AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಇನ್ನೆರೆಡು ವರ್ಷ ಚೆನ್ನೈ ತಂಡವನ್ನ ಮುನ್ನಡೆಸಲಿದ್ದಾರೆ ಮಹೇಂದ್ರ!

IPL 2021: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಫ್ರಾಂಚೈಸಿ ಶುಭಸುದ್ದಿಯನ್ನ ನೀಡಿದೆ. ಅದೇ, ಧೋನಿ ಇನ್ನೆರೆಡು ವರ್ಷ ಐಪಿಎಲ್ನಲ್ಲಿ ಆಡಲಿದ್ದಾರೆ ಅನ್ನೋದು.

IPL 2021: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಇನ್ನೆರೆಡು ವರ್ಷ ಚೆನ್ನೈ ತಂಡವನ್ನ ಮುನ್ನಡೆಸಲಿದ್ದಾರೆ ಮಹೇಂದ್ರ!
CSK
TV9 Web
| Updated By: ಪೃಥ್ವಿಶಂಕರ|

Updated on: Jul 09, 2021 | 6:26 PM

Share

ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಧೋನಿ.. ಧೋನಿ ಅಂದ್ರೆ ಯಲ್ಲೋ ಜೆರ್ಸಿ.. ಹೀಗಾಗಿಯೇ ಧೋನಿಯನ್ನ ಚೆನ್ನೈ ಫ್ಯಾನ್ಸ್ ಪ್ರೀತಿಯಿಂದ ತಲೈವಾ ಅಂತ ಕರೀತಾರೆ. ಆದ್ರೆ, ಧೋನಿ ಪಾಲಿಗೆ ಇದೇ ಕೊನೇ ಐಪಿಎಲ್ ಅನ್ನೋ ಮಾತುಗಳು ಕೇಳಿಬಂದಿದ್ವು.. ಆದ್ರೀಗ ಸಿಎಸ್ಕೆ ಫ್ರಾಂಚೈಸಿ, ಚೆನ್ನೈ ತಂಡದ ಅಭಿಮಾನಿಗಳಿಗೆ ಶುಭ ಸುದ್ದಿಯನ್ನ ನೀಡಿದೆ. ಐಪಿಎಲ್ 14ನೇ ಆವೃತ್ತಿಯ ಮೊದಲಾರ್ಧದಲ್ಲಿ ಎಂ.ಎಸ್.ಧೋನಿ, ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರೋದಂತೂ ಸುಳ್ಳಲ್ಲ. ಯಾಕಂದ್ರೆ ಆಡಿದ್ದ 7ಪಂದ್ಯಗಳ ಪೈಕಿ ಧೋನಿ 4ಪಂದ್ಯದಲ್ಲಿ ಬ್ಯಾಟಿಂಗ್ ಸಿಕ್ಕಿತ್ತು. ಆದ್ರೆ, ಗೇಮ್ ಫಿನಿಶರ್ ಧೋನಿ ಗಳಿಸಿದ್ದು ಮಾತ್ರ ಕೇವಲ 37ರನ್.

ಎಂ.ಎಸ್.ಧೋನಿ ಈ ಪ್ರದರ್ಶನದಿಂದ ಅಭಿಮಾನಿಗಳು ಬೇಸರಗೊಂಡಿರೋದಂತೂ ಸುಳ್ಳಲ್ಲ. ಅಲ್ಲದೇ, ಮಾಹಿ ಪಾಲಿಗೆ ಇದೇ ಕೊನೆಯ ಐಪಿಎಲ್ ಅನ್ನೋ ಮಾತುಗಳು ಕೇಳಿಬಂದಿದ್ವು.. ಆದ್ರೀಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಫ್ರಾಂಚೈಸಿ ಶುಭಸುದ್ದಿಯನ್ನ ನೀಡಿದೆ. ಅದೇ, ಧೋನಿ ಇನ್ನೆರೆಡು ವರ್ಷ ಐಪಿಎಲ್ನಲ್ಲಿ ಆಡಲಿದ್ದಾರೆ ಅನ್ನೋದು.

ವಯಸ್ಸು 40 ಆದ್ರೂ ಮಹೇಂದ್ರ ಇನ್ನೂ ಫಿಟ್..! ಯಸ್. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಧೋನಿ ಕಳಪೆ ಬ್ಯಾಟಿಂಗ್ ಮಾಡಿದ್ದಾರೆ ನಿಜ. ಆದ್ರೆ, ಚೆನ್ನೈ ಸೂಪರ್ ಕಿಂಗ್ಸ್ ಧೋನಿಯಂತ ನಾಯಕ ಮತ್ತೆ ಸಿಗೋದು ಕನಸಿನ ಮಾತು. ಸಿಎಸ್ಕೆ ಮೂರು ಬಾರಿ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿರೋ ಮಾಹಿ, ಈ ಬಾರಿಯ ಐಪಿಎಲ್ನಲ್ಲೂ ತಂಡವನ್ನ ಅದ್ಭುತವಾಗಿ ಮುನ್ನಡೆಸಿದ್ದಾರೆ. ಈಗಾಗಲೇ 10ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರೋ ಚೆನ್ನೈ, ಪ್ಲೇಆಫ್ಗೆ ಎಂಟ್ರಿಕೊಡೋದು ಪಕ್ಕಾ ಆಗಿದೆ..

ಧೋನಿಯ ಮುಂದಿನ ಐಪಿಎಲ್ ಕರಿಯರ್ ಕುರಿತು ಸಿಎಸ್ಕೆ ತಂಡದ ಸಿಒಎ ಕಾಶಿ ವಿಶ್ವನಾಥನ್ ಮಾತನಾಡಿದ್ದು, ಧೋನಿ ಕನಿಷ್ಠ ಇನ್ನೆರೆಡು ವರ್ಷ ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಮಾಹಿ ಶೇ.100ರಷ್ಟು ಫಿಟ್ ಆಗಿದ್ದಾರೆ. ಅಷ್ಟೇ ಕಠಿಣ ಅಭ್ಯಾಸವನ್ನ ನಡೆಸ್ತಿದ್ದಾರೆ. ಅವರು ತಂಡಕ್ಕೆ ಅತ್ಯಂತ ಮೌಲ್ಯಯುತ ಹಾಗೂ ಪರಿಣಾಮಕಾರಿ ಆಟಗಾರ ಅಂತ, ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.