Russia Ukraine war: ಪುಟಿನ್‌ಗೆ ನೀಡಿದ್ದ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ವಿಶ್ವ ಟೇಕ್ವಾಂಡೋ ನಿರ್ಧಾರ

Vladimir Putin Black Belt: ಈ ಯುದ್ಧದ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.

Russia Ukraine war: ಪುಟಿನ್‌ಗೆ ನೀಡಿದ್ದ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ವಿಶ್ವ ಟೇಕ್ವಾಂಡೋ ನಿರ್ಧಾರ
Vladimir Putin
Follow us
TV9 Web
| Updated By: Vinay Bhat

Updated on: Mar 01, 2022 | 12:21 PM

ರಷ್ಯಾ ಮತ್ತು ಉಕ್ರೇನ್​ ನಡುವಣ ಯುದ್ಧ (Russia Ukraine war) ಶಾಂತಿ ಸಂಧಾನದ ಸಭೆ ನಂತರವೂ ಮುಂದುವರಿದಿದ್ದು, ಎಲ್ಲೆಡೆ ಯುದ್ಧದ ಭೀತಿಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಪುಟ್ಟ ಉಕ್ರೇನ್​ ಮೇಲೆ ರಷ್ಯಾ ಎಲ್ಲ ಕಡೆಗಳಿಂದಲೂ ದಾಳಿ ಮಾಡಿ ರಕ್ತ ಚರಿತ್ರೆ ಬರೆಯುತ್ತಿದೆ. ರಷ್ಯಾದ ಈ ಆಕ್ರಮಣಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಸ್ವತಃ ರಷ್ಯಾನ್ನರೇ ಯುದ್ದ ನಿಲ್ಲಿಸಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಯುದ್ಧದ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ (Black Belt) ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ. ವಿಶ್ವ ಟೇಕ್ವಾಂಡೋ ತನ್ನ ಧ್ಯೇಯವಾಕ್ಯವನ್ನು ‘ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾದುದು’ ಎಂದು ಉಲ್ಲೇಖಿಸಿದೆ.

ವಿಶ್ವ ಟೇಕ್ವಾಂಡೋ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕ್ರಮವನ್ನು ಖಂಡಿಸಿದ್ದು, ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿ ಇದಾಗಿದೆ. ಕ್ರೀಡೆಯ ಗೌರವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಇದು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ನವೆಂಬರ್ 2013 ರಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಲಾದ ಗೌರವ 9ನೇ ಡಾನ್ ಬ್ಲಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದಿಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಒಗ್ಗಟ್ಟಿನಿಂದ ಯಾವುದೇ ರಷ್ಯನ್ ಅಥವಾ ಬೆಲರೂಸಿಯನ್ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಈವೆಂಟ್‌ಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ ಅಥವಾ ನುಡಿಸಲಾಗುವುದಿಲ್ಲ. ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಯೂನಿಯನ್ ರಷ್ಯಾ ಮತ್ತು ಬೆಲಾರಸ್‌ನಲ್ಲಿ ಟೇಕ್ವಾಂಡೋ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.

ಪುಟಿನ್ ವೃತ್ತಿಪರವಾಗಿ 11ನೇ ವಯಸ್ಸಿನಲ್ಲಿ ಸ್ಯಾಂಬೊದಲ್ಲಿ ತೊಡಗಿಕೊಂಡವರು. 13ನೇ ವಯಸ್ಸಿನಲ್ಲಿ ಜೂಡೋದಲ್ಲಿ ಆಸಕ್ತಿ ಹೊಂದಿದ್ದರು. ನಂತರ ಸದಾ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕರಾಟೆ ಬ್ಲ್ಯಾಕ್ ಬೆಲ್ಟ್ ಆಗಿರುವ ಪುಟಿನ್ ಅಂತರರಾಷ್ಟ್ರೀಯ ಜುಡೋ ಫೆಡರೇಶನ್ ಗೌರವಾಧ್ಯಕ್ಷ ಸ್ಥಾನದಲ್ಲಿದ್ದರು. ಇದು ವಿಶ್ವದ ಕರಾಟೆ ಪಟುಗಳು ಅತ್ಯಂತ ಗೌರವದಿಂದ ಕಾಣುವ ಹುದ್ದೆಯಾಗಿದೆ. ಆದರೆ ಉಕ್ರೇನ್ ಜೊತೆ ಯುದ್ಧ ಹೂಡಿದ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಿರುವುದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

ವಿಶ್ವಕಪ್​​ನಲ್ಲಿ ರಷ್ಯಾ ಜೊತೆ ಆಡಲ್ಲ:

ಈ ವರ್ಷ ನಡೆಯಲಿರುವ ವಿಶ್ವಕಪ್‌ ಫುಟ್ ಬಾಲ್‌ ಟೂರ್ನಿಯ ಪ್ಲೇ ಆಫ್ ಹಂತದಲ್ಲಿ ರಷ್ಯಾ ವಿರುದ್ಧ ಸೆಣಸುವ ಪರಿಸ್ಥಿತಿ ನಿರ್ಮಾಣವಾದರೆ ಇದನ್ನು ತಿರಸ್ಕರಿಸುವುದಾಗಿ ಜೆಕ್‌ ಗಣರಾಜ್ಯ ಫುಟ್ ಬಾಲ್‌ ಸಂಸ್ಥೆ ತಿಳಿಸಿದೆ. ಸ್ವೀಡನ್‌ ಮತ್ತು ಪೋಲೆಂಡ್‌ ಫುಟ್ ಬಾಲ್‌ ಸಂಸ್ಥೆಗಳು ಈಗಾಗಲೇ ಉಕ್ರೇನ್‌ ಮೇಲಿನ ದಾಳಿಯನ್ನು ಖಂಡಿಸಿ ರಷ್ಯಾ ವಿರುದ್ಧ ಆಡುವುದಿಲ್ಲ ಎಂದು ತಿಳಿಸಿವೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಪೋಲೆಂಡ್ ಮಾರ್ಚ್ 24 ರಂದು ಮಾಸ್ಕೋದಲ್ಲಿ ರಷ್ಯಾದೊಂದಿಗೆ 2022 ರ ವಿಶ್ವಕಪ್ ಪ್ಲೇ-ಆಫ್ ಅನ್ನು ಆಡುವುದಿಲ್ಲ ಎಂದು ಪೋಲಿಷ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರು ಘೋಷಿಸಿದ್ದಾರೆ.

IND vs SL Test Series: ರಹಾನೆ-ಪೂಜಾರ ಜಾಗದಲ್ಲಿ ಆಡಲಿರುವ ಆಟಗಾರರ ಹೆಸರು ಬಹಿರಂಗ: ಯಾರು ಗೊತ್ತೇ?

Virat Kohli: 100ನೇ ಟೆಸ್ಟ್​ಗೆ ವಿರಾಟ್ ಕೊಹ್ಲಿ ಭರ್ಜರಿ ಅಭ್ಯಾಸ: ವೈರಲ್ ಆಗುತ್ತಿದೆ ಪ್ಯಾಕ್ಟೀಸ್ ಫೋಟೋಗಳು

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ