Neeraj Chopra: ಮೊದಲ ಭಾರತೀಯ: ಡೈಮಂಡ್‌ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

| Updated By: Vinay Bhat

Updated on: Aug 27, 2022 | 12:17 PM

ಇದೀಗ ಫಿನಿಕ್ಸ್​ನಂತೆ ಎದ್ದು ಬಂದಿರುವ ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ (Diamond League) ಅಗ್ರಸ್ಥಾನ ಪಡೆದು ಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ.

Neeraj Chopra: ಮೊದಲ ಭಾರತೀಯ: ಡೈಮಂಡ್‌ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ
Follow us on

ಇತ್ತೀಚೆಗಷ್ಟೆ ಬರ್ಮಿಂಗ್​ಹ್ಯಾಮ್​ನಲ್ಲಿ ಮುಕ್ತಾಯಗೊಂಡ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (Commonwealth Games) ಭಾರತದ ಸ್ಟಾರ್ ಕ್ರೀಡಾಪಟು ಜಾವೆಲಿನ್​ ದೊರೆ ನೀರಜ್​ ಚೋಪ್ರಾ (Neeraj Chopra) ಇಂಜುರಿಯ ಕಾರಣದಿಂದ ಹೊರಗುಳಿಬೇಕಾಯಿತು. ಆದರೆ, ಇದೀಗ ಫಿನಿಕ್ಸ್​ನಂತೆ ಎದ್ದು ಬಂದಿರುವ ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ (Diamond League) ಅಗ್ರಸ್ಥಾನ ಪಡೆದು ಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ ಇವರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಾಮನ್​ವೆಲ್ತ್​ ಗೇಮ್ಸ್​ನಿಂದ ಕೂಡ ಹೊರಗುಳಿಯ ಬೇಕಾಯಿತು. ಇದೀಗ ಸ್ವಿಸ್​​ನ ಡೈಮಂಡ್​ ಲೀಗ್​ನಲ್ಲಿ 89.08 ಮೀಟರ್​ ದೂರ ಜಾವೆಲಿನ್​ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿಕೊಂಡಿದ್ದಾರೆ.

ಈ ಗೆಲುವಿನೊಂದಿಗೆ ನೀರಜ್ ಚೋಪ್ರಾ ಸೆಪ್ಟೆಂಬರ್ 7 ಮತ್ತು 8 ರಂದು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, 2023 ರ ವಿಶ್ವ ಚಾಂಪಿಯನ್‌ಶಿಪ್‌ಗೆ ನೀರಜ್ ಅರ್ಹತೆ ಪಡೆದಿದ್ದಾರೆ. ಅವರ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮೂಡಿಬಂತು. ಜೇಕಬ್‌ ವಾಡ್ಲೆಚ್‌ (85.88 ಮೀ.) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) ಮೂರನೇ ಸ್ಥಾನ ಗಳಿಸಿದರು.

 

ಇದನ್ನೂ ಓದಿ
Asia Cup 2022: ಏಷ್ಯಾಕಪ್ 2022ಕ್ಕೆ ಇಂದು ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನ್ ಮುಖಾಮುಖಿ
Asia Cup 2022: ಶಾಹೀನ್ ಶಾ ಆಫ್ರಿದಿ ಬಳಿಕ ಪಾಕ್ ತಂಡದ ಮತ್ತೊಬ್ಬ ಬೌಲರ್ ಏಷ್ಯಾಕಪ್​ನಿಂದ ಔಟ್..!
Asia Cup 2022: ಹಾಲಿ ಚಾಂಪಿಯನ್ ಆಗಿದ್ದರೂ ಭಾರತ 1986 ರ ಏಷ್ಯಾಕಪ್ ಬಹಿಷ್ಕರಿಸಿದ್ಯಾಕೆ?
Rishabh Pant-Urvashi Rautela: ‘ನಿಮ್ಮ ಗೌರವ ಉಳಿಸಿದ್ದೇನೆ’; ಪಂತ್​ಗೆ ಮತ್ತೊಂದು ಪಂಚ್ ನೀಡಿದ ನಟಿ ಊರ್ವಶಿ..!

ಗೆದ್ದ ಬಳಿಕ ಮಾತನಾಡಿದ ನೀರಜ್, “ಈ ಫಲಿತಾಂಶದಿಂದ ಖುಷಿಯಾಗಿದೆ. ಗಾಯದಿಂದ ಚೇತರಿಸಿಕೊಂಡು 89 ಮೀಟರ್​ ಎಸೆದಿರುವುದು ಸಂತಸ ತಂದಿದೆ. ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಬೇಕಾಯಿತು. ಇದು ನನ್ನನ್ನು ಸ್ವಲ್ಪ ಆತಂಕಕ್ಕೀಡು ಮಾಡಿತ್ತು. ಇದೀಗ ನಾನು ವಾಪಸ್​ ಆಗಿದ್ದೇನೆಎಂದು ಹೇಳಿದರು.

ಈ ಹಿಂದೆ ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಅವರು ಎರಡನೇ ಸ್ಥಾನ ಪಡೆದದ್ದು, ಡೈಮಂಡ್‌ ಲೀಗ್‌ನಲ್ಲಿ ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು. ಅವರು 2012 ರಲ್ಲಿ ನ್ಯೂಯಾರ್ಕ್‌ನಲ್ಲಿ ಮತ್ತು 2014 ರಲ್ಲಿ ದೋಹಾದಲ್ಲಿ ನಡೆದದ ಲೀಗ್​ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. 2015 ರಲ್ಲಿ ಶಾಂಘೈ ಮತ್ತು ಯುಜೀನ್ ಲೀಗ್​ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದೀಗ ನೀರಜ್​ ಲೀಗ್​ನಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Published On - 8:07 am, Sat, 27 August 22