ಟೀಂ ಇಂಡಿಯಾ ಪರ ಈ ಮೂವರು ಆಟಗಾರರು ಟಿ-20 ವಿಶ್ವಕಪ್ ಆಡಿದರೆ ಭಾರತಕ್ಕೆ ಗೆಲುವು ಖಚಿತ; ಯುವರಾಜ್ ಸಿಂಗ್

ಏಕದಿನ ಮತ್ತು ಟಿ 20 ಗಳಲ್ಲಿ ರಿಷಭ್ ಮತ್ತು ಹಾರ್ದಿಕ್ ಹೆಚ್ಚು ಸಮಯ ಒಟ್ಟಿಗೆ ಆಡಿದರೆ, ಅವರು ಅಸಾಧಾರಣ ಜೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ.

ಟೀಂ ಇಂಡಿಯಾ ಪರ ಈ ಮೂವರು ಆಟಗಾರರು ಟಿ-20 ವಿಶ್ವಕಪ್ ಆಡಿದರೆ ಭಾರತಕ್ಕೆ ಗೆಲುವು ಖಚಿತ; ಯುವರಾಜ್ ಸಿಂಗ್
ಯುವರಾಜ್ ಸಿಂಗ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 09, 2021 | 8:22 PM

ಭಾರತೀಯ ಕ್ರಿಕೆಟ್ ತಂಡವು ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ವಿಶೇಷವಾಗಿ ನಾವು ಏಕದಿನ ಮತ್ತು ಟಿ 20 ಯಂತಹ ಕಡಿಮೆ ಸ್ವರೂಪಗಳ ಬಗ್ಗೆ ಮಾತನಾಡಿದರೆ, ಒಬ್ಬ ಆಟಗಾರ ಈ ತಂಡದ ಹೆಮ್ಮೆ ಎನಿಸಿಕೊಂಡಿದ್ದಾರೆ. ತಂಡದಲ್ಲಿ ಪವರ್-ಹಿಟ್ಟರ್ಗಳ ವಿಷಯಕ್ಕೆ ಬಂದರೆ, ಭಾರತದ ಮಾಜಿ ದಂತಕಥೆ ಯುವರಾಜ್ ಸಿಂಗ್ ಅವರ ದೃಷ್ಟಿಯಲ್ಲಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಮೂವರು ಆಟಗಾರರು ಭಾರತೀಯ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ಒಟ್ಟಿಗೆ ಆಡಿದರೆ, ಒಟ್ಟಾಗಿ ಅವರು ಕ್ರಿಕೆಟ್ ಪಿಚ್‌ನಲ್ಲಿ ಸಾಕಷ್ಟು ಅಬ್ಬರಿಸಬಹುದು ಎಂದು ಮಾಜಿ ಎಡಗೈ ಆಲ್‌ರೌಂಡರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂರು ಹೆಸರುಗಳು – ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ.

ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತಿದೊಡ್ಡ ಪಂದ್ಯ ವಿಜೇತರಾಗಿದ್ದ ಯುವರಾಜ್ ಸಿಂಗ್ ಅವರಂತಹ ಸ್ಟೈಲಿಶ್ ಎಡಗೈ, ಅಷ್ಟೇ ವಿನಾಶಕಾರಿ ಬ್ಯಾಟ್ಸ್‌ಮನ್​ನನ್ನು ಭಾರತ ತಂಡದಲ್ಲಿ ದೀರ್ಘಕಾಲದವರೆಗೆ ಕಂಡುಬಂದಿಲ್ಲ. ಯುವರಾಜ್ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ, ಆದರೆ ಈ ಮೂವರು ಬ್ಯಾಟ್ಸ್‌ಮನ್‌ಗಳು ತಂಡದಲ್ಲಿ ಆ ಸ್ಥಾನವನ್ನು ತುಂಬಾಲ್ಲಿದ್ದಾರೆ ಎಂದು ಯುವರಾಜ್ ಅಭಿಪ್ರಾಯವಾಗಿದೆ.

ಈ ಮೂವರು ಪಂದ್ಯದ ಹಾದಿಯನ್ನು ಬದಲಾಯಿಸಬಹುದು 2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಮಾಜಿ ಭಾರತೀಯ ಸೂಪರ್‌ಸ್ಟಾರ್, ಟೈಮ್ಸ್ ಆಫ್ ಇಂಡಿಯಾ ಎಂಬ ಇಂಗ್ಲಿಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟೀಮ್ ಇಂಡಿಯಾದ ಪಂದ್ಯ ವಿಜೇತ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದರು. ನಾವು ಮಿಡಲ್ ಆರ್ಡರ್​ನಲ್ಲಿ ಕೆಲವು ಉತ್ತಮ ಹಿಟ್ಟರ್‌ಗಳನ್ನು ಹೊಂದಿದ್ದೇವೆ. ಏಕದಿನ ಮತ್ತು ಟಿ 20 ಗಳಲ್ಲಿ ರಿಷಭ್ ಮತ್ತು ಹಾರ್ದಿಕ್ ಹೆಚ್ಚು ಸಮಯ ಒಟ್ಟಿಗೆ ಆಡಿದರೆ, ಅವರು ಅಸಾಧಾರಣ ಜೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಂತರ ಜಡೇಜಾ ಬರುತ್ತಾರೆ. ಆದ್ದರಿಂದ ಈ ಮೂವರು ಆಟಗಾರರು ಪಂದ್ಯದ ದಾಳವನ್ನು ಯಾವಾಗ ಬೇಕಾದರೂ ತಿರುಗಿಸಬಹುದು. ಜಡೇಜಾ ಏಕದಿನ ಮತ್ತು ಟಿ 20 ಕ್ರಿಕೆಟ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ.

2007 ರ ಟಿ 20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್, ಎಂ.ಎಸ್. ಧೋನಿ ಅವರೊಂದಿಗಿನ ಸಹಭಾಗಿತ್ವವನ್ನು ನೆನಪಿಸಿಕೊಂಡರು. ನನ್ನ ಮತ್ತು ಧೋನಿಯಂತೆ ಬಲ ಮತ್ತು ಎಡಗೈ ಸಂಯೋಜನೆಯು ಯಾವಾಗಲೂ ಅಪಾಯಕಾರಿ. ಅದನ್ನು ನಾನು ರಿಷಭ್, ಹಾರ್ದಿಕ್ ಮತ್ತು ಜಡೇಜಾ 5, 6 ಮತ್ತು 7 ನೇ ಸ್ಥಾನದಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ.

ಈ ಮೂವರನ್ನು ಟಿ 20 ವಿಶ್ವಕಪ್‌ನಲ್ಲಿ ನೋಡಬಹುದೇ? ಈ ಮೂವರು ಆಟಗಾರರಲ್ಲಿ ಇಬ್ಬರು, ರಿಷಭ್ ಮತ್ತು ಜಡೇಜಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದಾರೆ. ಅಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ ಮತ್ತು ಮುಂದಿನ ತಿಂಗಳಿನಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯನ್ನು ಆಡಲಿದ್ದಾರೆ. ಅದೇ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ಮತ್ತೊಂದು ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಮತ್ತು ಟಿ 20 ಸರಣಿಗಳನ್ನು ಆಡಲಿದೆ. ನಿಸ್ಸಂಶಯವಾಗಿ, ಟಿ 20 ವಿಶ್ವಕಪ್ ಮುಂದಿಟ್ಟು ನೋಡುವಾಗ, ತಂಡವು ಈ ಮೂವರನ್ನು ಒಟ್ಟಿಗೆ ಆಡಿಸುವುದು ಅನುಮಾನವಾಗಿದೆ. ಆದರೆ ಮುಂಬರುವ ಕಾಲದಲ್ಲಿ, ಈ ಮೂವರು ಒಟ್ಟಾಗಿ ಸಾಕಷ್ಟು ಆಟ ಆಡಬಹುದು ಎಂಬ ನಿರೀಕ್ಷೆ ಇದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ