Lakshya-Team India
ಪ್ಯಾರಿಸ್ ಒಲಿಂಪಿಕ್ಸ್ನ 9ನೇ ದಿನವು ಭಾರತದ ಪಾಲಿಗೆ ನಿರ್ಣಾಯಕ. ಏಕೆಂದರೆ ಭಾನುವಾರ ನಡೆಯಲಿರುವ ಎರಡು ನಿರ್ಣಾಯಕ ಪಂದ್ಯಗಳಲ್ಲಿ ಭಾರತೀಯರು ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಭಾರತ ತಂಡವು ಹಾಕಿಯಲ್ಲಿ ಕ್ವಾರ್ಟರ್ ಫೈನಲ್ ಆಡುತ್ತಿದ್ದರೆ, ಪುರುಷರ ಬ್ಯಾಡ್ಮಿಂಟನ್ನಲ್ಲಿ ಲಕ್ಷ್ಯ ಸೇನ್ ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಅಂದರೆ ಈ ಎರಡು ಸ್ಪರ್ಧೆಗಳಲ್ಲಿ ಭಾರತವು ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲಬೇಕಿದ್ದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕು. ಅದರಂತೆ ಬ್ರಿಟನ್ ತಂಡವನ್ನು ಸೋಲಿಸಿ ಭಾರತ ಹಾಕಿ ತಂಡವು ಸೆಮಿಫೈನಲ್ಗೇರುವುದನ್ನು ಎದುರು ನೋಡಬೇಕಿದೆ. ಹಾಗೆಯೇ ಸೆಮಿಫೈನಲ್ನಲ್ಲಿ ಡೆನ್ಮಾರ್ಕ್ ಆಟಗಾರ ವಿಕ್ಟರ್ ಆಕ್ಸೆಲ್ಸೆನ್ ಅವರ ವಿರುದ್ಧ ಲಕ್ಷ್ಯ ಸೇನ್ ಗೆಲುವು ಸಾಧಿಸಿದರೆ ಬೆಳ್ಳಿ ಪದಕಕ್ಕೆ ಕೊರೊಳೊಡ್ಡುವುದು ಖಚಿತವಾಗಲಿದೆ. ಹೀಗಾಗಿಯೇ ಇಂದು ನಡೆಯಲಿರುವ ಹಾಕಿ ಮತ್ತು ಬ್ಯಾಡ್ಮಿಂಟನ್ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿದೆ.
ಇನ್ನು ಹಾಕಿ, ಬ್ಯಾಡ್ಮಿಂಟನ್ ಅಲ್ಲದೆ ಭಾರತೀಯ ಆಟಗಾರರು ಭಾನುವಾರ ಶೂಟಿಂಗ್, ಅಥ್ಲೆಟಿಕ್ಸ್, ಗಾಲ್ಫ್, ಬಾಕ್ಸಿಂಗ್ ಸ್ಪರ್ಧೆಗಳಲ್ಲೂ ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಆಗಸ್ಟ್ 4 ರ ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ:
- 12:30 PM – ಗಾಲ್ಫ್ – ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ ಸುತ್ತು 4 – ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್
- 12:30 PM – ಶೂಟಿಂಗ್ – 25 ಮೀ ರಾಪಿಡ್ ಫೈರ್ ಪಿಸ್ತೂಲ್ ಪುರುಷರ ಕ್ವಾಲ್-ಸ್ಟೇಜ್ 1 – ಅನೀಶ್ ಭನ್ವಾಲಾ, ವಿಜಯವೀರ್ ಸಿಧು
- 1 PM – ಶೂಟಿಂಗ್ – ಸ್ಕೀಟ್ ಮಹಿಳೆಯರ ಅರ್ಹತಾ ಸುತ್ತು 2 – ಮಹೇಶ್ವರಿ ಚೌಹಾಣ್, ರೈಜಾ ಧಿಲ್ಲೋನ್
- 1:30 PM – ಹಾಕಿ – ಪುರುಷರ ಕ್ವಾರ್ಟರ್ ಫೈನಲ್ಸ್ – ಭಾರತ vs ಗ್ರೇಟ್ ಬ್ರಿಟನ್
- 1:35 PM – ಅಥ್ಲೆಟಿಕ್ಸ್ – ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಸುತ್ತು 1 – ಪಾರುಲ್ ಚೌಧರಿ
- 2:30 PM – ಅಥ್ಲೆಟಿಕ್ಸ್ – ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತು – ಜೆಸ್ವಿನ್ ಆಲ್ಡ್ರಿನ್
- 3:02 PM – ಬಾಕ್ಸಿಂಗ್ – ಮಹಿಳೆಯರ 75 ಕೆಜಿ ಕ್ವಾರ್ಟರ್ ಫೈನಲ್ಸ್ – ಲೊವ್ಲಿನಾ ಬೊರ್ಗೊಹೈನ್ vs ಲಿ ಕಿಯಾನ್ (ಚೀನಾ)
- 3:30 PM – ಬ್ಯಾಡ್ಮಿಂಟನ್ – ಪುರುಷರ ಸೆಮಿಫೈನಲ್ – ಲಕ್ಷ್ಯ ಸೇನ್ vs ವಿಕ್ಟರ್ ಆಕ್ಸೆಲ್ಸೆನ್ (ಡೆನ್ಮಾರ್ಕ್)
- 3:35 PM – ಸೈಲಿಂಗ್ – ಪುರುಷರ ಡಿಂಗಿ ರೇಸ್ – ವಿಷ್ಣು ಸರವಣನ್
- 4:30 PM – ಶೂಟಿಂಗ್ – 25 ಮೀ ರಾಪಿಡ್ ಫೈರ್ ಪಿಸ್ತೂಲ್ ಪುರುಷರ ಕ್ವಾಲ್-ಸ್ಟೇಜ್ 2 – ಅನೀಶ್ ಭನ್ವಾಲಾ, ವಿಜಯವೀರ್ ಸಿಧು
- 6:05 PM – ಸೈಲಿಂಗ್ – ಮಹಿಳೆಯರ ಡಿಂಗಿ ರೇಸ್ – ನೇತ್ರಾ ಕುಮನನ್
- 7 PM – ಶೂಟಿಂಗ್ – ಸ್ಕೀಟ್ ಮಹಿಳೆಯರ ಫೈನಲ್ – ಮಹೇಶ್ವರಿ ಚೌಹಾಣ್, ರಜಾ ಧಿಲ್ಲೋನ್ (ಅರ್ಹತೆಯ ಬಳಿಕ)