AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 ನೆಟ್​ವರ್ಕ್​ನ ಇಂಡಿಯನ್ ಟೈಗರ್ಸ್-ಟೈಗ್ರೆಸಸ್​​​ ಟ್ಯಾಲೆಂಟ್ ಹಂಟ್​ಗೆ ಮಹಾನಾರ್ಯಮನ್ ಸಿಂಧಿಯಾ ರಾಯಭಾರಿ

Indian Tigers and Tigresses Talent Hunt: ಇಂಡಿಯನ್ ಟೈಗರ್ಸ್-ಟೈಗರ್ಸೆಸ್ ಟ್ಯಾಲೆಂಟ್ ಹಂಟ್ ಎಂಬುದು ದೇಶದಲ್ಲಿನ ಯುವ ಫುಟ್​ಬಾಲ್ ಆಟಗಾರರನ್ನು ಗುರುತಿಸುವ ಪ್ರತಿಭಾನ್ವೇಷನಾ ಕಾರ್ಯಕ್ರಮ. ಜರ್ಮನಿಯ ಬುಂಡೆಸ್ಲಿಗಾ ಮತ್ತು ಡಿಎಫ್‌ಬಿ-ಪೋಕಲ್ ಸಹಯೋಗದೊಂದಿಗೆ ಟಿವಿ9 ನೆಟ್​ವರ್ಕ್ ಈ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಭಾರತದಲ್ಲಿ ಆಯೋಜಿಸುತ್ತಿದೆ.

TV9 ನೆಟ್​ವರ್ಕ್​ನ ಇಂಡಿಯನ್ ಟೈಗರ್ಸ್-ಟೈಗ್ರೆಸಸ್​​​ ಟ್ಯಾಲೆಂಟ್ ಹಂಟ್​ಗೆ ಮಹಾನಾರ್ಯಮನ್ ಸಿಂಧಿಯಾ ರಾಯಭಾರಿ
Tv9 CEO Barun Das - Mahanaaryaman Scindia
ಝಾಹಿರ್ ಯೂಸುಫ್
|

Updated on:Sep 10, 2024 | 2:46 PM

Share

ಬುಂಡೆಸ್ಲಿಗಾ ಮತ್ತು ಡಿಎಫ್‌ಬಿ-ಪೋಕಲ್ ಸಹಯೋಗದೊಂದಿಗೆ ಟಿವಿ9 ನೆಟ್‌ವರ್ಕ್‌ ಆಯೋಜಿಸುತ್ತಿರುವ ವಿಶ್ವದ ಅತಿ ದೊಡ್ಡ ಫುಟ್‌ಬಾಲ್ ಟ್ಯಾಲೆಂಟ್ ಹಂಟ್​ ಇಂಡಿಯನ್ ಇಂಡಿಯನ್ ಟೈಗರ್ಸ್-ಟೈಗ್ರೆಸಸ್​​​ ರಾಯಭಾರಿಯಾಗಿ ಮಹಾನಾರ್ಯಮನ್ ಸಿಂಧಿಯಾ ನೇಮಕವಾಗಿದ್ದಾರೆ. ಇಂಡಿಯನ್ ಟೈಗರ್ಸ್-ಟೈಗ್ರೆಸಸ್​​​ ಟ್ಯಾಲೆಂಟ್ ಹಂಟ್ ಮೂಲಕ ಭಾರತದಾದ್ಯಂತ ಯುವ ಪ್ರತಿಭೆಗಳನ್ನು ಅನ್ವೇಷಿಸುವ ಕಾರ್ಯಕ್ರಮವನ್ನು ಟಿವಿ9 ನೆಟ್​ವರ್ಕ್ ಆಯೋಜಿಸುತ್ತಿದೆ. ಇದೀಗ ಈ ಪ್ರತಿಭಾನ್ವೇಷಣೆಯ ಕಾರ್ಯಕ್ಕೆ ಮಹಾನಾರ್ಯಮನ್ ಸಿಂಧಿಯಾ ಕೈ ಜೋಡಿಸಿರುವುದರಿಂದ ಉತ್ಸುಕರಾಗಿದ್ದೇವೆ ಎಂದು ಟಿವಿ9 ನೆಟ್​ವರ್ಕ್ ಸಿಇಒ/ ಎಂಡಿ ಬರುಣ್ ದಾಸ್ ತಿಳಿಸಿದ್ದಾರೆ.

ಟಿವಿ9 ನೆಟ್​ವರ್ಕ್​ ಸಿಇಒ ಬರುಣ್ ದಾಸ್ ಜೊತೆ ಮಹಾನಾರ್ಯಮನ್ ಸಿಂಧಿಯಾ

ಇಂಡಿಯನ್ ಟೈಗರ್ಸ್-ಟೈಗರ್ಸೆಸ್ ಟ್ಯಾಲೆಂಟ್ ಹಂಟ್ ಮೂಲಕ ಭಾರತದಲ್ಲಿನ 20 ಹುಡುಗರು 20 ಹುಡುಗಿಯರನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ಯುವ ಫುಟ್​ಬಾಲ್ ತಾರೆಗಳಿಗೆ ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತದೆ. ಈ ಮೂಲಕ ಭಾರತೀಯ ಫುಟ್‌ಬಾಲ್‌ ಅನ್ನು ಉತ್ತೇಜಿಸಲು ಬುಂಡೆಸ್ಲಿಗಾ ಮತ್ತು ಡಿಎಫ್‌ಬಿ-ಪೋಕಲ್ ಜೊತೆ ಟಿವಿ9 ನೆಟ್​ವರ್ಕ್ ಕೈ ಜೋಡಿಸಿದೆ. ಇದೀಗ ಮಹಾನಾರ್ಯಮನ್ ಸಿಂಧಿಯಾ ಈ ಪ್ರತಿಭಾನ್ವೇಷಣೆಯ ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಮಹಾನಾರ್ಯಮನ್ ಸಿಂಧಿಯಾ ಅವರು ಈ​​​ ಟ್ಯಾಲೆಂಟ್ ಹಂಟ್​ನ ಮಂಡಳಿಗೆ ಸೇರ್ಪಡೆಯಾಗುವುದರೊಂದಿಗೆ, ಭಾರತವು ತನ್ನ ಫುಟ್‌ಬಾಲ್ ಕನಸನ್ನು ನನಸಾಗಿಸಲು ಅತ್ಯುತ್ತಮ ಫೇಸ್‌ಲಿಫ್ಟ್ ಅನ್ನು ಪಡೆದಂತಾಗಿದೆ. ಈ ಟ್ಯಾಲೆಂಟ್ ಹಂಟ್​ನಲ್ಲಿ ಆಯ್ಕೆಯಾಗುವ ಯುವ ಪ್ರತಿಭೆಗಳು ಯುರೋಪಿಯನ್ ಕ್ಲಬ್‌ಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಇದು ಅವರಿಗೆ ಅಮೂಲ್ಯವಾದ ಮಾನ್ಯತೆ ಮತ್ತು ಅನುಭವವನ್ನು ಒದಗಿಸಲಿದೆ. ನವೆಂಬರ್‌ನಲ್ಲಿ, ಈ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವರ ಸಾಧನೆಗಳಿಗಾಗಿ ಗೌರವಿಸಲಾಗುತ್ತದೆ ಎಂದು ಟಿವಿ9 ನೆಟ್​ವರ್ಕ್ ಸಿಇಒ/ ಎಂಡಿ ಬರುಣ್ ದಾಸ್ ತಿಳಿಸಿದ್ದಾರೆ.

ಫುಟ್​ಬಾಲ್ ಮತ್ತು ಯುವ ಅಭಿವೃದ್ಧಿಯ ಬಗ್ಗೆ ಒಲವು ಹೊಂದಿರುವ ಮಹಾನಾರಾಯಣ ಸಿಂಧಿಯಾ ಅವರ ಒಳಗೊಳ್ಳುವಿಕೆ ಪ್ರತಿಭೆಯನ್ನು ಹುಡುಕುವ ಉಪಕ್ರಮದ ಧ್ಯೇಯವನ್ನು ಬಲಪಡಿಸಿದೆ. ಇದು ಭಾರತೀಯ ಫುಟ್‌ಬಾಲ್‌ನ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬರುಣ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

“ಫುಟ್‌ಬಾಲ್ ನನ್ನ ಹೃದಯಕ್ಕೆ ಹತ್ತಿರವಾದ ಆಟ. ನಮ್ಮ ದೇಶದಲ್ಲಿ ಅತ್ಯುತ್ತಮ ಸಾಮರ್ಥ್ಯವಿರುವ ಪ್ರತಿಭೆಗಳು ಇರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇದೀಗ ಇಂಡಿಯನ್ ಟೈಗರ್ಸ್-ಟೈಗ್ರೆಸಸ್ ಟ್ಯಾಲೆಂಟ್ ಹಂಟ್ ಯುವ ಆಟಗಾರರಿಗೆ ಅವಕಾಶವನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದ  ಭಾಗವಾಗಲು ನಾನು ಸಹ ಉತ್ಸುಕನಾಗಿದ್ದೇನೆ” ಎಂದು ಮಹಾನಾರ್ಯಮನ್ ಸಿಂಧಿಯಾ ಹೇಳಿದ್ದಾರೆ.

ಇಂಡಿಯನ್ ಟೈಗರ್ಸ್-ಟೈಗರ್ಸೆಸ್ ಟ್ಯಾಲೆಂಟ್ ಹಂಟ್ ಕುರಿತಾದ ಚರ್ಚೆಯಲ್ಲಿ ಬರುಣ್ ದಾಸ್, ಮಹಾನಾರ್ಯಮನ್ ಸಿಂಧಿಯಾ

“ಈ ಕಾರ್ಯಕ್ರಮವು ಕೇವಲ ಮಕ್ಕಳಿಗೆ ವೇದಿಕೆಯನ್ನು ನೀಡುವುದು ಮಾತ್ರವಲ್ಲ. ಅವರಿಗೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಲು ಅವರಿಗೆ ಬೇಕಾದ ಉಪಕರಣಗಳು ಮತ್ತು ಅವಕಾಶಗಳನ್ನು ಸಹ ಒದಗಿಸಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಂಡಿಯನ್ ಟೈಗರ್ಸ್-ಟೈಗ್ರೆಸಸ್ ಟ್ಯಾಲೆಂಟ್ ಹಂಟ್ ವಿಭಿನ್ನ ಯೋಜನೆಯಾಗಿದೆ” ಎಂದು ಸಿಂಧಿಯಾ ಅವರು ಹೇಳಿದ್ದಾರೆ.

“ನಾವು ಸಾಮಾಜಿಕ ಒಳಗೊಳ್ಳುವಿಕೆಯೊಂದಿಗೆ, ಗ್ರೇಟ್ ಇಂಡಿಯನ್ ಫುಟ್‌ಬಾಲ್ ಕನಸನ್ನು ನನಸಾಗಿಸಲು  ಬದ್ಧರಾಗಿದ್ದೇವೆ. ‘ಇಂಡಿಯನ್ ಟೈಗರ್ಸ್ ಮತ್ತು ಟೈಗ್ರೆಸಸ್’ ನನ್ನ ವೈಯಕ್ತಿಕ ಯೋಜನೆಯಾಗಿದೆ. ಅಸಾಧಾರಣ ಯುವ ಫುಟ್‌ಬಾಲ್ ಆಟಗಾರರನ್ನು ಅನಾವರಣಗೊಳಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿರುವ ಮಹಾನಾರ್ಯಮನ್ ಸಿಂಧಿಯಾ ಅವರ ಮಾರ್ಗದರ್ಶನವು ಭಾರತೀಯ ಫುಟ್‌ಬಾಲ್‌ನ ಭವಿಷ್ಯದ ಮೇಲೆ ಅರ್ಥಪೂರ್ಣ ಪ್ರಭಾವ ಬೀರಲಿದೆ ಎಂದು  ಟಿವಿ9 ನೆಟ್​ವರ್ಕ್ ಸಿಇಒ/ ಎಂಡಿ ಬರುಣ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ಕಾರ್ಯಕ್ರಮದಲ್ಲಿ  ಟಿವಿ9 ನೆಟ್‌ವರ್ಕ್‌ನ ಅತಿದೊಡ್ಡ ಫುಟ್‌ಬಾಲ್ ಪ್ರತಿಭಾನ್ವೇಷಣೆಯನ್ನು ಅನುಮೋದಿಸಿದ ಜರ್ಮನ್​ ಫುಟ್​ಬಾಲ್ ಅಸೋಸಿಯೇಷನ್​ನ ಡೈರೆಕ್ಟರ್ ಕೇ ಡೊಮ್ಮ್​ಲಾಝ್, ಇಂಡಿಯನ್ ಟೈಗರ್ಸ್-ಟೈಗ್ರೆಸಸ್​​​ ಟ್ಯಾಲೆಂಟ್ ಹಂಟ್​ನ ರಾಯಭಾರಿಯಾಗಿರುವ ಮಹಾನಾರ್ಯಮನ್ ಸಿಂಧಿಯಾ ಅವರನ್ನು ಜರ್ಮನ್ ಫುಟ್ಬಾಲ್ ತಂಡದ ಪಂದ್ಯಗಳನ್ನು ವೀಕ್ಷಿಸಲು ಆಹ್ವಾನಿಸಿದರು.

ಏಷ್ಯಾ ಪೆಸಿಫಿಕ್ ಮುಖ್ಯಸ್ಥರಾದ ಜೂಲಿಯಾ ಫಾರ್, ಬೊರುಸ್ಸಿಯಾ ಡಾರ್ಟ್‌ಮಂಡ್ ಮತ್ತು REISPO ಸಿಇಒ ಗೆರ್ಹಾರ್ಡ್ ರೀಡ್ಲ್ ಅವರು ಸಹ ಮಹಾನಾರ್ಯಮನ್ ಸಿಂಧಿಯಾ ಅವರನ್ನು ಅಸೋಸಿಯೇಷನ್‌ನಲ್ಲಿ ಸ್ವಾಗತಿಸಿದರು. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಫುಟ್‌ಬಾಲ್ ಪ್ರತಿಭಾನ್ವೇಷಣೆಗೆ ಹೊಸ ವೇಗವನ್ನು ನೀಡಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಟಿವಿ9 ನೆಟ್​ವರ್ಕ್​ ಸಿಇಒ ಬರುಣ್ ದಾಸ್ ಅವರೊಂದಿಗೆ ಮಹಾನಾರ್ಯಮನ್ ಸಿಂಧಿಯಾ

ಏನಿದು ಇಂಡಿಯನ್ ಟೈಗರ್ಸ್-ಟೈಗ್ರೆಸಸ್ ಟ್ಯಾಲೆಂಟ್ ಹಂಟ್?

ಇಂಡಿಯನ್ ಟೈಗರ್ಸ್-ಟೈಗರ್ಸೆಸ್ ಟ್ಯಾಲೆಂಟ್ ಹಂಟ್ ಎಂಬುದು ದೇಶದಲ್ಲಿನ ಯುವ ಫುಟ್​ಬಾಲ್ ಆಟಗಾರರನ್ನು ಗುರುತಿಸುವ ಪ್ರತಿಭಾನ್ವೇಷನಾ ಕಾರ್ಯಕ್ರಮ. ಜರ್ಮನಿಯ ಬುಂಡೆಸ್ಲಿಗಾ ಮತ್ತು ಡಿಎಫ್‌ಬಿ-ಪೋಕಲ್ ಸಹಯೋಗದೊಂದಿಗೆ ಟಿವಿ9 ನೆಟ್​ವರ್ಕ್ ಈ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಭಾರತದಲ್ಲಿ ಆಯೋಜಿಸುತ್ತಿದೆ.

ಈ ಮೂಲಕ ಭಾರತದ ಪ್ರತಿಯೊಂದು ಮೂಲೆಯಲ್ಲಿರುವ ಫುಟ್​ಬಾಲ್ ಪ್ರತಿಭೆಗಳನ್ನು ಅನ್ವೇಷಿಸಲು ಯೋಜನೆ ರೂಪಿಸಲಾಗಿದೆ.  ಇದಕ್ಕಾಗಿ 1 ಲಕ್ಷ  ಶಾಲೆಗಳಲ್ಲಿ ಪ್ರತಿಭಾನ್ವೇಷಣೆ ನಡೆಯಲಿದ್ದು, ಈ ಮೂಲಕ ಒಟ್ಟು 40 ಫುಟ್​ಬಾಲ್ ತಾರೆಗಳನ್ನು ಆಯ್ಕೆ ಮಾಡಲಿದ್ದಾರೆ. ಹೀಗೆ ಆಯ್ಕೆಯಾದ 20 ಹುಡುಗರು ಹಾಗೂ 20 ಹುಡುಗಿಯರನ್ನು ಜರ್ಮನಿ/ಆಸ್ಟ್ರಿಯಾಗೆ ಕಳುಹಿಸಿ ಫುಟ್​ಬಾಲ್ ತರಬೇತಿ ಒದಗಿಸಲಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಒದಗಿಸುವ ಮೂಲಕ ಭಾರತದಲ್ಲಿ ಫುಟ್‌ಬಾಲ್​ನ ಹೊಸ ಯುಗವನ್ನು ಆರಂಭಿಸಲು ಟಿವಿ9 ನೆಟ್​ವರ್ಕ್ ಯೋಜನೆ ರೂಪಿಸಿದೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ಭಾಗವಹಿಸಲು, ಭೇಟಿ ನೀಡಿ: www.indiantigersandtigresses.com

Published On - 2:06 pm, Tue, 10 September 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ