ಕೊಹ್ಲಿಯ ನಾಯಕತ್ವ ನನಗಂತೂ ಅರ್ಥವಾಗುತ್ತಿಲ್ಲ: ಗೌತಮ್ ಗಂಭೀರ್

ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಹರಿ ಹಾಯ್ದಿದ್ದಾರೆ. ಕೊಹ್ಲಿ, ಬೌಲರ್​ಗಳನ್ನು ನಿಭಾಯಿಸುವಲ್ಲಿ ಎಡವಿರುವುದೇ ಭಾರತ ಒಂದು ದಿನದ ಪಂದ್ಯಗಳ ಸರಣಿ ಸೋಲಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಕೊಹ್ಲಿಯ ನಾಯಕತ್ವ ನನಗಂತೂ ಅರ್ಥವಾಗುತ್ತಿಲ್ಲ: ಗೌತಮ್ ಗಂಭೀರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2020 | 4:17 PM

ಆಸ್ಟ್ರೇಲಿಯಾ ವಿರುದ್ಧ50-ಓವರ್​ಗಳ ಸರಣಿಯಲ್ಲಿ ಭಾರತದ ಸವಾಲು ಯಾವುದೇ ಸವಾಲೊಡ್ಡದೆ ಅಂತ್ಯಗೊಂಡಿದೆ. ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯವನ್ನೂ ಸುಲಭವಾಗಿ ಸೋತ ಭಾರತ ಬುಧವಾರದಂದು ನಡೆಯುವ ಮೂರನೆ ಹಾಗೂ ಕೊನೆಯ ಪಂದ್ಯವನ್ನು ಔಪಚಾರಿಕತೆಗಾಗಿ ಆಡಲಿದೆ. ಭಾರತೀಯ ಬೌಲರ್​ಗಳು ಸತತ ಎರಡನೆ ಬಾರಿಯೂ ಅತಿಥೇಯ ಬ್ಯಾಟ್ಸ್​ಮನ್​ಗಳನ್ನು 370ಕ್ಕಿಂತ ಹೆಚ್ಚು ರನ್ ಗಳಿಸಲು ಬಿಟ್ಟಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ದೊಡ್ಡ ಮೊತ್ತಗಳನ್ನು ಬೆನ್ನಟ್ಟುವಾಗ ಜೊತೆಯಾಟಗಳು ಮುಖ್ಯವಾಗುತ್ತವೆ ಮತ್ತು ಮೇಲಿನ ಕ್ರಮಾಂಕದ ಆಟಗಾರರಲ್ಲಿ ಇಬ್ಬರು ಬಿರುಸಿನ ಆಟವಾಡಲೇಬೇಕಾಗುತ್ತದೆ. ಎರಡನೆ ಪಂದ್ಯದಲ್ಲಿ ಅಂಥ ಪ್ರಯತ್ನಗಳು ಕಂಡುಬಂದವಾದರೂ ಅವು ಸಾಕೆನಿಸಲಿಲ್ಲ.

ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಕೆಗಳು ಶುರವಾಗುತ್ತಿದ್ದಂತೆಯೇ, ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ನಡುವಿನ

ಜಸ್ಪ್ರೀತ್ ಬುಮ್ರಾ

ಕೋಳಿ ಜಗಳಕ್ಕೆ ನಾಂದಿ ಹಾಡಿದೆ. ಹಲವಾರು ವರ್ಷಗಳಿಂದ ಇವರಿಬ್ಬರ ನಡುವೆ ವಾದ-ವಿವಾದಗಳು ನಡೆಯುತ್ತಲೇ ಬಂದಿವೆ. ಕೊಹ್ಲಿಯನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಡದ ಗಂಭೀರ್, ಈ ಬಾರಿ ಅವರ ನಾಯಕತ್ವ ಮತ್ತು ಬೌಲರ್​ಗಳನ್ನು ನಿಭಾಯಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲ ಸ್ಪೆಲ್​ನಲ್ಲಿ ಕೇವಲ 2 ಓವರ್​ಗಳನ್ನು ಬೌಲ್ ಮಾಡಿಸಿ ಆಕ್ರಮಣದಿಂದ ಸರಿಸಿದ್ದು ಯಾಕೆ ಅಂತ ಅರ್ಥವಾಗಲಿಲ್ಲ, ಅದು ಕಳಪೆ ನಾಯಕತ್ವ ಎಂದು ಗಂಭೀರ್ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಗೌತಮ್ ಗಂಭೀರ್

‘‘ಬುಮ್ರಾ ಅವರಿಂದ ಕೇವಲ 2 ಓವರ್​ಗಳನ್ನು ಯಾಕೆ ಬೌಲ್ ಮಾಡಿಸಲಾಯಿತೆಂದು ನನಗೆ ಅರ್ಥವಾಗಲಿಲ್ಲ. ನನ್ನ ಪ್ರಾಮಾಣಿಕ ಆನಿಸಿಕೆ ಪ್ರಕಾರ ಅದು ಕಳಪೆ ನಾಯಕತ್ವ. 50 ಓವರ್​ಗಳ ಪಂದ್ಯಗಳಲ್ಲಿ ಸಾಮಾನ್ಯವಾಗಿ, ಟೀಮಿನ ಪ್ರಮುಖ ಬೌಲರ್​ನಿಂದ 4-3-3 ಓವರ್​ಗಳ ಸ್ಪೆಲ್​ನಲ್ಲಿ ಉಪಯೋಗಿಸಲಾಗುತ್ತದೆ. ಮೊದಲ ಸ್ಪೆಲ್​ನಲ್ಲಿ ಪ್ರಿಮೀಯರ್ ಬೌಲರ್​ನಿಂದ ಕನಿಷ್ಠ 4 ಓವರ್​ಗಳನ್ನು ಬೌಲ್ ಮಾಡಿಸಲೇಬೇಕು. ಎದುರಾಳಿ ಬ್ಯಾಟ್ಸ್​ಮನ್​ಗಳು ಬೌಲರ್​ಗಳ ಮಾರಣಹೋಮ ನಡೆಸುವ ಮನಸ್ಥಿತಿಯಲ್ಲಿದ್ದರೆ ಅವರನ್ನು ತಡೆಯಲು ಆರಂಭಿಕ ಓವರರಗಳಲ್ಲೇ ವಿಕೆಟ್​ಗಳನ್ನು ಪಡೆಯಬೇಕಾಗುತ್ತದೆ, ಆದರೆ ಕೊಹ್ಲಿ ತಮ್ಮ ನಂಬರ್​ ವನ್ ಬೌಲರ್​ನಿಂದ ಕೇವಲ 2 ಓವರ್ ಬೌಲ್ ಮಾಡಿಸಿ ದಾಳಿಯಿಂದ ಹಿಂದೆ ಸರಿಸುತ್ತಾರೆ. ನನಗಂತೂ ಅವರ ಯೋಜನೆ ಅರ್ಥವಾಗಲಿಲ್ಲ ಮತ್ತು ವಿವರಿಸಲೂ ಸಾಧ್ಯವಾಗುತ್ತಿಲ್ಲ. ರವಿವಾರದಂದು ಭಾರತ ಆಡಿದ್ದು ಟಿ20 ಪಂದ್ಯವಲ್ಲ. ನನ್ನ ಪ್ರಕಾರ ಇದು ಕಳಪೆ ನಾಯಕತ್ವವಲ್ಲದೆ ಮತ್ತೇನೂ ಅಲ್ಲ,’’ ಎಂದು ಪಂದ್ಯದ ನಂತರ ಕ್ರೀಡಾ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಗಂಭೀರ್ ಹೇಳಿದರು.

ಒಂದು ದಿನದ ಪಂದ್ಯಗಳಿಗೆ ಅರನೇ ಬೌಲರ್​ ರೂಪದಲ್ಲಿ ಮತ್ತೊಬ್ಬ ಆಲ್​ರೌಂಡರ್​ನ್ನು ಆರಿಸದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಸಹ ಪ್ರಮಾದವೆಸಗಿದೆ ಎಂದು ಗಂಭೀರ್ ಹೇಳಿದರು.

‘‘ಹಾರ್ದಿಕ್ ಪಾಂಡ್ಯ ಬೌಲ್ ಮಾಡಲಾರರು ಅಂತ ಗೊತ್ತಿದ್ದರೂ ಟೀಮಿನಲ್ಲಿ ಆರನೇ ಬೌಲರ್​ ಅಗಿ ಮತ್ತೊಬ್ಬ ಆಲ್​ರೌಂಡರ್​ನನ್ನು ಆರಿಸದಿರುವುದು ಆಯ್ಕೆ ಮಂಡಳಿ ಎಸಗಿರುವ ದೊಡ್ಡ ತಪ್ಪು. ಶಿವಮ್ ದುಬೆ, ವಾಷಿಂಗ್ಟನ್ ಸುಂದರ್ ಅವರು ಟೀಮಿನಲ್ಲಿಲ್ಲದಿರುವುದರಿಂದ ಯಾರು ಲಭ್ಯರಿದ್ದಾರೋ ಅವರನ್ನು ಆರನೇ ಬೌಲರ್​ ಆಗಿ ರವಿವಾರ ಆಡಿಸಬೇಕಿತ್ತು. ಒಬ್ಬ ಆಟಗಾರನ ಸಾಮರ್ಥ್ಯವನ್ನು ನೀವು ಗುರುತಿಸದೆ ಹೋದರೆ ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಏಗಬಲ್ಲ ಅಂತ ತಿಳಿಯುವುದು ಹೇಗೆ? ಅರನೇ ಬೌಲರ್, ಆಲ್​ರೌಂಡರ್​ರಗಳ ವಿಷಯವನ್ನು ಆಯ್ಕೆ ಮಂಡಳಿ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದಕರ. ಈ ವಿಷಯ ಮಂಡಳಿಯ ಸದಸ್ಯರು ಮತ್ತು ಟೀಮ್ ಇಂಡಿಯಾದ ಅಟಗಾರರಿಗೂ ಬಹಳ ದಿನಗಳ ಕಾಲ ನೋಯಿಸಲಿದೆ,’’ ಎಂದು ಗಂಭೀರ್ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?