ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಸೆಮಿಫೈನಲ್ ಪ್ರವೇಶ!

ಮೊದಲ ಗೇಮನ್ನು​ 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್​ಗಳನ್ನು 21-16 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು.

ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಸೆಮಿಫೈನಲ್ ಪ್ರವೇಶ!
ಪಿವಿ ಸಿಂಧು
ಅರುಣ್​ ಕುಮಾರ್​ ಬೆಳ್ಳಿ Edited By:

Updated on: Mar 20, 2021 | 5:43 PM

ಭಾರತದ ಏಸ್ ಮಹಿಳಾ ಶಟ್ಲರ್ ಪಿವಿ ಸಿಂಧು ಗೆಲುವಿನ ಸ್ಪರ್ಶವನ್ನು ಪುನಃ ಕಂಡುಕೊಂಡಿದ್ದಾರೆ. ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸಿಂಧು ಇಂದು ಜಪಾನಿನ ಅಗ್ರಮಾನ್ಯ ಆಟಗಾರ್ತಿ ಅಕನೆ ಯಮಗುಚಿ ಅವರನ್ನು ಸೋಲಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿದರು.

ಮೊದಲ ಗೇಮನ್ನು​ 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್​ಗಳನ್ನು 21-16, 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು. ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಸಿಂಧು ಎರಡನೇ ಬಾರಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.

‘ಅವರ ವಿರುದ್ಧ ಬಹಳ ದಿನಗಳ ನಂತರ ಆಡಿದೆ. ಕೊನೆಯ ಬಾರಿ ನಾವಿಬ್ಬರು ಎದುರಾಳಿಗಳಾಗಿದ್ದು 2019 ನಲ್ಲಿರಬೇಕು. ಅವರೂ ಭಾರೀ ಪ್ರಮಾಣದ ತಯಾರಿ ಮಾಡಿಕೊಂಡಿದ್ದಿರಬಹುದು. ಇವತ್ತಿನ ಪಂದ್ಯ ಕಠಿಣ ಮತ್ತು ಸುದೀರ್ಘವಾಗಿತ್ತು,’ ಎಂದು ಪಂದ್ಯದ ನಂತರ ಸಿಂಧು ಹೇಳಿದರು.

‘ಮೊದಲ ಗೇಮ್​ನಲ್ಲಿ ನಾನು ಬಹಳ ತಪ್ಪುಗಳನ್ನು ಮಾಡಿದೆ ಮತ್ತು ನನ್ನ ಸ್ಮ್ಯಾಶ್​ಗಳು ಕೊರ್ಟ್​ ಹೊರಗಡೆ ಬೀಳುತ್ತಿದ್ದವು. ಎರಡನೇ ಗೇಮ್​ನಲ್ಲಿ ಡ್ರೀಫ್ಟ್​ ನನ್ನ ಪರವಾಗಿತ್ತು. ಬಹಳಷ್ಟು ಱಲಿಗಳನ್ನು ನಾವು ಆಡಿದೆವು, ಎರಡನೇ ಗೇಮನ್ನು ನಾನು ಗೆಲ್ಲಲೇಬೇಕಿತ್ತು.’

‘ಮೂರನೇ ಗೇಮ್ ನಿರ್ಣಾಯಕವಾಗಿತ್ತು ಮತ್ತು ನನ್ನ ಕೋಚ್ ನೀಡಿದ ಸಲಹೆಗಳು ಅಮೂಲ್ಯವಾಗಿದ್ದವು. ನಾನು ಶಟಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅವರು ಹೇಳಿದರು. ಪ್ರತಿಯೊಂದು ಪಾಯಿಂಟ್ ಬಹಳ ಮುಖ್ಯವಾಗಿತ್ತು. ಕೊನೆಯ ಗೇಮ್​ನಲ್ಲಿ ಇಬ್ಬರಿಗೂ ಗೆಲ್ಲುವ ಅವಕಾಶವಿತ್ತು. ನಾನು ಗೆದ್ದಿದ್ದು ಅತೀವ ಸಂತಸ ಮೂಡಿಸಿದೆ,’ ಎಂದು ಸಿಂಧು ಹೇಳಿದರು.

ಸೆಮಿಫೈನಲ್​ನಲ್ಲಿ ಅವರು 11ನೇ ಶ್ರೇಯಾಂಕದ ಥೈಲ್ಯಾಂಡ್​ನ ಪಾಂಪವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದು ಅವರ ವಿರುದ್ದ 4-1 ಗೆಲುವಿನ ಲೀಡ್ ಹೊಂದಿದ್ದಾರೆ.

ಇದನ್ನೂ ಓದಿ: ನಾನು ಕೊವಿಡ್-19 ಭೀತಿಯಿಂದ ರಿಟೈರಾಗುತ್ತಿದ್ದೇನೆ, ಆಟದಿಂದಲ್ಲ: ಸಿಂಧೂ | Sindhu and her father deny her retirement rumours

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us