Paris Olympics 2024: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ

Paris Olympics 2024: ಒಲಿಂಪಿಕ್ಸ್​ ಆಯೋಜಕರು ಕಾಂಡೋಮ್​​ಗಳನ್ನು ನೀಡುವ ಟ್ರೆಂಡ್ ಶುರುವಾಗಿದ್ದು 1988 ರಲ್ಲಿ. ಸಿಯೋಲ್​ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಏಡ್ಸ್ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿತ್ತು. ಈ ಬಗ್ಗೆ ಜಾಗೃತಿ ಮೂಡಿಲು ಈ ಅಭಿಯಾನ ಶುರುವಾಗಿತ್ತು. ಈ ಅಭಿಯಾನವು ಇದೀಗ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅಲ್ಲದೆ ಪ್ರತಿ ಒಲಿಂಪಿಕ್ಸ್​ನಲ್ಲೂ ಆಯೋಜಕರು ಕಾಂಡೋಮ್​ಗಳನ್ನು ವಿತರಿಸುತ್ತಿದ್ದಾರೆ.

Paris Olympics 2024: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ
condoms
Edited By:

Updated on: Jul 17, 2024 | 3:12 PM

Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್​ ಸಜ್ಜಾಗಿ ನಿಂತಿದೆ. ಜುಲೈ 26 ರಿಂದ ಶುರುವಾಗಲಿರುವ ಒಲಿಂಪಿಯಾಡ್​ನಲ್ಲಿ ಈ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹೀಗೆ ಕ್ರೀಡೆಗಾಗಿ ಆಗಮಿಸುವ ಅಥ್ಲೀಟ್​ಗಳಿಗೆ 3 ಲಕ್ಷ ಕಾಂಡೋಮ್​ಗಳನ್ನು ವಿತರಿಸಲು ಒಲಿಂಪಿಕ್ಸ್ ಆಯೋಜಕರು ಮುಂದಾಗಿದ್ದಾರೆ.

ಒಲಿಂಪಿಕ್ಸ್​ನಲ್ಲಿ ರತಿಕ್ರೀಡೆಯು ಸಾಮಾನ್ಯ. ಮುಖ್ಯವಾಗಿ ಕೆಲ ಕ್ರೀಡಾಪಟುಗಳು ಒತ್ತಡವನ್ನು ನಿವಾರಿಸಿಕೊಳ್ಳಲು ಸೆಕ್ಸ್ ಮೊರೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಲೈಂಗಿಕ ಕಾಯಿಲೆಗಳಿಂದ ಪಾರಾಗಲು ಅಥ್ಲೀಟ್​ಗಳಿಗೆ ಕಾಂಡೋಮ್​ಗಳನ್ನು ನೀಡಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ನಿಷೇಧ:

2021 ರ ಟೋಕಿಯೋ ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳ ಲೈಂಗಿಕ ಕ್ರಿಯೆಗೆ ನಿರ್ಬಂಧ ವಿಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಕೊರೋನಾ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನ್ಯೋನ್ಯತೆ ಮೇಲೆ ನಿಷೇಧ ಹೇರಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಕಟ್ಟುಪಾಡಿಲ್ಲ ಎಂದು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.

ಕಾಂಡೋಮ್ ಟ್ರೆಂಡ್ ಶುರುವಾಗಿದ್ದು ಹೇಗೆ?

ಒಲಿಂಪಿಕ್ಸ್​ನಲ್ಲಿ ಕಾಂಡೋಮ್​​ಗಳನ್ನು ನೀಡುವ ಟ್ರೆಂಡ್ ಶುರುವಾಗಿದ್ದು 1988 ರಲ್ಲಿ. ಸಿಯೋಲ್​ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಏಡ್ಸ್ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿತ್ತು. ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವಾಗಿ ಒಲಿಂಪಿಕ್ಸ್​ನಲ್ಲಿ ಕಾಂಡೋಮ್​ಗಳನ್ನು ವಿತರಿಸಲಾಗಿತ್ತು.

ಅಂದು ಸುಮಾರು 8,500 ಕಾಂಡೋಮ್‌ಗಳನ್ನು ಸರಬರಾಜು ಮಾಡಲಾಗಿತ್ತು. ಇದಾದ ಬಳಿಕ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಎಂಬುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಅದರಂತೆ ಪ್ರತಿ ವರ್ಷ ಕಾಂಡೋಮ್​ಗಳ ಬೇಡಿಕೆ ಕೂಡ ಹೆಚ್ಚಾಗ ತೊಡಗಿದೆ. ಇದಕ್ಕೆ ಸಾಕ್ಷಿ ಸಿಡ್ನಿ ಒಲಿಂಪಿಕ್ಸ್.

ಕಾಂಡೋಮ್​ಗಳ ಬೇಡಿಕೆ:

2000 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಸುಮಾರು 70 ಸಾವಿರ ಕಾಂಡೋಮ್​ಗಳನ್ನು ವಿತರಿಸಲಾಗಿತ್ತು. ಆದರೆ ಆ ಬಳಿಕ ಮತ್ತಷ್ಟು ಕಾಂಡೋಮ್​ಗಳಿಗಾಗಿ ಬೇಡಿಕೆ ಕಂಡು ಬಂದಿದೆ. ಇದರಿಂದಾಗಿ ಸಂಘಟಕರು ಹೆಚ್ಚುವರಿ 20,000 ಕಾಂಡೋಮ್‌ಗಳನ್ನು ಆರ್ಡರ್ ಮಾಡಬೇಕಾಯಿತು.

2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳಿಗೆ 450,000 ಕಾಂಡೋಮ್‌ಗಳನ್ನು ಪೂರೈಸಲಾಗಿತ್ತು. ಹಾಗೆಯೇ 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ  ಸೆಕ್ಸ್​ ನಿಷೇಧದ ಹೊರತಾಗಿಯೂ ಸಂಘಟಕರು ಸುಮಾರು 150,000 ಕಾಂಡೋಮ್‌ಗಳನ್ನು ವಿತರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Paris Olympics 2024: ಸಮ್ಮರ್ ಮತ್ತು ವಿಂಟರ್ ಒಲಿಂಪಿಕ್ಸ್ ನಡುವಣ ವ್ಯತ್ಯಾಸವೇನು?

ಡೆಂಟಲ್ ಡ್ಯಾಮ್​ ವಿತರಣೆ:

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವವರಿಗೆ 2 ಲಕ್ಷ ಪುರುಷ ಕಾಂಡೋಮ್​ಗಳನ್ನು ವಿತರಿಸಲಾಗುತ್ತದೆ. ಹಾಗೆಯೇ 20 ಸಾವಿರ ಮಹಿಳಾ ಕಾಂಡೋಮ್​ಗಳನ್ನು ಪೂರೈಸಲಿದ್ದಾರೆ. ಇದರ ಜೊತೆ ಒರಲ್ ಸೆಕ್ಸ್​ಗಾಗಿ 10 ಸಾವಿರ ಡೆಂಟಲ್ ಡ್ಯಾಮ್ (ಬಾಯಿಗೆ ಇರಿಸುವ ಪಟ್ಟಿ)​ ಸಹ ಲಭ್ಯವಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಅದರಂತೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸುಮಾರು 3 ಲಕ್ಷ ಕಾಂಡೋಮ್​ಗಳನ್ನು ವಿತರಿಸಲು ಆಯೋಜಕರು ಮುಂದಾಗಿದ್ದಾರೆ.

 

 

Published On - 10:18 am, Wed, 17 July 24