ಉಕ್ರೇನ್​​ಗೆ ಇಂದು ಯುರೋಪಿಯನ್​ ಒಕ್ಕೂಟದ ಸದಸ್ಯತ್ವ ಸಿಗುವ ಸಾಧ್ಯತೆ; ಅರ್ಜಿ ಪರಿಶೀಲನೆ ಪ್ರಕ್ರಿಯೆ ಪ್ರಾರಂಭ

ಉಕ್ರೇನ್​​ಗೆ ಇಂದು ಯುರೋಪಿಯನ್​ ಒಕ್ಕೂಟದ ಸದಸ್ಯತ್ವ ಸಿಗುವ ಸಾಧ್ಯತೆ; ಅರ್ಜಿ ಪರಿಶೀಲನೆ ಪ್ರಕ್ರಿಯೆ ಪ್ರಾರಂಭ
ಇಯು ಸದಸ್ಯತ್ವಕ್ಕಾಗಿ ನಿನ್ನೆ ಅರ್ಜಿ ಸಲ್ಲಿಸಿದ್ದ ಉಕ್ರೇನ್​ ಅಧ್ಯಕ್ಷ

ಉಕ್ರೇನ್​ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡುವಂತೆ ಅಧ್ಯಕ್ಷ ಝೆಲೆನ್ಸ್ಕಿ ಅರ್ಜಿಯನ್ನು ವೈಯಕ್ತಿಕವಾಗಿ ಸಲ್ಲಿಸಿದ್ದಲ್ಲದೆ, ಅಲ್ಲಿನ ಪ್ರಧಾನಮಂತ್ರಿ ಡಿಮಿಟ್ರೋ ಶ್ಮಿಗಲ್ ಮತ್ತು ಸಂಸತ್ತಿನ ಮುಖ್ಯಸ್ಥ ವರ್ಕೋವ್ನಾ ರಾಡಾ ಅವರೊಂದಿಗೆ ಸೇರಿ ಜಂಟಿ ಮನವಿಯನ್ನೂ ಕಳಿಸಿದ್ದರು. 

TV9kannada Web Team

| Edited By: Lakshmi Hegde

Mar 01, 2022 | 12:33 PM

ಯುರೋಪಿಯನ್​ ಒಕ್ಕೂಟದಲ್ಲಿ (European Union) ಉಕ್ರೇನ್​ಗೆ ಸದಸ್ಯತ್ವ ನೀಡುವ ಸಂಬಂಧ ಇಂದು ನಿರ್ಧಾರ ಹೊರಬೀಳಲಿದೆ. ಯುರೋಪಿಯನ್​ ಒಕ್ಕೂಟದಲ್ಲಿ ಈಗಾಗಲೇ 27 ರಾಷ್ಟ್ರಗಳಿದ್ದು, ತಮಗೂ ಸದಸ್ಯತ್ವ ನೀಡಬೇಕು ಎಂದು ಉಕ್ರೇನ್​ ಮನವಿ ಮಾಡಿತ್ತು. ನಿನ್ನೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಂದು ಅರ್ಜಿಯನ್ನೂ ತುಂಬಿ ಸಹಿ ಮಾಡಿದ್ದರು. ಈ ಅರ್ಜಿಯನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಇಂದು ಯುರೋಪಿಯನ್ ಒಕ್ಕೂಟ ಉಕ್ರೇನ್​ಗೆ ತನ್ನ ಸದಸ್ಯತ್ವ ನೀಡಲಿದೆ ಎಂದು ಇಯು ಮೂಲಗಳಿಂದ ವರದಿಯಾಗಿದೆ.

ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಸಹಿ ಮಾಡಿದ ಅರ್ಜಿಯನ್ನು, ಯುರೋಪಿಯನ್​ ಒಕ್ಕೂಟಕ್ಕೆ ಫ್ರಾನ್ಸ್​​ನ ಶಾಶ್ವತ ಪ್ರತಿನಿಧಿಯಾಗಿರುವ ಲೆಗ್ಲಿಸ್-ಕೋಸ್ಟಾ ಅವರಿಗೆ ಹಸ್ತಾಂತರ ಮಾಡಲಾಗಿತ್ತು. ನಂತರ ಒಕ್ಕೂಟದ ಪ್ರೆಸಿಡೆನ್ಸಿ ಆಫ್​ ಕೌನ್ಸಿಲ್​ ಎದುರು ಮಂಡಿಸಲಾಯಿತು. ಈ ಕೌನ್ಸಿಲ್​​ನ ಅಧ್ಯಕ್ಷತೆಯನ್ನು ಸದ್ಯ ಫ್ರಾನ್ಸ್​ ವಹಿಸಿದ್ದು, ಅರ್ಜಿ ಪರಿಶೀಲನೆ, ಚರ್ಚೆ ಪ್ರಕ್ರಿಯೆ ಶುರುವಾಗಿದೆ. ಈ ಬಗ್ಗೆ ಯುರೋಪಿಯನ್​ ಒಕ್ಕೂಟದ ಮತ್ತು ಯುರೋಪಿಯನ್​ ಪರಮಾಣು ಶಕ್ತಿ ಸಮುದಾಯದ ಉಕ್ರೇನ್​ ಮಿಶನ್​ ಮುಖ್ಯಸ್ಥ ವಿಸೆವೊಲೊಡ್ ಚೆಂಟ್ಸೊವ್  ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಉಕ್ರೇನ್​ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡುವಂತೆ ಅಧ್ಯಕ್ಷ ಝೆಲೆನ್ಸ್ಕಿ ಅರ್ಜಿಯನ್ನು ವೈಯಕ್ತಿಕವಾಗಿ ಸಲ್ಲಿಸಿದ್ದಲ್ಲದೆ, ಅಲ್ಲಿನ ಪ್ರಧಾನಮಂತ್ರಿ ಡಿಮಿಟ್ರೋ ಶ್ಮಿಗಲ್ ಮತ್ತು ಸಂಸತ್ತಿನ ಮುಖ್ಯಸ್ಥ ವರ್ಕೋವ್ನಾ ರಾಡಾ ಅವರೊಂದಿಗೆ ಸೇರಿ ಜಂಟಿ ಮನವಿಯನ್ನೂ ಕಳಿಸಿದ್ದರು.  ಖಂಡಿತ ನಮಗೆ ಸದಸ್ಯತ್ವ ಸಿಗಲಿದೆ. ಯುರೋಪಿಯನ್​ ಒಕ್ಕೂಟದ ಸದಸ್ಯತ್ವ ಪಡೆಯಲು ನಮ್ಮ ದೇಶಕ್ಕೆ ಅರ್ಹತೆ ಇದೆ ಎಂದು ಹೇಳಿದ್ದರು.  ಇನ್ನು ರಷ್ಯಾ ಉಕ್ರೇನ್​ ಮೇಲೆ ಆಕ್ರಮಣ ಮಾಡುತ್ತಿದ್ದಂತೆ, ಯುರೋಪಿಯನ್ ಒಕ್ಕೂಟದಲ್ಲಿದ್ದ ಅನೇಕ ರಾಷ್ಟ್ರಗಳು ಈ ಬಗ್ಗೆ ಧ್ವನಿ ಎತ್ತಿದ್ದವು. ಉಕ್ರೇನ್​ಗೆ ಇಯು ಸದಸ್ಯತ್ವ ನೀಡಬೇಕು ಎಂಬ ಮನವಿಯನ್ನು ಮಾಡಿದ್ದವು. ಯುರೋಪಿಯನ್ ಒಕ್ಕೂಟವೆಂದರೆ, ಒಟ್ಟಾರೆ ವಿಶ್ವ ಆರ್ಥಿಕತೆಯ ಒಂದು ಘಟಕ. ಇದರಲ್ಲಿ ಸದ್ಯ 27 ರಾಷ್ಟ್ರಗಳಿವೆ.

ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಪಡೆದರೆ ಲಾಭವೇನು?

ಯುರೋಪಿಯನ್ ಒಕ್ಕೂಟವೆಂಬುದು ಒಂದು ಆರ್ಥಿಕ ಘಟಕ. ಹೀಗಾಗಿ ಈ ಒಕ್ಕೂಟದ ಸದಸ್ಯತ್ವ ಪಡೆಯುವ ರಾಷ್ಟ್ರಕ್ಕೆ ಸಹಜವಾಗಿಯೇ ಒಂದು ಆರ್ಥಿಕ ಭದ್ರತೆ ಸಿಗುತ್ತದೆ. ಆ ರಾಷ್ಟ್ರದ ಜಿಡಿಪಿ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ. ಅಷ್ಟೇ ಅಲ್ಲ, ವೇತನ, ಪಿಂಚಣಿಗಳ ಮೌಲ್ಯ ಏರಿಕೆಯಾಗುತ್ತದೆ. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ದೇಶದ ಆಂತರಿಕ ಮಾರುಕಟ್ಟೆ ಅಭಿವೃದ್ಧಿಯಾಗಿ, ದೇಶೀಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ. ಕಾರ್ಮಿಕರು, ಸರಕು ಸೇವೆಗಳು ಮತ್ತು ಬಂಡವಾಳಗಳ ಮುಕ್ತಚಾಲನೆಗೆ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Video: ನೀವೆಲ್ಲ ಸಾಯುತ್ತೀರಿ; ಬೀದಿಬೀದಿಯಲ್ಲಿ ನಿಂತ ರಷ್ಯಾ ಸೈನಿಕರಿಗೆ ಉಕ್ರೇನ್​ ನಾಗರಿಕರಿಂದ ಬೈಗುಳ

Follow us on

Related Stories

Most Read Stories

Click on your DTH Provider to Add TV9 Kannada