Paris Olympics 2024: ಇಂದು 11 ಸ್ಪರ್ಧೆಗಳಲ್ಲಿ ಭಾರತೀಯರು ಕಣಕ್ಕೆ

|

Updated on: Jul 27, 2024 | 2:11 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಳುಗಳು ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ. ಈಗಾಗಲೇ ಒಲಿಂಪಿಕ್ಸ್ ಅಭಿಯಾನ ಆರಂಭಿಸಿರುವ ಭಾರತೀಯರು ಶನಿವಾರ ಮತ್ತಷ್ಟು ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Paris Olympics 2024: ಇಂದು 11 ಸ್ಪರ್ಧೆಗಳಲ್ಲಿ ಭಾರತೀಯರು ಕಣಕ್ಕೆ
Paris Olympics 2024
Follow us on

33ನೇ ಆವೃತ್ತಿಯ ಬೇಸಿಗೆ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಭಾರತದ 117 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅದರಲ್ಲೂ ಜುಲೈ 27 ರಂದು ನಡೆಯುವ 11 ಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಗಳು ಕಣಕ್ಕಿಳಿಯಲಿರುವುದು ವಿಶೇಷ. ಶನಿವಾರ ಮಧ್ಯಾಹ್ನದಿಂದ ಪಂದ್ಯಗಳು ಶುರುವಾಗಲಿದ್ದು, ಭಾರತವು ಏರ್​ ರೈಫಲ್​ ಮೂಲಕ ಅಭಿಯಾನ ಆರಂಭಿಸಲಿದೆ.

ಇದಾದ ಬಳಿಕ ಬ್ಯಾಡ್ಮಿಂಟನ್, ರೋಯಿಂಗ್, ಶೂಟಿಂಗ್, ಟೆನಿಸ್, ಟೇಬಲ್ ಟೆನ್ನಿಸ್, ಬಾಕ್ಸಿಂಗ್ ಮತ್ತು ಹಾಕಿ ಪಂದ್ಯಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಳುಗಳು ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

  • 12:30 PM – ಶೂಟಿಂಗ್: 10 ಮೀ ಏರ್ ರೈಫಲ್ ಮಿಶ್ರ ತಂಡ – ರಮಿತಾ ಜಿಂದಾಲ್, ಅರ್ಜುನ್ ಬಾಬುತಾ | ಎಲವೆನಿಲ್ ವಲರಿವನ್, ಸಂದೀಪ್ ಸಿಂಗ್.
  • 12:30 PM – ರೋಯಿಂಗ್: ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ – ಬಲರಾಜ್ ಪನ್ವಾರ್
  • 2:00 PM – ಶೂಟಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್ – ಅರ್ಜುನ್ ಸಿಂಗ್ ಚೀಮಾ, ಸರಬ್ಜೋತ್ ಸಿಂಗ್
  • 2:00 PM – ಶೂಟಿಂಗ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ – ಚಿನ್ನ, ಕಂಚಿನ ಪದಕ ಪಂದ್ಯಗಳು (ಅರ್ಹತೆಯ ಬಳಿಕ)
  • 3:30 PM- ಟೆನಿಸ್: ಪುರುಷರ ಡಬಲ್ಸ್ ಮೊದಲ ಸುತ್ತು – ಶ್ರೀರಾಮ್ ಬಾಲಾಜಿ/ರೋಹನ್ ಬೋಪಣ್ಣ vs ಫ್ಯಾಬಿಯನ್ ರೆಬೌಲ್/ಎಡ್ವರ್ಡ್ ರೋಜರ್-ವ್ಯಾಸೆಲಿನ್ (ಫ್ರಾನ್ಸ್)
  • 4:00 PM – ಶೂಟಿಂಗ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಮನು ಭಾಕರ್, ರಿದಮ್ ಸಾಂಗ್ವಾನ್
  • 7:10 PM- ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್- ಲಕ್ಷ್ಯ ಸೇನ್ vs ಕೆವಿನ್ ಕಾರ್ಡನ್ (ಗ್ವಾಟೆಮಾಲಾ)
  • 7:15 PM- ಟೇಬಲ್ ಟೆನಿಸ್: ಪುರುಷರ ಸಿಂಗಲ್ಸ್,  ಹರ್ಮೀತ್ ದೇಸಾಯಿ ವಿರುದ್ಧ ಜೈದ್ ಅಬೋ ಯಮನ್
  • 8:00 PM- ಬ್ಯಾಡ್ಮಿಂಟನ್: ಪುರುಷರ ಡಬಲ್ಸ್- ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ/ಚಿರಾಗ್ ಶೆಟ್ಟಿ vs ಲ್ಯೂಕಾಸ್ ಕಾರ್ವಿ/ರೋನನ್ ಲಾಬರ್ (ಫ್ರಾನ್ಸ್)
  • 9:00 PM- ಹಾಕಿ: ಪುರುಷರ ಪೂಲ್ ಬಿ – ಭಾರತ vs ನ್ಯೂಝಿಲೆಂಡ್
  • 11:50 PM- ಬ್ಯಾಡ್ಮಿಂಟನ್: ಮಹಿಳೆಯರ ಡಬಲ್ಸ್- ಅಶ್ವಿನಿ ಪೊನ್ನಪ್ಪ / ತನಿಶಾ ಕ್ರಾಸ್ಟೊ vs  ಕಿಮ್ ಸೋ ಯೆಂಗ್ / ಕಾಂಗ್ ಹೀ ಯೋಂಗ್ (ರಿಪಬ್ಲಿಕ್ ಆಫ್ ಕೊರಿಯಾ)
    12:02 AM – ಬಾಕ್ಸಿಂಗ್:  ಮಹಿಳೆಯರ 54 ಕೆಜಿ – ಪ್ರೀತಿ ಪವಾರ್ vs ಕಿಮ್ ಅನ್ಹ್ ವೋ (ವಿಯೆಟ್ನಾಂ)

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ಯಾವ ಚಾನೆಲ್​ಗಳಲ್ಲಿ ವೀಕ್ಷಿಸಬಹುದು?

ಪ್ಯಾರಿಸ್ ಒಲಿಂಪಿಕ್ಸ್‌ನ ಲೈವ್ ಟೆಲಿಕಾಸ್ಟ್ ಸ್ಪೋರ್ಟ್ಸ್ 18 ನಲ್ಲಿ ಲಭ್ಯವಿರುತ್ತದೆ. ಹಾಗೆಯೇ ಜಿಯೋ ಸಿನಿಮಾ ಆ್ಯಪ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.

 

Published On - 7:52 am, Sat, 27 July 24