
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೆಸ್ಟ್ ಟೀಮಿನಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆಯಾಗಿರುವ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಅವರನ್ನು ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಡಿಸದಿರುವುದು ಭಾರತದ ಮಾಜಿ ವೇಗ್ ಬೌಲರ್ ಮತ್ತು ಕಾಮೆಂಟೇಟರ್ ಅಜಿತ್ ಅಗರ್ಕರ್ ಅವರಲ್ಲಿ ಆಶ್ಚರ್ಯ ಮತ್ತು ನಿರಾಸೆ ಮೂಡಿಸಿದೆ.
‘ಕುಲ್ದೀಪ್ಗೆ ಭಾರಿ ನಿರಾಸೆಯಾಗಿರಬೇಕು. ಅದು ಸಹಜ ತಾನೆ? ಕಳೆದ ಸರಣಿಯ ಕೊನೆಯ ಟೆಸ್ಟ್ ಕೊನೆಗೊಂಡ ನಂತರ ಅವರು ಭಾರತದ ನಂಬರ್ ಒನ್ ಸ್ಪಿನ್ನರ್ ಆಗಿದ್ದರು. ಅದಾದ ಮೇಲೆ ಅವರು ಒಂದೇ ಒಂದು ಟೆಸ್ಟ್ ಆಡಿಲ್ಲವೆಂದು ನಾನು ಭಾವಿಸುತ್ತೇನೆ. ಐದು ಬೌಲರ್ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಭಾರತ ಮಾಡಿದ್ದರೆ ಅವರಲ್ಲಿ ಒಬ್ಬ ಅನುಭವಿ ಬೌಲರ್ನನ್ನು ಸೇರಿಸಿಕೊಳ್ಳಬೇಕಿತ್ತು. ಈ ಟೆಸ್ಟ್ನಲ್ಲಿ ಆಡುತ್ತಿರುವವರೆಲ್ಲ ಅನನುಭವಿಗಳು. ಮತ್ತೊಬ್ಬ ಸ್ಪಿನ್ನರ್ನನ್ನು ಆಡಿಸಿದ್ದರೆ ಪ್ರಮಾದವೇನೂ ಆಗುತ್ತಿರಲಿಲ್ಲ. ಯಾದವ್ ಬಾರತದ ಬೌಲಿಂಗ್ ದಾಳಿಗೆ ಮೊನಚು ಮತ್ತು ಸಮತೋಲನ ಒದಗಿಸುತ್ತಿದ್ದರು. ಪಿಚ್ ಫ್ಲ್ಯಾಟ್ ಆದರೆ, ವೇಗದ ಬೌಲರ್ಗಳಿಗೆ ಯಾವ ಪ್ರಯೋಜನವೂ ಸಿಗದು. ಆಗ ದಾಳಿ ವೈವಿಧ್ಯಮಯ ಆಯಾಮ ತಳೆಯುವ ಬದಲು ಒಂದೇ ಡೈಮೆನ್ಷನಲ್ ಅನಿಸಲಿದೆ’ ಎಂದು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ನಡೆಸುವ ಎಕ್ಸ್ಟ್ರಾ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಮೊದಲ ದಿನದಾಟದ ನಂತರ ಅಗರ್ಕರ್ ಹೇಳಿದರು.
ಅಜಿತ್ ಅಗರ್ಕರ್
‘ಭಾರತದ ಟೀಮಿನಲ್ಲಿ ಮಿಚೆಲ್ ಸ್ಟಾರ್ಕ್ನಂಥ ಭಯಂಕರ ವೇಗದ ಬೌಲರ್ ಇಲ್ಲ. ಕುಲ್ದೀಪ್ರನ್ನು ಆಡಿಸಿದ್ದರೆ ಆಕ್ರಮಣದಲ್ಲಿ ವೈವಿಧ್ಯತೆ ಇರುತಿತ್ತು. ತಾನು ಆಸ್ಟ್ರೇಲಿಯಾದ ಪಿಚ್ಗಳಲ್ಲಿ ವಿಕೆಟ್ ಕೀಳಬಲ್ಲೆ ಎನ್ನುವುದನ್ನು ಕುಲ್ದೀಪ್ ಈ ಹಿಂದೆ ಸಾಬೀತು ಮಾಡಿದ್ದಾರೆ. ಅವರು ಕೊಂಚ ನಿಧಾನಗತಿಯಲ್ಲಿ ಬೌಲ್ ಮಾಡುತ್ತಾರೆನ್ನುವ ಆಪಾದನೆಯಿದೆ. ಆದರೆ ಇಲ್ಲಿನ ಕಂಡೀಷನ್ಗಳಿಗೆ ಅವರ ಬೌಲಿಂಗ್ಗೆ ಅದ್ಭುತವಾಗಿ ಒಗ್ಗುತ್ತದೆ. ಹಾಗಾಗಿ ಅವರನ್ನು ಆಡಿಸದಿರುವುದು ನನ್ನಲ್ಲಿ ಆಶ್ವರ್ಯವನ್ನಷ್ಟೇ ಅಲ್ಲ ನಿರಾಸೆಯೂ ಮೂಡಿಸಿದೆ’ ಎಂದು ಅಗರ್ಕರ್ ಹೇಳಿದ್ದಾರೆ.
2019-19ರ ಬಾರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆದ ಸರಣಿಯಲ್ಲಿ ಕುಲ್ದೀಪ್ ಅತ್ಯತ್ತುಮವಾಗಿ ಬೌಲ್ ಮಾಡಿದ್ದರು ಮತ್ತ್ತು ಸಿಡ್ನಿಯಲ್ಲಿ ನಡೆದ ಟೆಸ್ಟ್ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಕೂಡ ಮಾಡಿದ್ದರು.
India vs Australia Test Series | ಮತ್ತೊಮ್ಮೆ ಜನಾಂಗೀಯ ನಿಂದನೆಗೊಳಗಾದ ಮೊಹಮ್ಮದ್ ಸಿರಾಜ್