ಮಹೇಂದ್ರ ಸಿಂಗ್ ಧೋನಿಗೆ ICC ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಣೆ
ಧೋನಿಯ ಕ್ರೀಡಾಸ್ಫೂರ್ತಿಯ ಈ ಕಾರ್ಯಕ್ಕೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಿಸಿದೆ. ಕ್ರಿಕೆಟ್ ಅಭಿಮಾನಿಗಳು ವೋಟ್ ಮಾಡುವ ಮೂಲಕ ಧೋನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿಗೆ ಐಸಿಸಿ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ಘೋಷಿಸಿದೆ. ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಂಡಿರುವ ಭಾರತದ ಮಾಜಿ ಕಪ್ತಾನ, 2011ರ ನಾಟಿಂಗ್ ಹ್ಯಾಮ್ ಟೆಸ್ಟ್ನಲ್ಲಿ ರನ್ ಔಟ್ ಆಗಿದ್ದ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್ನನ್ನು ವಾಪಸ್ ಕರೆದಿದ್ದರು. ಧೋನಿ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
ಇದೀಗ ಧೋನಿಯ ಕ್ರೀಡಾಸ್ಫೂರ್ತಿಯ ಈ ಕಾರ್ಯಕ್ಕೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಿಸಿದೆ. ಐಸಿಸಿ ಕಳೆದ ಹತ್ತು ವರ್ಷಗಳಿಂದ ಈ ರೀತಿ ವಿವಿಧ ಪ್ರಶಸ್ತಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನೀಡುತ್ತಿದೆ. ಕ್ರಿಕೆಟ್ ಅಭಿಮಾನಿಗಳು ವೋಟ್ ಮಾಡುವ ಮೂಲಕ ಧೋನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
2011ರ ಆ ಪಂದ್ಯದಲ್ಲಿ ಏನು ನಡೆದಿತ್ತು? ಭಾರತ ಮತ್ತು ಇಂಗ್ಲೆಂಡ್, ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಆಡುತ್ತಿತ್ತು. ಪಂದ್ಯದ ಮೂರನೇ ದಿನದಂದು ಟೀ ಬ್ರೇಕ್ಗೂ ಮೊದಲಿನ ಓವರ್ನ ಕೊನೆಯ ಎಸೆತದಲ್ಲಿ ಮಾರ್ಗನ್ ಬ್ಯಾಟಿಂಗ್ ಮಾಡುತ್ತಿದ್ದರು. ಮಾರ್ಗನ್ ಹೊಡೆತ ಬೌಂಡರಿಯತ್ತ ಸಾಗಿತು. ಅದು ಫೋರ್ ಎಂದು ನಿರ್ಧರಿಸಿದ ಮಾರ್ಗನ್ ಹಾಗೂ ಇಯಾನ್ ಬೆಲ್ ಟೀ ಬ್ರೇಕ್ಗಾಗಿ ಪೆವಿಲಿಯನ್ನತ್ತ ಹೊರಡಲು ತಯಾರಾಗಿ ಕ್ರೀಸ್ ಬಿಟ್ಟು ನಿಂತರು. ಆದರೆ ಬೌಂಡರಿಯಲ್ಲಿ ಬಾಲ್ ತಡೆದ ಭಾರತೀಯ ಆಟಗಾರರು, ಚೆಂಡನ್ನು ಧೊನಿ ಕೈಗೆಸೆದರು. ಅದಾಗಲೇ ಕ್ರೀಸ್ ಬಿಟ್ಟಿದ್ದ ಇಯಾನ್ ಬೆಲ್ರನ್ನು ರನೌಟ್ ಮಾಡಲಾಯಿತು. ಥರ್ಡ್ ಅಂಪೈರ್ ತೀರ್ಮಾನದ ಮೂಲಕ ಬೆಲ್ ಔಟಾಗಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು.
ಈ ನಿರ್ಧಾರದಿಂದ ಬೆಲ್ ಅಸಮಾಧಾನ ಹೊಂದಿರುವುದು ತಿಳಿದುಬಂತು. ಟೀ ಬ್ರೇಕ್ನಲ್ಲಿ ಬೆಲ್ ವಿಕೆಟ್ ಬಗ್ಗೆ ಚರ್ಚೆ ನಡೆಸಿದ ಧೋನಿ, ಇಂಗ್ಲೆಂಡ್ ನಾಯಕ ಆಂಡ್ರ್ಯೂ ಸ್ಟ್ರಾಸ್ ಹಾಗೂ ಉಭಯ ತಂಡದ ಕೋಚ್ಗಳು ಇಯಾನ್ ಬೆಲ್ ಔಟ್ ಅಪೀಲ್ನ್ನು ಹಿಂಪಡೆದರು. ಮಹೇಂದ್ರ ಸಿಂಗ್ ಧೋನಿಯ ಈ ನಡೆಯು ವ್ಯಾಪಕ ಪ್ರಶಂಸೆ ಪಡೆದುಕೊಂಡಿತ್ತು. ಕ್ರೀಡಾಸ್ಫೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
M S Dhoni wins the ICC Spirit of Cricket Award of the Decade. The former India captain was chosen by fans unanimously for his gesture of calling back England batsman Ian Bell after a bizarre run out in the Nottingham Test in 2011: International Cricket Council
(Pic Source: ICC) pic.twitter.com/LZr3lpcbgU
— ANI (@ANI) December 28, 2020
ICC Awards | ವಿರಾಟ್ ಕೊಹ್ಲಿಗೆ ದಶಕದ ಕ್ರಿಕೆಟಿಗ ಮತ್ತು ಏಕದಿನ ತಂಡದ ಅತ್ಯುತ್ತಮ ಕ್ರಿಕೆಟಿಗನ ಗೌರವ
Published On - 6:05 pm, Mon, 28 December 20