ಪಾಕಿಸ್ತಾನದ ಶಾದಾಬ್ ಖಾನ್ ಭಾರತದ ಹಾರ್ದಿಕ್ ಪಾಂಡ್ಯರಂಥ ಪ್ರೊಫೈಲ್ ಹೊಂದಿರಬೇಕು: ರಮೀಜ್ ರಾಜಾ
ಪಾಕಿಸ್ತಾನದ ಟೀಮಿನಲ್ಲಿ ಆಲ್-ರೌಂಡರ್ ಶಾದಾಬ್ ಖಾನ್ ಅವರ ಪಾತ್ರವನ್ನು ರಾಜಾ ಪ್ರಶ್ನಿಸಿದ್ದಾರೆ. ಕಾರ್ಡಿಫ್ನ ಸೋಫಿಯಾ ಗಾರ್ಡನ್ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಶಾದಾಬ್ ಅವರು 43 ಎಸೆತಗಳಲ್ಲಿ 30 ರನ್ ಗಳಿಸಿದರು.
ಗುರುವಾರದಂದು ಕಾರ್ಡಿಫ್ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಇಂಗ್ಲೆಂಡ್, ಬಾಬರ್ ಆಜಂ ನೇತೃತ್ವದ ಪಾಕಿಸ್ತಾನವನ್ನು ತಂಡವನ್ನು ಬಗ್ಗು ಬಡಿದ ನಂತರ ಏಷ್ಯನ್ ತಂಡ ತನ್ನ ದೇಶದ ಮಾಜಿ ಆಟಗಾರರಿಂದ ತೀವ್ರ ಟೀಕೆಗೊಳಗಾಗಿದೆ. ಪಾಕಿಸ್ತಾನವನ್ನು 35.2 ಓವರ್ಗಳಲ್ಲಿ ಕೇವಲ 141 ರನ್ಮೊತ್ತಕ್ಕೆ ಔಟ್ ಮಾಡಿದ ಆಂಗ್ಲರ ತಂಡ ಗೆಲುವಿಗೆ ಬೇಕಿದ್ದ ರನ್ಗಳನ್ನು 1 ವಿಕೆಟ್ ಕಳೆದುಕೊಂಡು 22ನೇ ಓವರ್ನಲ್ಲೇ ಗಳಿಸಿತು. ಪಾಕಿಸ್ತಾನದ ಬ್ಯಾಟಿಂಗ್ ಪ್ರದರ್ಶನವನ್ನು ಪಾಕಿಸ್ತಾನದ ಮಾಜಿ ಆರಂಭ ಆಟಗಾರ ರಮೀಜ್ ರಾಜಾ ಅವರು ಕಳಪೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಟೀಮಿನಲ್ಲಿ ಆಲ್-ರೌಂಡರ್ ಶಾದಾಬ್ ಖಾನ್ ಅವರ ಪಾತ್ರವನ್ನು ರಾಜಾ ಪ್ರಶ್ನಿಸಿದ್ದಾರೆ. ಕಾರ್ಡಿಫ್ನ ಸೋಫಿಯಾ ಗಾರ್ಡನ್ನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಶಾದಾಬ್ ಅವರು 43 ಎಸೆತಗಳಲ್ಲಿ 30 ರನ್ ಗಳಿಸಿದರು. ಅವರ ಆಟದ ಧೋರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜಾ ಅವರು ಶಾದಾಬ್ ಭಾರತದ ಹಾರ್ದಿಕ್ ಪಾಂಡ್ಯ ಅವರಂಥ ಪ್ರೊಫೈಲ್ ಹೊಂದಿರಬೇಕು ಎಂದು ಹೇಳಿದ್ದಾರೆ.
‘ಶಾದಾಬ್ ಅವರ ಬ್ಯಾಟಿಂಗ್ ವೈಖರಿ ನನಗೆ ಅರ್ಥವಾಗುತ್ತಿಲ್ಲ. ಬ್ಯಾಟ್ ಮಾಡಲ ಕ್ರೀಸ್ಗೆ ಬಂದಾಗ ಅವರ ಪಾತ್ರ ಏನಾಗಿರುತ್ತದೆ? ಅವರು ಇನ್ನಿಂಗ್ಸ್ ಕಟ್ಟುವ ರೀತಿಯಲ್ಲಿ ಆಡಬೇಕೋ ಅಥವಾ ಪವರ್ ಹಿಟ್ಟಿಂಗ್ ಮಾಡಬೇಕೋ? ಮೊದಲ ಒಡಿಐನಲ್ಲಿ ಅವರು ಆರಾಮವಾಗಿ ಅಡಬಹುದಿತ್ತು. ಪಾಕಿಸ್ತಾನದ ಬಳಿ ಸಾಕಷ್ಟು ಓವರ್ಗಳಿದ್ದವು. ಶಾದಾಬ್ ಅವರು ಹಾರ್ದಿಕ್ ಪಾಂಡ್ಯ ಅವರಂಥ ಪ್ರೊಫೈಲ್ ಹೊಂದಿರಬೇಕು. ಭಾರತದ ಆಟಗಾರ ಪವರ್ ಹಿಟ್ಟರ್ ಆಗಿದ್ದಾರೆ ಮತ್ತು ಅತಿ ವೇಗವಾಗಿ ಅರ್ಧ ಶತಕಗಳನ್ನು ಬಾರಿಸುತ್ತಾರೆ. ಇದು ಶಾದಾಬ್ ತಮ್ಮ ವೃತ್ತಿಬದುಕಿನ ಉಚ್ಚ್ರಾಯ ಸ್ಥಿತಿಯಾಗಿದೆ. ಆದರೆ ಅವರಿಂದ ಹಾರ್ದಿಕ್ನಂಥ ಬ್ಯಾಟಿಂಗ್ ಪ್ರದರ್ಶನಗಳು ಬರುತ್ತಿಲ್ಲ. ಅವರ ಬ್ಯಾಟಿಂಗ್ ಬಹಳಷ್ಟು ಸುಧಾರಿಬೇಕಿದೆ. ಪಾಕಿಸ್ತಾನದ ಬ್ಯಾಟಿಂಗ್ ಲೈನಪ್ನಲ್ಲಿ ಅವರಿಗೆ ಒಬ್ಬ ಪವರ ಹಿಟ್ಟರ್ ಆಗಿ ಜಾಸ್ತಿ ಮಹತ್ವವಿದೆ,’ ಎಂದು ತಮ್ಮ ಯೂಟ್ಯೂಬ್ ಚ್ಯಾನೆಲ್ನಲ್ಲಿ ರಾಜಾ ಹೇಳಿದ್ದಾರೆ.
ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೀಡಿದ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನಗಳೆರಡನ್ನೂ ರಾಜಾ ತೀವ್ರವಾಗಿ ಟೀಕಿಸಿದರು.
‘ಪಂದ್ಯದ ಯಾವುದೇ ಹಂತದಲ್ಲಿ ಪಾಕಿಸ್ತಾನ ಒಂದು ಹೋರಾಡಲು ಯೋಗ್ಯವೆನಿಸುವ ಮೊತ್ತ ಗಳಿಸೀತು ಅಂತ ಅನಿಸಲೇ ಇಲ್ಲ. ಯಾರೊಬ್ಬರಲ್ಲೂ ಹೋರಾಟದ ಮನೋಭಾವ ಕಾಣಲೇ ಇಲ್ಲ. ಪಾಕಿಸ್ತಾನದ ಶಕ್ತಿಯೆಂದರೆ ಅದರ ಬೌಲಿಂಗ್. ಇಡೀ ವಿಶ್ವಕ್ಕೆ ಅದರ ಬೌಲಿಂಗ್ ಪರಾಕ್ರಮದ ಬಗ್ಗೆ ಗೊತ್ತಿದೆ. ಆದರೆ ಈ ಪಂದ್ಯವನ್ನು ಅವರು 9 ವಿಕೆಟ್ಳಿಂದ ಸೋತರು. ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಮೇಲೆ ಅವರು ಒತ್ತಡ ಹೇರಲೇ ಇಲ್ಲ. ದುರ್ಬಲ ಎಸೆತಗಳನ್ನು ಎಸೆಯುತ್ತಾ ಆಂಗ್ಲರ ಕೆಲಸವನ್ನು ಹಗುರ ಮಾಡಿದರು. ಫಾರ್ಮ್ ಕಳೆದುಕೊಂಡ ಆಟಗಾರರಿಗೆ ಅದನ್ನು ಮರಳಿ ಪಡುಯವಂತೆ ಮಾಡವುದು ಪಾಕಿಸ್ತಾನ ತಂಡದ ಸ್ಪೆಶಾಲಿಟಿ ಆಗಿರುವಂತಿದೆ,’ ಎಂದು ರಮೀಜ್ ರಾಜಾ ಖಾರವಾಗಿ ಹೇಳಿದರು.
ಇದನ್ನೂ ಓದಿ: Indian cricketers house: ಇದು ಯಾರ ಮನೆ ಹೇಳ್ತೀರಾ? ಸುಳಿವು, ಕ್ರಿಕೆಟಿಗರ ಐಷಾರಾಮಿ ಮನೆ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..