Paris Olympics 2024: ಭಾರತೀಯ ಕ್ರೀಡಾಪಟುಗಳಿಗಾಗಿ 8.5 ಕೋಟಿ ರೂ. ದೇಣಿಗೆ ನೀಡಿದ ಬಿಸಿಸಿಐ
BCCI: ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ ಭಾರತದ ಸ್ಪರ್ಧಿಗಳು ಕ್ರೀಡಾ ಗ್ರಾಮಕ್ಕೆ ತೆರಳುತ್ತಿದ್ದಾರೆ. ಈ ನಡುವೆ ಭಾರತೀಯ ಕ್ರೀಡಾಪಟುಗಳ ಮನೋಬಲ ಹೆಚ್ಚಿಸಿರುವ ಬಿಸಿಸಿಐ, ಭಾರತೀಯ ಒಲಿಂಪಿಕ್ ಸಂಸ್ಥೆಗೆ 8.5 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದೆ. ಈ ವಿಚಾರನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಿಸಿದ್ದಾರೆ.

2024ರ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮಹಾ ಕ್ರೀಡಾಕೂಟಕ್ಕೆ ಪ್ಯಾರಿಸ್ ಆತಿಥ್ಯವಹಿಸುತ್ತಿದೆ. ಈ ಕ್ರೀಡಾಕೂಟದಲ್ಲಿ ಬರೋಬ್ಬರಿ 206 ದೇಶಗಳಿಂದ 10,500 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಭಾರತದ 117 ಕ್ರೀಡಾಪಟುಗಳು ಕೂಡ ಸೇರಿದ್ದಾರೆ. ಈಗಾಗಲೇ ಭಾರತದ ಸ್ಪರ್ಧಿಗಳು ಕ್ರೀಡಾ ಗ್ರಾಮಕ್ಕೆ ತೆರಳುತ್ತಿದ್ದಾರೆ. ಈ ನಡುವೆ ಭಾರತೀಯ ಕ್ರೀಡಾಪಟುಗಳ ಮನೋಬಲ ಹೆಚ್ಚಿಸುವ ಕೆಲಸ ಮಾಡಿರುವ ಬಿಸಿಸಿಐ, ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) 8.5 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದೆ. ಈ ವಿಚಾರನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಜಯ್ ಶಾ ಮಾಹಿತಿ
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಜಯ್ ಶಾ, ‘2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ನಮ್ಮ ಅತ್ಯುತ್ತಮ ಕ್ರೀಡಾಪಟುಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಈ ಅಭಿಯಾನಕ್ಕಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ 8.5 ಕೋಟಿ ರೂಪಾಯಿ ನೀಡುತ್ತಿದ್ದೇವೆ ಎಂದಿದ್ದಾರೆ.
I am proud to announce that the @BCCI will be supporting our incredible athletes representing #India at the 2024 Paris Olympics. We are providing INR 8.5 Crores to the IOA for the campaign.
To our entire contingent, we wish you the very best. Make India proud! Jai Hind! 🇮🇳…
— Jay Shah (@JayShah) July 21, 2024
ಈ ಹಿಂದೆಯೂ ಬಿಸಿಸಿಐ ಸಹಾಯ
ಇದಕ್ಕೂ ಮುನ್ನ ಬಿಸಿಸಿಐ 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಆಟಗಾರರನ್ನು ಗೌರವಿಸಿತ್ತು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಬಿಸಿಸಿಐ 1 ಕೋಟಿ ರೂ. ಬಹುಮಾನ ನೀಡಿದ್ದರೆ, ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮತ್ತು ರವಿ ದಹಿಯಾ ಅವರಿಗೆ ತಲಾ 50 ಲಕ್ಷ ರೂ. ಬಹುಮಾನ ನೀಡಿತ್ತು. ಹಾಗೆಯೇ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು, ಲೊವ್ಲಿನಾ ಬೊರ್ಗೊಹೈನ್, ಬಜರಂಗ್ ಪುನಿಯಾ ಅವರಿಗೆ ತಲಾ 25 ಲಕ್ಷ ರೂ. ಬಹುಮಾನ ನೀಡಿತ್ತು. ಇದಲ್ಲದೇ ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ರೂ. ಬಹುಮಾನ ಘೋಷಿಸಿತ್ತು.
117 ಭಾರತೀಯ ಅಥ್ಲೀಟ್ಸ್
ಈ ಬಾರಿ ಭಾರತದಿಂದ 117 ಆಟಗಾರರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಕ್ರೀಡಾ ಸಚಿವಾಲಯವು 140 ಸಹಾಯಕ ಸಿಬ್ಬಂದಿಯನ್ನು ಸಹ ತಂಡದೊಂದಿಗೆ ತೆರಳಲು ಅನುಮೋದಿಸಿದೆ. ಇದರಲ್ಲಿ ಕ್ರೀಡಾ ಅಧಿಕಾರಿಗಳು ಸಹ ಸೇರಿದ್ದಾರೆ. ಸರ್ಕಾರಿ ವೆಚ್ಚದಲ್ಲಿ 72 ಸಹಾಯಕ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ. ಕಳೆದ ಬಾರಿಯ ಅಂದರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 119 ಆಟಗಾರರು ಭಾಗವಹಿಸಿದ್ದು, ಪಟ್ಟು 7 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಗೆದ್ದ ಐತಿಹಾಸಿಕ ಚಿನ್ನದ ಪದಕವೂ ಇದರಲ್ಲಿ ಸೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 pm, Sun, 21 July 24
