ಕೊಹ್ಲಿ ಅತ್ಯುತ್ತಮ ಸ್ಪರ್ಶದಲ್ಲಿದ್ದಾರೆ, ಅವರ ಬ್ಯಾಟಿಂಗ್ ಬಗ್ಗೆ ಚಿಂತೆ ಬೇಡ: ಮೈಕೆಲ್ ವಾನ್

ವಿರಾಟ್​ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ಅಪಸ್ವರ ಎತ್ತುತ್ತಿರುವವರಿಗೆಲ್ಲ ಇಂಗ್ಲೆಂಡ್​ನ ಮಾಜಿ ನಾಯಕ ಮೈಕೆಲ್ ವಾನ್ ತಕ್ಕ ಉತ್ತರ ನೀಡಿದ್ದಾರೆ. ಕೊಹ್ಲಿ ಅತ್ಯುತ್ತಮ ಸ್ಪರ್ಶದಲ್ಲಿದ್ದಾರೆಂದು ಹೇಳಿರುವ ವಾನ್, ಅವರ ಅನುಪಸ್ಥಿತಿಯಲ್ಲಿ ಭಾರತ ಹೇಗೆ ಮೂರು ಟೆಸ್ಟ್​ಗಳನ್ನಾಡಲಿದೆ ಎನ್ನುವ ಕುರಿತು ಜನ ಯೋಚಿಸಬೇಕಿದೆ ಎಂದಿದ್ದಾರೆ.

ಕೊಹ್ಲಿ ಅತ್ಯುತ್ತಮ ಸ್ಪರ್ಶದಲ್ಲಿದ್ದಾರೆ, ಅವರ ಬ್ಯಾಟಿಂಗ್ ಬಗ್ಗೆ ಚಿಂತೆ ಬೇಡ: ಮೈಕೆಲ್ ವಾನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 30, 2020 | 7:43 PM

ವಿರಾಟ್​ ಕೊಹ್ಲಿ ಮತ್ತು ಮೈಕೆಲ್ ವಾನ್

ಭಾರತ ಸತತವಾಗಿ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾಗೆ ಸೋತು ಸರಣಿ ಒಪ್ಪಿಸಿರುವುದು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ಚರ್ಚೆ ಆರಂಭವಾಗುವುದಕ್ಕೆ ಅನುವು ಮಾಡಿಕೊಟ್ಟಿದೆ. ಕನ್ನಡದಲ್ಲಿ ಒಂದು ಗಾದೆ ಮಾತಿದೆ, ‘ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಅಂತ, ಕೊಹ್ಲಿ ವಿಷಯದಲ್ಲೂ ಅದೇ ಅಗುತ್ತಿದೆ.

ಆದರೆ, ಇಂಗ್ಲೆಂಡ್​ನ ಮಾಜಿ ನಾಯಕ ಮತ್ತು ತಾವಾಡುತ್ತಿದ್ದ ದಿನಗಳಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿದ್ದ ಮೈಕೆಲ್ ವಾನ್ ಟೀಮ್ ಇಂಡಿಯಾದ ನಾಯಕನ ಪರ ಬ್ಯಾಟ್​ ಮಾಡುತ್ತಿದ್ದಾರೆ. ಕೊಹ್ಲಿ ಈ ವರ್ಷ ಇನ್ನೂ ಒಂದು ಶತಕ ಕೂಡ ಬಾರಿಸದಿರುವುದು ಕೆಲವರಿಗೆ ಅವರು ತಮ್ಮ ಎಂದಿನ ಸ್ಪರ್ಶ ಕಳೆದುಕೊಂಡಂತೆ ಭಾಸವಾಗುತ್ತಿರಬಹುದು, ಅವರಿಂದ ಒಂದ ಶತಕ ಬಂದರೆ ಸಾಕು ಅದರೆ ಹಿಂದೆ 3-4 ಶತಕಗಳು ಬರಲಿವೆ ಎಂದು ವಾನ್ ಹೇಳಿದ್ದಾರೆ.

ಕ್ರೀಡಾ ವೆಬ್​ಸೈಟೊಂದರೊಂದಿಗೆ ಮಾತನಾಡಿರುವ ವಾನ್, ‘‘ನನಗೆ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಆ ಕುರಿತು ನಾನು ಯೋಚನೆಯನ್ನೇ ಮಾಡಲಾರೆ. ನಿಸ್ಸಂದೇಹವಾಗಿ ಅವರೊಬ್ಬ ಅದ್ಭುತ ಅಟಗಾರ. ಕ್ರಿಕೆಟ್​ನ ಎಲ್ಲ ಆವೃತ್ತಿಗಳಲ್ಲೂ ವಿಶ್ವದ ಶ್ರೇಷ್ಠ ಆಟಗಾರ. ಕೊಹ್ಲಿ ಆಡಿರುವ ಕಳೆದ 24 ಪಂದ್ಯಗಳನ್ನೂ ನಾನು ವೀಕ್ಷಿಸಿದ್ದೇನೆ. ಅವರು ಅತ್ಯತ್ತುಮ ಸ್ಪರ್ಶದಲ್ಲಿದ್ದಾರೆ. ಅವರು ಸ್ಪರ್ಶದಲ್ಲಿಲ್ಲ ಎಂದು ನನಗೆ ಅನಿಸಿಯೇ ಇಲ್ಲ. ಅವರ ಫುಟ್​ವರ್ಕ್, ಕೈ ಮತ್ತು ಕಣ್ಣಿನ ದೃಷ್ಟಿ ನಡುವಿನ ಹೊಂದಾಣಿಕೆ ಹಾಗೂ ಅವರ ಮನಸ್ಥಿತಿ ಎಲ್ಲವೂ ಅದ್ಭುತವಾಗಿವೆ. ಹಾಗಾಗಿ, ಅವರ ಬ್ಯಾಟಿಂಗ್ ಬಗ್ಗೆ ನನಗೆ ಎಳ್ಳಷ್ಟೂ ಚಿಂತೆಯಿಲ್ಲ,’’ ಎಂದಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್​ ಆಡಿದ ನಂತರ ಕೊಹ್ಲಿ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ, ಅವರ ಅನುಪಸ್ಥಿತಿಯಲ್ಲಿ ಭಾರತ ಹೇಗೆ ಆಡಲಿದೆಯೆನ್ನುವುದು ತಮಗಿರುವ ಯೋಚನೆಯಾಗಿದೆ ಎಂದು ವಾನ್ ಹೇಳಿದ್ದಾರೆ.

‘‘ನನಗಿರುವ ಯೋಚನೆಯೆಂದರೆ, ಮೊದಲ ಟೆಸ್ಟ್ ಆಡಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಅವರಿಲ್ಲದೆ ಭಾರತ ಮೂರು ಟೆಸ್ಟ್​​ಗಳನ್ನು ಆಡಬೇಕಿದೆ. ನನಗಿರುವ ಚಿಂತೆಯೆಂದರೆ ಅದು. ಅವರು ಎದುರಾಳಿಗಳ ಮೇಲೆ ಭಾರೀ ಪ್ರಭಾವ ಬೀರಿರುವ ಆಟಗಾರ. ಅವರಿಲ್ಲದೆ ಭಾರತದ ಬ್ಯಾಟಿಂಗ್ ದುರ್ಬಲಗೊಳ್ಳಲಿದೆ, ಆ ಸ್ಥಿತಿಯನ್ನು ಟೀಮ್ ಇಂಡಿಯಾ ಹೇಗೆ ನಿಭಾಯಿಸಲಿದೆ ಎನ್ನು

ಮೊಸೆಸ್ ಹೆನ್ರಿಕೆ ಹಿಡಿದ ಅದ್ಭುತ ಕ್ಯಾಚ್

ವುದು ನನ್ನ ಯೋಚನೆ,’’ ಎಂದು ವಾನ್ ಹೇಳಿದ್ದಾರೆ.

‘‘ಕೊಹ್ಲಿ ಬ್ಯಾಟ್​ನಿಂದ ಶತಕಗಳು ಸಿಡಿಯಲಿವೆ. ಆ ಬಗ್ಗೆಯೂ ಯಾರೂ ಅನುಮಾನವಿಟ್ಟುಕೊಳ್ಳುವ ಅಗತ್ಯವಿಲ್ಲ. ರವಿವಾರದಂದು ಅವರು ಮಿಡ್​ವಿಕೆಟ್​ನಲ್ಲಿ ಮೊಸೆಸ್ ಹೆನ್ರಿಕೆ ಹಿಡಿದ ಅದ್ಭುತವಾದ ಕ್ಯಾಚಿಗೆ ಔಟಾದರು. ಅವರಿಂದ ಶತಕ ಖಚಿತ ಎಂದು ನಾನು ಭಾವಿಸಿದ್ದೆ. ಆದರೆ, ಆಗಲೇ ಹೇಳಿದಂತೆ ನನಗೆ ಅದರ ಬಗ್ಗೆ ಯೋಚನೆಯಿಲ್ಲ. ಅವರ ಬ್ಯಾಟ್​ನಿಂದ ಶತಕಗಳು ಬರಲಿವೆ. ಒಂದು ಬಂದರೆ ಸಾಕು, ಅದರೊಂದಿಗೆ 3-4 ಬರಲಿವೆ,’’ ಅಂತ ವಾನ್ ಹೇಳಿದ್ದಾರೆ.

‘‘ಕೆಲವು ಬ್ಯಾಟ್ಸ್​ಮನ್​ಗಳು ಫಾರ್ಮ್​ನಲ್ಲಿಲ್ಲದಿದ್ದರೆ, ಕೈಯಲ್ಲಿ ಬ್ಯಾಟ್ ಬದಲು ಟೂತ್​ಪಿಕ್ ಹಿಡಿದು ಬ್ಯಾಟ್​ ಮಾಡುತ್ತಿದ್ದಾರೇನೋ ಅಂತ ಭಾಸವಾಗುತ್ತದೆ. ಅದರೆ, ವಿರಾಟ್​ ಆಡುವುದನ್ನು ನೋಡುತ್ತಿದ್ದರೆ ಅವರು ಅಂಥ ಭಾವನೆ ಮೂಡುವುದಿಲ್ಲ. ಜನ ಒಂದಿಷ್ಟು ತಾಳ್ಮೆ ವಹಿಸಬೇಕು,’’ ಎಂದು ಕೊಹ್ಲಿ ಬಗ್ಗೆ ವಾನ್ ಭರವಸೆಯ ಮಾತುಗಳನ್ನಾಡಿದ್ದಾರೆ.

Published On - 7:10 pm, Mon, 30 November 20

ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?