ಬಾಗಲಕೋಟೆ; ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಯರು
ಬಾಗಲಕೋಟೆ ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ, ಚಂಡೆ ವಾದ್ಯ, ಉಡುಗೆ ತೊಡುಗೆ, ಹೂವಿನ ರಂಗೋಲಿ ಗಮನ ಸೆಳೆದಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದಾರೆ. ಕೇರಳದಲ್ಲಿ ಜಾತಿ, ಧರ್ಮ ಎನ್ನದೆ ಸರ್ವರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸಿದ್ದಾರೆ.
ಬಾಗಲಕೋಟೆ, ಸೆ.10: ಬಾಗಲಕೋಟೆ ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೆಡಿಕಲ್, ನರ್ಸಿಂಗ್ ಸೇರಿದಂತೆ ವಿವಿಧ ಅಧ್ಯಯನ ಮಾಡುತ್ತಿರುವ ಕೇರಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಓಣಂ ಆಚರಣೆ ಮಾಡಲಾಗಿದೆ. ಕೇರಳದಲ್ಲಿ ಜಾತಿ, ಧರ್ಮ ಎನ್ನದೆ ಸರ್ವರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸಿದ್ದಾರೆ.
ಕೇರಳದ ಜನರಿಗೆ ಪ್ರಮುಖ ವಾರ್ಷಿಕ ಕಾರ್ಯಕ್ರಮ ಓಣಂ. ಸದ್ಯ ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಕಾಲೇಜ್ ಕ್ಯಾಂಪಸ್ ನ ಶಿವಾಲಯ ದೇವಾಲಯದಿಂದ ಮೆರವಣಿಗೆ ಮಾಡಿದ್ದಾರೆ. ತಮ್ಮ ಮನೆಯಲ್ಲಿ ಪ್ರತಿ ವರ್ಷ ಓಣಂ ಆಚರಿಸುತ್ತೇವೆ. ಈಗ ನಮ್ಮ ಕಾಲೇಜ್ ನಲ್ಲಿ ಎಲ್ಲ ಸ್ನೇಹಿತರ ಜೊತೆ ಹಬ್ಬ ಆಚರಿಸುತ್ತಿರುವ ಬಗ್ಗೆ ವಿದ್ಯಾರ್ಥಿನಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಓಣಂ ಆಚರಣೆಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಮೆಡಿಕಲ್ ಕಾಲೇಜ್ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಸೇರಿದಂತೆ ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ, ಚಂಡೆ ವಾದ್ಯ, ಉಡುಗೆ ತೊಡುಗೆ, ಹೂವಿನ ರಂಗೋಲಿ ಗಮನ ಸೆಳೆದಿದೆ,
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ