Lionel Messi: ಫೈನಲಿಸಿಮಾ ಕಪ್ ಗೆದ್ದುಕೊಂಡ ಅರ್ಜೆಂಟಿನಾ: ಲಿಯೊನೆಲ್ ಮೆಸ್ಸಿ ವಿಶೇಷ ಸಾಧನೆ

Finalissima: ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡವು ಫೈನಲಿಸಿಮಾ ಕಪ್ ಗೆದ್ದುಕೊಂಡಿತು. ಏಳು ಬಾರಿಯ ಬ್ಯಾಲನ್‌ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿಗೆ ಇದು ಎರಡನೇ ಅಂತರರಾಷ್ಟ್ರೀಯ ಟ್ರೋಫಿ. ಈ ಮೂಲಕ ವಿಶೇಷ ಸಾಧನೆ ಮಾಡಿದರು.

Lionel Messi: ಫೈನಲಿಸಿಮಾ ಕಪ್ ಗೆದ್ದುಕೊಂಡ ಅರ್ಜೆಂಟಿನಾ: ಲಿಯೊನೆಲ್ ಮೆಸ್ಸಿ ವಿಶೇಷ ಸಾಧನೆ
Finalissima Cup
Follow us
| Updated By: Vinay Bhat

Updated on:Jun 03, 2022 | 9:15 AM

ಲಂಡನ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲಿಸಿಮಾದಲ್ಲಿ (Finalissima) ಬಲಿಷ್ಠ ಅರ್ಜೆಂಟಿನಾ ತಂಡವು, ಇಟಲಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದೆ. ಈ ಮೂಲಕ ಲಿಯೊನೆಲ್ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟಿನಾ ತಂಡವು ಫೈನಲಿಸಿಮಾ ಕಪ್ ಗೆದ್ದುಕೊಂಡಿತು. ಏಳು ಬಾರಿಯ ಬ್ಯಾಲನ್‌ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿಗೆ ಇದು ಎರಡನೇ ಅಂತರರಾಷ್ಟ್ರೀಯ ಟ್ರೋಫಿ. ಈ ಮೂಲಕ ವಿಶೇಷ ಸಾಧನೆ ಮಾಡಿದರು. 11 ತಿಂಗಳುಗಳ ಅಂತರದಲ್ಲಿ ಅವರ ನಾಯಕತ್ವದಲ್ಲಿ ಅರ್ಜೆಂಟಿನಾ ತಂಡವು ಈ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೇ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ (FIFA World Cup) ಜಯಿಸುವತ್ತ 34 ವರ್ಷದ ಮೆಸ್ಸಿ ಚಿತ್ತ ನೆಟ್ಟಿದ್ದಾರೆ.

ಫೈನಲಿಸಿಮಾಗೂ ಮೊದಲು ಅರ್ಜೆಂಟೀನಾ ರಾಷ್ಟ್ರೀಯ ತಂಡ ಮೆಸ್ಸಿ ನೇತೃತ್ವದಲ್ಲಿ ಪ್ರತಿಷ್ಠಿತ ಕೋಪಾ ಅಮೇರಿಕಾ ಟೂರ್ನಿಯ ಚಾಂಪಿಯನ್ ಆಗಿ ಮೆರೆದಿತ್ತು. ಮತ್ತೊಂದೆಡೆ ಕಳೆದ ವರ್ಷ ಇದೇ ಮೈದಾನದಲ್ಲಿ ಜಾರ್ಜಿಯೊ ಚಿಲ್ಲಿನಿ ಸಾರಥ್ಯದಲ್ಲಿ ಇಟಲಿ, ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರತಿಷ್ಠಿತ ಯೂರೋಪ್ ಪ್ರಶಸ್ತಿ ಗೆದ್ದಿತ್ತು.

ಇದನ್ನೂ ಓದಿ
Image
ಕಳಪೆ ಫಾರ್ಮ್​, ತಂಡದಿಂದ ಕೋಕ್.. ಐಪಿಎಲ್‌ನಲ್ಲೂ ಸೈಲೆಂಟ್, ಈಗ ಗಾಯದ ಸಮಸ್ಯೆ; ರಹಾನೆ ತಂಡಕ್ಕೆ ಮರಳುವುದು ಯಾವಾಗ?
Image
ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ! ಮುಂದೊಂದು ದಿನ ಅಖ್ತರ್ ದಾಖಲೆ ಮುರಿಯುತ್ತಾನೆ; ಬ್ರೆಟ್ ಲೀ
Image
French Open 2022: ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡುವ ರೋಹನ್ ಬೋಪಣ್ಣ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋಲು
Image
Shakib Al Hasan: ಬಾಂಗ್ಲಾದೇಶ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮರು ಆಯ್ಕೆ

ENG vs NZ, 1st Test: ಲಾರ್ಡ್​​ನಲ್ಲಿ ವಿಕೆಟ್​ಗಳ ಸುರಿಮಳೆ: ಮೊದಲ ದಿನವೇ ಪತನಗೊಂಡವು 17 ವಿಕೆಟ್ಸ್

ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡಕ್ಕೆ 28ನೇ ನಿಮಿಷದಲ್ಲಿ ಲಾಟೆರೊ ಮಾರ್ಟಿನೇಜ್ ಮೊದಲ ಗೋಲು ಕಾಣಿಕೆ ನೀಡಿದರು. ಈ ಗೋಲು ಗಳಿಕೆಯಲ್ಲಿ ಮೆಸ್ಸಿ ಕಾಲ್ಚಳಕವೂ ಇತ್ತು. ಗೋಲ್‌ ಪೋಸ್ಟ್ ಸನಿಹ ಅವರು ಕೊಟ್ಟ ಚುರುಕಿನ ಪಾಸ್ ಪಡೆದ ಮಾರ್ಟಿನೇಜ್ ಮಿಂಚಿದರು.  ಏಂಜೆಲ್ ಡಿ ಮಾರಿಯಾ (45+1ನಿ) ಮತ್ತು ಪಾಲೋ ದೈಬಲಾ (90+4) ಅವರು ತಲಾ ಒಂದು ಗೋಲು ಕಾಣಿಕೆ ನೀಡಿದರು.

ರಾಷ್ಟ್ರೀಯ ತಂಡದ ಪರ 161ನೇ ಪಂದ್ಯವನ್ನಾಡಿದ  34 ವರ್ಷದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ, 45ನೇ ಫೈನಲ್ ಪಂದ್ಯದಲ್ಲಿ 46 ಗೋಲಿನ ಕಾಣಿಕೆ ನೀಡಿದ್ದಾರೆ. 1993ರಲ್ಲಿ ದಿಗ್ಗಜ ಆಟಗಾರ ಮೆರಡೋನಾ ನಾಯಕತ್ವದಲ್ಲಿ ಅರ್ಜೆಂಟೀನಾ, ಕೊನೆಯದಾಗಿ ಫೈನಲಿಸಿಮಾ ಪ್ರಶಸ್ತಿ ಗೆದ್ದಿತ್ತು. ಅದಾದ ಬಳಿಕ ಮೆಸ್ಸಿ ನಾಯಕತ್ವದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:14 am, Fri, 3 June 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು