ಒಲಿಂಪಿಕ್ಸ್‌ನಲ್ಲಿ ಟ್ರಾನ್ಸ್​​​ಜೆಂಡರ್ ಕ್ರೀಡಾಪಟುಗಳು ಭಾಗವಹಿಸಬೇಕಾದರೆ ಇರುವ ನಿಯಮಗಳೇನು?

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಮಗಳನ್ನು ಮಾಡಿದೆ. ಟ್ರಾನ್ಸ್ಜೆಂಡರ್ ಮಹಿಳೆಯರು ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಕನಿಷ್ಠ 24 ತಿಂಗಳವರೆಗೆ 2.5 nmol/L ಗಿಂತ ಕಡಿಮೆ ಮಾಡಬೇಕು. ಟ್ರಾನ್ಸ್ಜೆಂಡರ್ ಪುರುಷರು ನಿರ್ಬಂಧಗಳಿಲ್ಲದೆ ಸ್ಪರ್ಧಿಸಬಹುದು. ನ್ಯಾಯಯುತ ಸ್ಪರ್ಧೆಯನ್ನು ಖಾತ್ರಿಪಡಿಸುವಾಗ IOC ಒಳಗೊಳ್ಳುವಿಕೆಗೆ ಒತ್ತು ನೀಡುತ್ತದೆ.ಈ ನಿಯಮಗಳೇನು? ಇಲ್ಲಿದೆ ಮಾಹಿತಿ

ಒಲಿಂಪಿಕ್ಸ್‌ನಲ್ಲಿ ಟ್ರಾನ್ಸ್​​​ಜೆಂಡರ್ ಕ್ರೀಡಾಪಟುಗಳು ಭಾಗವಹಿಸಬೇಕಾದರೆ ಇರುವ ನಿಯಮಗಳೇನು?
ನಿಕ್ಕಿ ಹಿಲ್ಟ್ಜ್
Follow us
|

Updated on: Aug 08, 2024 | 2:22 PM

ಪ್ಯಾರಿಸ್ 2024 ರ ಒಲಿಂಪಿಕ್ ಕ್ರೀಡಾಕೂಟ ಫ್ರೆಂಚ್ ರಾಜಧಾನಿಯಲ್ಲಿ ಜುಲೈ 26ರಂದು ಆರಂಭವಾಗಿದ್ದು ಆಗಸ್ಟ್ 11ರವರೆಗೆ ನಡೆಯಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳ ಸಮಾನ ಪ್ರಾತಿನಿಧ್ಯದೊಂದಿಗೆ ಕ್ರೀಡಾಕೂಟ ನಡೆಯುತ್ತಿದೆ. ಅಂದಹಾಗೆ ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಯಲ್ಲಿ  ಟ್ರಾನ್ಸ್​​​ಜೆಂಡರ್ ಕ್ರೀಡಾಪಟುಗಳ ಭಾಗವಹಿಸುವಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.  ಕ್ರೀಡಾ ಸಂಸ್ಥೆಗಳು ಸಾಮಾನ್ಯವಾಗಿ ‘ನ್ಯಾಯ ಮತ್ತು ಒಳಗೊಳ್ಳುವಿಕೆ’ ಸಮತೋಲನದ ಅಗತ್ಯದ ಬಗ್ಗೆ ಮಾತನಾಡುತ್ತವೆ, ಆದರೆ ವಿಮರ್ಶಕರು ಟ್ರಾನ್ಸ್​​​ಜೆಂಡರ್ ಕ್ರೀಡಾಪಟುಗಳು ಮಹಿಳಾ ವಿಭಾಗದಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಈ ಮೊದಲು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆಯೇ?

ಹೌದು. ಕೆನಡಾದ ಮಹಿಳಾ ಫುಟ್‌ಬಾಲ್ ಆಟಗಾರ್ತಿ ಕ್ವಿನ್ ಅವರು ಟೋಕಿಯೋ ಗೇಮ್ಸ್‌ನಲ್ಲಿ ಭಾಗವಹಿಸಿದ್ದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಟ್ರಾನ್ಸ್‌ಜೆಂಡರ್ ಅಥ್ಲೀಟ್ ಆಗಿದ್ದಾರೆ.  ಕ್ವಿನ್ 2020ರಲ್ಲಿ ಅವರ ಲಿಂಗ ಗುರುತನ್ನು ಬಳಸುವ ಬದಲು ಹುಟ್ಟಿನಿಂದಲೇ ಹೆಣ್ಣು ಎಂದು ಮಹಿಳಾ ತಂಡದಲ್ಲಿ ಫುಟ್‌ಬಾಲ್ ಆಡುವುದನ್ನು ಮುಂದುವರಿಸಲು ಅವರಿಗೆ ಅನುಮತಿ ನೀಡಲಾಯಿತು. ಕ್ವಿನ್ ಪಂದ್ಯಾವಳಿಯಲ್ಲಿ ಕೆನಡಾದ 1-1 ಡ್ರಾದಲ್ಲಿ ಭಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದು, ಭವಿಷ್ಯದಲ್ಲಿ ನಿಯಮಗಳು ಬದಲಾಗುತ್ತವೆ ಎಂದು ಆಶಾವಾದ ವ್ಯಕ್ತಪಡಿಸಿದ್ದರು.

View this post on Instagram

A post shared by Quinn (@thequinny5)

ಈ ಪ್ರಪಂಚದ ಕಾರಣದಿಂದಾಗಿ ಅವರ ಸತ್ಯವನ್ನು ಬದುಕಲು ಸಾಧ್ಯವಾಗದ ಒಲಿಂಪಿಯನ್‌ಗಳು ನನಗಿಂತ ಮೊದಲು ಇದ್ದರು ಎಂದು ತಿಳಿದು ನನಗೆ ದುಃಖವಾಗಿದೆ. ನಾನು ಬದಲಾವಣೆಗೆ ಆಶಾವಾದಿ ಎಂದು ಭಾವಿಸುತ್ತೇನೆ. ಶಾಸಕಾಂಗದಲ್ಲಿ ಬದಲಾವಣೆ, ನಿಯಮಗಳು, ರಚನೆಗಳು ಮತ್ತು ಮನಸ್ಥಿತಿಗಳಲ್ಲಿನ ಬದಲಾವಣೆಗಳಾಗಬೇಕು.  ನನಗೆ ವಾಸ್ತವಗಳ ಅರಿವಿದೆ. ಟ್ರಾನ್ಸ್ ಮಹಿಳೆಯರನ್ನು ಕ್ರೀಡೆಯಿಂದ ನಿಷೇಧಿಸಲಾಗಿದೆ. ತಮ್ಮ ಒಲಿಂಪಿಕ್ ಕನಸುಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿರುವಾಗ ಟ್ರಾನ್ಸ್ ಮಹಿಳೆಯರು ತಾರತಮ್ಯ ಮತ್ತು ಪಕ್ಷಪಾತವನ್ನು ಎದುರಿಸುತ್ತಿದ್ದಾರೆ. ಹೋರಾಟ  ಮುಗಿಯುವ ಹಂತಕ್ಕೆ ಬಂದಿಲ್ಲ. ನಾವೆಲ್ಲರೂ ಇರುವಾಗ ನಾನು ಸಂಭ್ರಮಿಸುತ್ತೇನೆ ಎಂದಿದ್ದಾರೆ.

ಜಪಾನ್ ರಾಜಧಾನಿಯಲ್ಲಿ ಕೆನಡಾ ಚಿನ್ನ ಗೆದ್ದಾಗ ಕ್ವಿನ್ ಒಲಿಂಪಿಕ್ ಪದಕ ಗೆದ್ದ ಮೊದಲ ಟ್ರಾನ್ಸ್​​​ಜೆಂಡರ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 2016  ರಿಯೊದಲ್ಲಿ  ಕಂಚಿನ ಪದಕವನ್ನೂ ಗೆದ್ದಿದ್ದರು.

ಟೋಕಿಯೋ ಗೇಮ್ಸ್ ನಲ್ಲಿ ನ್ಯೂಜಿಲೆಂಡ್ ವೇಟ್‌ಲಿಫ್ಟರ್ ಲಾರೆಲ್ ಹಬಾರ್ಡ್ ಅವರ ಉಪಸ್ಥಿತಿಯ ಬಗ್ಗೆ ಮಹತ್ವದ ಚರ್ಚೆಯನ್ನು ಕಂಡಿತ್ತು. ಹಬಾರ್ಡ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಟ್ರಾನ್ಸ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು, ಆಗ 43 ವರ್ಷ ವಯಸ್ಸಿನ ಹಬಾರ್ಡ್ ಮಹಿಳೆಯರ 87 ಕೆಜಿಗಿಂತ ಹೆಚ್ಚು ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಹಬಾರ್ಡ್ ಅವರು 2017 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮತ್ತು 2012 ರಲ್ಲಿ ಪರಿವರ್ತನೆಯ ನಂತರ 2019 ಪೆಸಿಫಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಐಒಸಿಯ  2015 ರ ಒಮ್ಮತದ ಹೇಳಿಕೆಯ ಅಡಿಯಲ್ಲಿ ನಿಯಮಗಳನ್ನು ಪೂರೈಸಿದ ನಂತರ ನ್ಯೂಜಿಲೆಂಡ್‌ನ ಈ ಕ್ರೀಡಾಪಟುವಿಗೆ ಸ್ಪರ್ಧಿಸಲು ಅನುಮತಿ ನೀಡಲಾಗಿದೆ. ಆಕೆಯ ಒಟ್ಟು ಟೆಸ್ಟೋಸ್ಟೆರಾನ್ ಮಟ್ಟವು ಕನಿಷ್ಠ 12 ತಿಂಗಳುಗಳವರೆಗೆ ಪ್ರತಿ ಲೀಟರ್‌ಗೆ 10 ನ್ಯಾನೊಮೋಲ್‌ಗಳಿಗಿಂತ ಕಡಿಮೆಯಾಗಿದೆ ಎಂದು ತೋರಿಸುವುದು ಈ ನಿಯಮದಲ್ಲಿ ಸೇರಿದೆ. 2015ರ ಒಮ್ಮತದ ಹೇಳಿಕೆಯು ಹಳತಾಗಿದೆ ಎಂದು ಐಒಸಿ ಕ್ರೀಡಾಕೂಟಕ್ಕೂ ಮುನ್ನ ಒಪ್ಪಿಕೊಂಡಿತ್ತು. ಇವರು BMX ಫ್ರೀಸ್ಟೈಲ್ ಸೈಕ್ಲಿಸ್ಟ್ ಚೆಲ್ಸಿಯಾ ವೋಲ್ಫ್ ಟೋಕಿಯೋ ಒಲಿಂಪಿಕ್ಸ್‌ಗಾಗಿ ಯುನೈಟೆಡ್ ಸ್ಟೇಟ್ಸ್ ತಂಡದೊಂದಿಗೆ  ಪ್ರಯಾಣಿಸಿದ್ದರು, ಆದರೆ ಸ್ಪರ್ಧಿಸಲಿಲ್ಲ.

ಈಗ ನಿಯಮಗಳೇನಿವೆ?

ಎರಡು ವರ್ಷಗಳ ಸಮಾಲೋಚನೆಯ ನಂತರ 2021 ರ ನವೆಂಬರ್‌ನಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳ ಕುರಿತು ಐಒಸಿ ಹೊಸ ನಿಯಮ ಬಿಡುಗಡೆ ಮಾಡಿತು. ಪ್ರಮುಖವಾಗಿ ಸಂಸ್ಥೆಯು ಚೌಕಟ್ಟಿನಲ್ಲಿನ 10 ತತ್ವಗಳ ಆಧಾರದ ಮೇಲೆ ತಮ್ಮ ಕ್ರೀಡೆಯಲ್ಲಿ ಅರ್ಹತಾ ಮಾನದಂಡಗಳನ್ನು ನಿರ್ಧರಿಸಲು ವೈಯಕ್ತಿಕ ಫೆಡರೇಶನ್‌ಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದೆ.  ಯಾವುದೇ ಟ್ರಾನ್ಸ್​​​ಜೆಂಡರ್ ಅಥವಾ ಡಿಎಸ್‌ಡಿ ಅಥ್ಲೀಟ್‌ಗಳು ಮಹಿಳಾ ಅಥ್ಲೀಟ್‌ಗಳ ವಿಭಾಗದಲ್ಲಿ ದೈಹಿಕ ಪ್ರಯೋಜನವನ್ನು ಹೊಂದಿರುವುದಿಲ್ಲ ಎಂದು ಸಾಬೀತುಪಡಿಸಲು ಪುರಾವೆಗಳಿಲ್ಲ ಎಂದು ನಿಯಮ ಹೇಳಿದೆ.

ನ್ಯಾಯಸಮ್ಮತೆಗೆ ಧಕ್ಕೆಯಾಗದಿದ್ದಲ್ಲಿ ಕ್ರೀಡಾಪಟುಗಳು ತಮ್ಮ ಆಯ್ಕೆಯ ಲಿಂಗ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅದು ಮತ್ತಷ್ಟು ಷರತ್ತು ವಿಧಿಸಿದೆ. ನಿಯಮಗಳನ್ನು ರೂಪಿಸುವಾಗ ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕಾನೂನು ಅಂಶಗಳನ್ನು ಪರಿಗಣಿಸಲು ಅಂತರರಾಷ್ಟ್ರೀಯ ಒಕ್ಕೂಟಗಳನ್ನು ಒತ್ತಾಯಿಸಲಾಯಿತು.

ಆದಾಗ್ಯೂ,  ಐಒಸಿಯ ವಿಧಾನಕ್ಕೆ ಟೀಕೆಗಳೂ ಎದುರಾಗಿವೆ. ಟೆನ್ನಿಸ್ ದಂತಕಥೆ ಮತ್ತು ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತೆ ಮಾರ್ಟಿನಾ ನವ್ರಾಟಿಲೋವಾ ಸಂಸ್ಥೆಯು ಇನ್ನೊಬ್ಬರನ್ನು ಹೊಣೆ ಮಾಡುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಟೆನಿಸ್, ಟ್ರಯಥ್ಲಾನ್ ಮತ್ತು ರೋಯಿಂಗ್ ಸೇರಿದಂತೆ ಟ್ರಾನ್ಸ್ ಅಥ್ಲೀಟ್‌ಗಳ ಪ್ರತಿ ಲೀಟರ್ ಟೆಸ್ಟೋಸ್ಟೆರಾನ್‌ಗೆ ನ್ಯಾನೊಮೋಲ್‌ಗಲ ಮಟ್ಟಕ್ಕೆ ಹಲವಾರು ಒಕ್ಕೂಟಗಳು ಆರಂಭದಲ್ಲಿ ನಿಯಮಗಳನ್ನು ಬಿಗಿಗೊಳಿಸಿದವು. ವರ್ಲ್ಡ್ ರಗ್ಬಿ 2020 ರಲ್ಲಿ ಮಹಿಳೆಯರ ಈವೆಂಟ್‌ಗಳಲ್ಲಿ ಸ್ಪರ್ಧಿಸುವ ಟ್ರಾನ್ಸ್ ಮಹಿಳೆಯರ ಮೇಲೆ ನಿಷೇಧವನ್ನು ಜಾರಿಗೊಳಿಸಿದ ಮೊದಲ ಅಂತರರಾಷ್ಟ್ರೀಯ ಫೆಡರೇಶನ್ ಆಯಿತು.

ಪುರುಷ ಪ್ರೌಢಾವಸ್ಥೆಯನ್ನು ದಾಟಿದ ಯಾರಾದರೂ ಮಹಿಳಾ ಆಟಗಾರ್ತಿಯರ ಜತೆ ಸ್ಪರ್ಧಿಸಿದಾಗ ಗಾಯದ ಅಪಾಯದ ಅಂಶಗಳ ‘ಕನಿಷ್ಠ 20-30 ಪ್ರತಿಶತ ಹೆಚ್ಚಿನ ಅಪಾಯ’ವನ್ನು ಕಂಡುಹಿಡಿದ ನಂತರ ಸಂಸ್ಥೆಯು ಈ ಕ್ರಮವನ್ನು ಮಾಡಿದೆ. ವಿಶ್ವ ಈಜು ಸ್ಪರ್ಧೆ 2022 ರಲ್ಲಿ ಟ್ರಾನ್ಸ್ ಅಥ್ಲೀಟ್‌ಗಳು ಪುರುಷ ಪ್ರೌಢಾವಸ್ಥೆಗೆ ಬಂದರೆ ಮಹಿಳೆಯರ ಈಜು ರೇಸ್‌ಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿತು.  ವಿಶ್ವ ಅಥ್ಲೆಟಿಕ್ಸ್ ಮತ್ತು ಇಂಟರ್ನ್ಯಾಷನಲ್ ಸೈಕ್ಲಿಂಗ್ ಯೂನಿಯನ್ ಕೂಡಾ 2023 ರಲ್ಲಿ ಇದನ್ನು ಅನುಸರಿಸಿತು.

ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್ ನಮ್ಮ ಕ್ರೀಡೆಯಲ್ಲಿ ಮಹಿಳಾ ಸ್ಪರ್ಧಿಗಳನ್ನು ರಕ್ಷಿಸಲು ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಲಾರ್ಡ್ ಕೋ ಮಾರ್ಚ್ 2023 ರಲ್ಲಿ ತಮ್ಮ ನೀತಿಯನ್ನು ಪ್ರಕಟಿಸಿದಾಗ ಹೇಳಿದ್ದಾರೆ. ‘ಈ ವರ್ಷದ ಮಾರ್ಚ್ 31 ರಿಂದ ಮಹಿಳಾ ವಿಶ್ವ ಶ್ರೇಯಾಂಕದ ಸ್ಪರ್ಧೆಗಳಿಂದ ಪುರುಷ ಪ್ರೌಢಾವಸ್ಥೆ ಹೊಂದಿರುವ ಪುರುಷ-ಮಹಿಳೆ ಟ್ರಾನ್ಸ್ಜೆಂಡರ್ ಅಥ್ಲೀಟ್ಗಳನ್ನು ಹೊರಗಿಡಲು ಕೌನ್ಸಿಲ್ ಒಪ್ಪಿಕೊಂಡಿದೆ. ಕೌನ್ಸಿಲ್ ಮಾಡಿದ ನಿರ್ಧಾರವು ಪ್ರಾಥಮಿಕವಾಗಿ ತತ್ವ ಆಧಾರಿತ ನಿರ್ಧಾರವಾಗಿದೆ.ಅದು ಮಹಿಳಾ ವರ್ಗವನ್ನು ರಕ್ಷಿಸುವ ಅಗತ್ಯವಾಗಿದೆ. ಇದನ್ನೇ ನಮ್ಮ ಕ್ರೀಡೆ ಮಾಡಬೇಕಿದೆ’ ಎಂದಿದ್ದಾರೆ ಲಾರ್ಡ್ ಕೋ.

ಪ್ಯಾರಿಸ್‌ನಲ್ಲಿ ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆಯೇ?

ಪ್ಯಾರಿಸ್ 2024 ರಲ್ಲಿ ಮಹಿಳೆಯರ 1,500 ಮೀ ಓಟದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ನಿಕ್ಕಿ ಹಿಲ್ಟ್ಜ್ ಪ್ರತಿನಿಧಿಸುತ್ತಾರೆ.  ಇವರು 2021 ರಲ್ಲಿ ಹಿಲ್ಟ್ಜ್ ಟ್ರಾನ್ಸ್‌ಜೆಂಡರ್ ನಾನ್-ಬೈನರಿ ಎಂದು ಗುರುತಿಸಿಕೊಂಡಿದ್ದು, ಅವರು ‘They/Them’ ಎಂದು ಬಳಸುತ್ತಾರೆ. ಅವರು Instagram ನಲ್ಲಿ: ‘ಹಾಯ್ ನಾನು ನಿಕ್ಕಿ. ನಾನು ಟ್ರಾನ್ಸ್‌ಜೆಂಡರ್. ಅಂದರೆ ನಾನು ಹುಟ್ಟಿನಿಂದಲೇ ನನಗೆ ನಿಯೋಜಿಸಲಾದ ಲಿಂಗದೊಂದಿಗೆ ಗುರುತಿಸುವುದಿಲ್ಲ. ನನ್ನ ಲಿಂಗವನ್ನು ವಿವರಿಸಲು ನಾನು ಪ್ರಸ್ತುತ ಬಳಸುವ ಪದವು ಬೈನರಿ ಅಲ್ಲ.

View this post on Instagram

A post shared by Nikki Hiltz (@nikkihiltz)

‘ನನ್ನ ಲಿಂಗವನ್ನು ನಾನು ವಿವರಿಸಲು ಉತ್ತಮ ಮಾರ್ಗವೆಂದರೆ ಅದಕೊಂದು ನಿರ್ದಿಷ್ಟ ಹೆಸರು ಇಡದೇ ಇರುವುದು. ಕೆಲವೊಮ್ಮೆ ನಾನು ಶಕ್ತಿಯುತ ರಾಣಿಯಂತೆ ಭಾವನೆಯಿಂದ ಎಚ್ಚರಗೊಳ್ಳುತ್ತೇನೆ ಮತ್ತು ಇತರ ದಿನಗಳಲ್ಲಿ ನಾನು ಒಬ್ಬ ಹುಡುಗ ಎಂಬ ಭಾವನೆಯಿಂದ ಎಚ್ಚರಗೊಳ್ಳುತ್ತೇನೆ.ಕೆಲವೊಮ್ಮೆ ನಾನು ಜೆಂಡರ್ ಬೈನರಿಯಿಂದ ಹೊರಗೆ ಸಂಪೂರ್ಣವಾಗಿ ಗುರುತಿಸುತ್ತೇನೆ. ಇದು ಜಟಿಲವಾಗಿದೆ ಮತ್ತು ಸಂಕೀರ್ಣವಾಗಿದೆ ನಾನು ಇನ್ನೂ ನನ್ನನ್ನೇ ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ನನ್ನ ಲಿಂಗದ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇದು ಸಮಯ ಎಂದು ನಾನು ನಿರ್ಧರಿಸಿದ್ದೇನೆ ಎಂದು ಬರೆದಿದ್ದರು.

ಈ ತಿಂಗಳ ಆರಂಭದಲ್ಲಿ 3 ನಿಮಿಷ ಮತ್ತು 55.53 ಸೆಕೆಂಡುಗಳ ಯುಎಸ್ ಟ್ರಯಲ್ಸ್ ದಾಖಲೆಯನ್ನು ಸ್ಥಾಪಿಸುವ ಮೂಲಕ 29 ವರ್ಷ ವಯಸ್ಸಿನ ನಿಕ್ಕಿ ಒಲಿಂಪಿಕ್ಸ್ ಗೇಮ್ಸ್‌ಗೆ ಅರ್ಹತೆ ಪಡೆದರು. ಹಿಲ್ಟ್ಜ್ 2000 ರ ದಶಕದ ಮಧ್ಯಭಾಗದಲ್ಲಿ ಒರೆಗಾನ್ ಮತ್ತು ಅರ್ಕಾನ್ಸಾಸ್‌ನಲ್ಲಿ ಕಾಲೇಜು ಮಟ್ಟದಲ್ಲಿ ಸ್ಪರ್ಧಿಸಿದ್ದು, 2018 ರಲ್ಲಿ ಆಲ್-ಅಮೇರಿಕನ್ ಗೌರವಗಳನ್ನು ಗಳಿಸಿದರು. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ 2024 ರ ವರ್ಲ್ಡ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, 2019 ರಲ್ಲಿ ಪೆರುವಿನ ಲಿಮಾದಲ್ಲಿ ನಡೆದ ಪ್ಯಾನ್ ಅಮೆರಿಕನ್ ಗೇಮ್ಸ್‌ನಲ್ಲಿ ಚಿನ್ನವನ್ನು ಗೆದ್ದ ದಾಖಲೆ ಇವರ ಹೆಸರಲ್ಲಿದೆ.

ಕ್ರೀಡಾಪಟುಗಳನ್ನು ನಿಷೇಧಿಸಲಾಗಿದೆಯೇ?

ಅನೇಕ ಕ್ರೀಡೆಗಳಲ್ಲಿ ನಿಯಮಗಳ ಬದಲಾವಣೆಯು ಒಲಿಂಪಿಕ್ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಹಲವಾರು ಕ್ರೀಡಾಪಟುಗಳು ಪ್ಯಾರಿಸ್ 2024 ನಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.  ಲಿಯಾ ಥಾಮಸ್ ಕ್ರೀಡೆಗಾಗಿ ಆರ್ಬಿಟ್ರೇಶನ್ ಕೋರ್ಟ್‌ನಲ್ಲಿ ವಿಶ್ವ ಅಕ್ವಾಟಿಕ್ಸ್ ನಿಯಮಗಳನ್ನು ಪ್ರಶ್ನಿಸಿದ್ದರು.  25ರ ಹರೆಯದ ಲಿಯಾ ಥಾಮಸ್ 2022 ರಲ್ಲಿ NCAA ಕಾಲೇಜು ಪ್ರಶಸ್ತಿಯನ್ನು ಗೆದ್ದ ಮೊದಲ ಟ್ರಾನ್ಸ್ಜೆಂಡರ್ ಅಥ್ಲೀಟ್. ಈಕೆಯ ಗೆಲುವಿನ ಮೂರು ತಿಂಗಳ ನಂತರ ವಿಶ್ವ ಅಕ್ವಾಟಿಕ್ಸ್ ನಿಯಮಗಳನ್ನು ಪರಿಚಯಿಸಲಾಯಿತು. 2019ರಲ್ಲಿ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಯನ್ನು ಪ್ರಾರಂಭಿಸುವ ಮೊದಲು ಈಜುಗಾರ ಪೆನ್ಸಿಲ್ವೇನಿಯನ್ ಪುರುಷರ ತಂಡಕ್ಕಾಗಿ ಮೂರು ಸೀಸನ್ ಗಳಲ್ಲಿ ಸ್ಪರ್ಧಿಸಿದ್ದರು.

ಥಾಮಸ್ ವಿಶ್ವ ಅಕ್ವಾಟಿಕ್ಸ್ ನಿಯಮಗಳನ್ನು ರದ್ದುಗೊಳಿಸಲು CAS ಅನ್ನು ಕೇಳಿದ್ದು, ಅವುಗಳನ್ನು ‘ಅಮಾನ್ಯ ಮತ್ತು ಕಾನೂನುಬಾಹಿರ’ ಎಂದು ಘೋಷಿಸಬೇಕು ಎಂದು ಹೇಳಿದ್ದಾರೆ. ಆದರೆ CAS ಮನವಿಯನ್ನು ತಿರಸ್ಕರಿಸಿತು. ಥಾಮಸ್ ಅವರು USA ಸ್ವಿಮ್ಮಿಂಗ್‌ನ ಸದಸ್ಯರಾಗಿರದ ಕಾರಣ ವರ್ಲ್ಡ್ ಅಕ್ವಾಟಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಅರ್ಹತೆಯೊಂದಿಗೆ ತೊಡಗಿಸಿಕೊಳ್ಳಲು ಅರ್ಹತೆ ಹೊಂದಿಲ್ಲ’ ಎಂದಿತ್ತು. ವರ್ಲ್ಡ್ ಅಕ್ವಾಟಿಕ್ಸ್ ಈ ನಿರ್ಧಾರವನ್ನು ‘ಮಹಿಳಾ ಕ್ರೀಡೆಯನ್ನು ರಕ್ಷಿಸುವ ನಮ್ಮ ಪ್ರಯತ್ನಗಳಲ್ಲಿ ಪ್ರಮುಖ ಹೆಜ್ಜೆ’ ಎಂದು ಘೋಷಿಸಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ವೋಲ್ಫ್, ಸೈಕ್ಲಿಂಗ್‌ನ ಕಠಿಣ ನಿಯಮಗಳ ಅಡಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅಂತೆಯೇ, ಬ್ರಿಟಿಷ್ ಸೈಕ್ಲಿಸ್ಟ್ ಎಮಿಲಿ ಬ್ರಿಡ್ಜಸ್ ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಬ್ರಿಟಿಷ್ ಸೈಕ್ಲಿಂಗ್ ಮತ್ತು UCI ನಿಯಮಗಳಿಂದ ನಿರ್ಬಂಧಿಸಲ್ಪಟ್ಟರು.

ಈ ವರ್ಷದ ಆರಂಭದಲ್ಲಿ, ಎಮಿಲಿ ಬ್ರಿಡ್ಜಸ್ ಬ್ರಿಟೀಷ್ ಸೈಕ್ಲಿಂಗ್ ಅನ್ನು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುವುದರಿಂದ ಟ್ರಾನ್ಸ್‌ಜೆಂಡರ್ ಮಹಿಳೆಯರ ಮೇಲಿನ ನಿಷೇಧದ ಮೇಲೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದರು.

ಅದೇ ವೇಳೆ, ವಿಶ್ವ ಅಥ್ಲೆಟಿಕ್ಸ್ ನಿಯಮಗಳ ಅಡಿಯಲ್ಲಿ ಫ್ರೆಂಚ್ ಸ್ಪ್ರಿಂಟರ್ ಹಲ್ಬಾ ಡಿಯೋಫ್ ಅವರು ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಸೆನೆಗಲ್ ಮೂಲದ ಅಥ್ಲೀಟ್ ಲಿಂಗ ಬದಲಾಯಿಸಲು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು ಮತ್ತು 2021 ರಲ್ಲಿ ಅವರ ಲಿಂಗ ಪರಿವರ್ತನೆಯನ್ನು ಗುರುತಿಸಲಾಯಿತು. ಸ್ಪ್ರಿಂಟರ್ 2024 ರ ಪ್ಯಾರಿಸ್‌ನಲ್ಲಿ 200 ಮೀಟರ್‌ನಲ್ಲಿ ಸ್ಪರ್ಧಿಸಲು ಆಶಿಸುತ್ತಿದ್ದರು. ಸ್ಪ್ರಿಂಟರ್ ಹಲ್ಬಾ ಡಿಯೋಫ್ ಕಳೆದ ವರ್ಷ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ನೀಡಿದ ಹೇಳಿಕೆಯನ್ನು ನಾನು ‘ದೂರ ತಳ್ಳಲ್ಪಟ್ಟ’ ಭಾವನೆ ಹೊಂದಿದ್ದೇನೆ. ಈ ನಿಯಮಗಳಿಂದಾಗಿ ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳನ್ನು ‘ಬೇಟೆಯಾಡಲಾಗುತ್ತಿದೆ’ ಎಂದು ಹೇಳಿದ್ದರು.

ಆಕ್ಷೇಪಾರ್ಹ ಪದ ಬಳಸಬೇಡಿ ಎಂದ ಐಒಸಿ

ಕಳೆದ ತಿಂಗಳು, ಐಒಸಿ 33 ಪುಟಗಳ ದಾಖಲೆಯನ್ನು ಪ್ರಕಟಿಸಿದ್ದು, ಕ್ರೀಡಾಕೂಟದಲ್ಲಿ ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳ ಬಗ್ಗೆ ವರದಿ ಮಾಡುವಾಗ ‘ಆಕ್ಷೇಪಾರ್ಹ’ ಪದಗಳನ್ನು ಬಳಸದಂತೆ ಪತ್ರಕರ್ತರಿಗೆ ತಿಳಿಸಿತ್ತು.  GLAAD, Athlete Ally ಮತ್ತು PrideHouse Tokyo ಸಂಸ್ಥೆಗಳಿಂದ ಟೋಕಿಯೋದಲ್ಲಿ ಒಲಿಂಪಿಕ್ಸ್‌ಗಾಗಿ ಇದೇ ರೀತಿಯ ದಾಖಲೆಯನ್ನು ತಯಾರಿಸಲಾಗಿತ್ತು. ಹಬಾರ್ಡ್‌ನ ವೇಟ್‌ಲಿಫ್ಟಿಂಗ್ ಈವೆಂಟ್‌ಗೆ ಮುಂಚಿತವಾಗಿ ಮಾಧ್ಯಮದವರಿಗೆ ಇದರ ಬಗ್ಗೆ ಕರಪತ್ರ ನೀಡಲಾಗಿತ್ತು. ಇದರಲ್ಲಿ ‘ಸಮಸ್ಯೆಯುಂಟು ಮಾಡುವ ಭಾಷೆ’ ಎಂದು ಅವರು ಹೇಳಿಕೊಳ್ಳುವ ‘ಹುಟ್ಟಿನಿಂದಲೇ ಗಂಡು’, ‘ಹುಟ್ಟಿನಿಂದಲೇ ಹೆಣ್ಣು’, ‘ಜೈವಿಕವಾಗಿ ಗಂಡು’ ಮತ್ತು ‘ಜೈವಿಕವಾಗಿ ಹೆಣ್ಣು’ ಮುಂತಾದ ಪದಗಳನ್ನು ಬಳಸುವುದರ ವಿರುದ್ಧ IOC ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ‘ಲೈಂಗಿಕ ಬದಲಾವಣೆ’, ‘ಶಸ್ತ್ರಚಿಕಿತ್ಸೆಯ ನಂತರ’ ಮತ್ತು ‘ಟ್ರಾನ್ಸ್ಸೆಕ್ಸುವಲ್’ ಪದ ಬಳಕೆ ಬೇಡ ಎಂದು IOC ಮಾಧ್ಯಮದವರಿಗೆ ಹೇಳಿದೆ.

ಮತ್ತಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ