಯಾಂಚೈಸ್ ಧೋನಿಯನ್ನು ಖರೀದಿಸಿತು. ಚೆನ್ನೈ ಹೊರತುಪಡಿಸಿ, ಎಲ್ಲಾ 7 ತಂಡಗಳು ಐಕಾನ್ ಆಟಗಾರರನ್ನು ತಮ್ಮ ನಾಯಕರನ್ನಾಗಿ ಮಾಡಿಕೊಂಡಿದ್ದವು. ಆದರೆ, ಚೆನ್ನೈಗೆ ಮಾತ್ರ ಐಕಾನ್ ಪ್ಲೇಯರ್ ಇರಲಿಲ್ಲ. ಇದರಿಂದಾಗಿ ಚೆನ್ನೈ ಸೆಹ್ವಾಗ್ರನ್ನು ತಂಡದ ಐಕಾನ್ ಆಗಿ ಮಾಡಲು ನಿರ್ಧರಿಸಿತ್ತು. ಆದರೆ ಸೆಹ್ವಾಗ್ ಒಲವು ಬೇರೆ ಕಡೆ ಇರುವುದನ್ನು ಗಮನಿಸಿದ ಚೆನ್ನೈ ಧೋನಿಯನ್ನು ಹರಾಜಿನಲ್ಲಿ ಖರೀದಿಸಿದರು ಎಂದು ಬದ್ರಿನಾಥ್ ಹೇಳಿದ್ದಾರೆ.
ಸೆಹ್ವಾಗ್ ದೆಹಲಿಯಿಂದ ಆಡಲು ನಿರ್ಧರಿಸಿದ್ದರಿಂದ ಚೆನ್ನೈ ತನ್ನ ಆಯ್ಕೆಯನ್ನು ಬದಲಾಯಿಸಿ, ಧೋನಿಯನ್ನು ನಾಯಕನನ್ನಾಗಿ ಮಾಡಿತು ಎಂಬ ವಿಚಾರವನ್ನು ಬದ್ರಿನಾಥ್ ಬಿಚ್ಚಿಟ್ಟಿದ್ದಾರೆ.