Paris Olympics 2024: ಪದಕ ಪಟ್ಟಿಯಲ್ಲಿ ಶತಕದ ಗಡಿದಾಟಿದ USA

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವು ಈವರೆಗೆ 6 ಪದಕಗಳನ್ನು ಗೆದ್ದುಕೊಂಡಿದೆ. ಈ ಆರು ಪದಕಗಳಲ್ಲಿ ಮೂರು ಮೆಡಲ್ ಮೂಡಿಬಂದಿರುವುದು ಶೂಟಿಂಗ್​ ಸ್ಪರ್ಧೆಯಲ್ಲಿ ಎಂಬುದು ವಿಶೇಷ. ಅದರಲ್ಲೂ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಯುವ ಮಹಿಳಾ ಶೂಟರ್ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Paris Olympics 2024: ಪದಕ ಪಟ್ಟಿಯಲ್ಲಿ ಶತಕದ ಗಡಿದಾಟಿದ USA
USA
Follow us
|

Updated on:Aug 10, 2024 | 8:59 AM

ಪ್ಯಾರಿಸ್ ಒಲಿಂಪಿಕ್ಸ್​ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 14 ದಿನಗಳು ಮುಕ್ತಾಯಗೊಂಡಿದ್ದು, ಇನ್ನುಳಿದಿರುವುದು ಕೇವಲ ಎರಡು ದಿನಗಳು ಮಾತ್ರ. ಈ ಎರಡು ದಿನಗಳಲ್ಲಿ ಅಗ್ರಸ್ಥಾನಕ್ಕೇರಲು ಚೀನಾ ಹಾಗೂ ಯುಎಸ್​ಎ ನಡುವೆ ಪೈಪೋಟಿ ಏರ್ಪಟ್ಟಿದೆ. ಏಕೆಂದರೆ ಉಭಯ ದೇಶಗಳು ಈವರೆಗೆ (ಆಗಸ್ಟ್ 9) 33 ಚಿನ್ನದ ಪದಕ ಗೆದ್ದುಕೊಂಡಿದೆ. ಅಂತಿಮವಾಗಿ ಅತೀ ಹೆಚ್ಚು ಬಂಗಾರದ ಪದಕ ಗೆಲ್ಲುವ ದೇಶ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಕೊನೆಯ ಎರಡು ದಿನಗಳಲ್ಲಿ ಈ ಬಾರಿಯ ಅಗ್ರಸ್ಥಾನಿ ಯಾರು ಎಂಬುದು ನಿರ್ಧಾರವಾಗುವ ಸಾಧ್ಯತೆಯಿದೆ.

ಇದಾಗ್ಯೂ ಪದಕಗಳ ಸಂಖ್ಯೆಯ ವಿಷಯದಲ್ಲಿ ಯುಎಸ್​ಎ ಮೊದಲ ಸ್ಥಾನದಲ್ಲಿದ್ದಾರೆ. ಅಂದರೆ ನೂರಕ್ಕೂ ಅಧಿಕ ಪದಕ ಗೆಲ್ಲುವ ಮೂಲಕ ಒಟ್ಟು ಸಂಖ್ಯೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Aman Sehrawat: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ಬರೆದ ಅಮನ್ ಸೆಹ್ರಾವತ್

ಇತ್ತ ಚೀನಾ 33 ಚಿನ್ನದ ಪದಕ ಗೆದ್ದರೂ, ಒಟ್ಟು ಪದಕ ಸಂಖ್ಯೆಯು 85 ಅನ್ನು ದಾಟಿಲ್ಲ. ಅತ್ತ ಯುಎಸ್​ಎ ಬೆಳ್ಳಿ ಮತ್ತು ಕಂಚಿನ ವಿಭಾಗದಲ್ಲಿ ತಲಾ 39 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಮೆಡಲ್ ಕೌಂಟ್ ಅನ್ನು 111 ಕ್ಕೇರಿಸಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನೂರು ಪದಕಗಳನ್ನು ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಎಸ್​ಎ ಪಾತ್ರವಾಗಿದೆ.

ಪದಕ ಪಟ್ಟಿಯಲ್ಲಿರುವ ಟಾಪ್-10 ದೇಶಗಳು (ಆಗಸ್ಟ್ 9 ರವರೆಗಿನ) ಈ ಕೆಳಗಿನಂತಿದೆ:

ಸಂಖ್ಯೆ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
1 ಯುನೈಟೆಡ್ ಸ್ಟೇಟ್ಸ್ 33 39 39 111
2 ಚೀನಾ 33 26 23 82
3 ಆಸ್ಟ್ರೇಲಿಯಾ 18 16 14 48
4 ಜಪಾನ್ 16 8 13 37
5 ಗ್ರೇಟ್ ಬ್ರಿಟನ್ 14 20 23 57
6 ಫ್ರಾನ್ಸ್ 14 20 22 56
7 ರಿಪಬ್ಲಿಕ್ ಆಫ್ ಕೊರಿಯಾ 13 8 7 28
8 ನೆದರ್ಲ್ಯಾಂಡ್ಸ್ 13 6 10 29
9 ಜರ್ಮನಿ 12 9 8 29
10 ಇಟಲಿ 11 12 13 36
69 ಭಾರತ 0 1 5 6

69ನೇ ಸ್ಥಾನದಲ್ಲಿ ಭಾರತ:

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಟ್ಟು 6 ಪದಕಗಳನ್ನು ಗೆದ್ದಿರುವ ಭಾರತವು ಪದಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದೆ. ಇಲ್ಲಿ ಭಾರತ ಹಿಂದೆ ಉಳಿಯಲು ಮುಖ್ಯ ಕಾರಣ ಚಿನ್ನದ ಪದಕ ಗೆಲ್ಲದಿರುವುದು. ಒಂದು ವೇಳೆ ಕೊನೆಯ ಎರಡು ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರೆ 40 ರ ಒಳಗೆ ಕಾಣಿಸಿಕೊಳ್ಳಲಿದೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕಾಗಿ ಪದಕ ಗೆದ್ದವರು:

  • ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು
  • ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು
  • ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು
  • ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು
  • ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ
  • ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು

Published On - 8:58 am, Sat, 10 August 24

ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ