PKL 2024 Final: ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಪುಣೇರಿ ಪಲ್ಟನ್- ಹರಿಯಾಣ ಸ್ಟೀಲರ್ಸ್

|

Updated on: Mar 01, 2024 | 4:06 PM

PKL 2024 Final: ಶುಕ್ರವಾರ ಅಂದರೆ ಇಂದು ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಸೀಸನ್ 10 ರ ಫೈನಲ್‌ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನೊಂದು ವಿಶೇಷ ಸಂಗತಿಯೆಂದರೆ ಉಭಯ ತಂಡಗಳೂ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿವೆ.

PKL 2024 Final: ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಪುಣೇರಿ ಪಲ್ಟನ್- ಹರಿಯಾಣ ಸ್ಟೀಲರ್ಸ್
ಪ್ರೊ ಕಬಡ್ಡಿ ಲೀಗ್
Follow us on

ಶುಕ್ರವಾರ ಅಂದರೆ ಇಂದು ನಡೆಯಲಿರುವ ಪ್ರೊ ಕಬಡ್ಡಿ ಲೀಗ್ (Pro Kabaddi League) ಸೀಸನ್ 10 ರ ಫೈನಲ್‌ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಹರಿಯಾಣ ಸ್ಟೀಲರ್ಸ್ (Haryana Steelers vs Puneri Paltan) ತಂಡಗಳು ಮುಖಾಮುಖಿಯಾಗುತ್ತಿವೆ. ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ 37-21 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮತ್ತೊಂದೆಡೆ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 31-27 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಇದೀಗ ಈ ಎರಡೂ ತಂಡಗಳ ನಡುವೆ ಚಾಂಪಿನ್ ಪಟ್ಟಕ್ಕಾಗಿ ಕಾದಾಟ ನಡೆಯಲ್ಲಿದೆ.

ಎರಡನೇ ಬಾರಿಗೆ ಫೈನಲ್

ಕಳೆದ ಸೀಸನ್​ನಲ್ಲಿ ಫೈನಲ್ ಪ್ರವೇಶಿಸಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿದ್ದ ಪುಣೇರಿ ಪಲ್ಟನ್ ತಂಡ ಸತತವಾಗಿ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಜಯಿಸುವ ಮತ್ತೊಂದು ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಇನ್ನು ಈ 10ನೇ ಆವೃತ್ತಿಯಲ್ಲಿ ತಂಡದ ಪ್ರದರ್ಶನವನ್ನು ನೋಡುವುದಾದರೆ.. ಈ ಸೀಸನ್​ನಲ್ಲಿ 23 ಪಂದ್ಯಗಳನ್ನಾಡಿರುವ ಪುಣೇರಿ ಪಲ್ಟನ್ ತಂಡ 18 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿದೆ.

ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ

ಇತ್ತ ಹರಿಯಾಣ ಸ್ಟೀಲರ್ಸ್ ಕೂಡ ಈ ಸೀಸನ್​ನಲ್ಲಿ ಆಡಿದ 23 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದು, 8 ಪಂದ್ಯಗಳಲ್ಲಿ ಸೋತಿದ್ದಾರೆ. ಎರಡೂ ತಂಡಗಳ ಪ್ರದರ್ಶನವನ್ನು ಗಮಿಸಿದರೆ, ಹರಿಯಾಣ ಸ್ಟೀಲರ್ಸ್​ಗಿಂತ ಪುಣೇರಿ ಪಲ್ಟನ್ ತಂಡದ ಗೆಲುವಿನ ಸಂಖ್ಯೆ ಅಧಿಕವಾಗಿದೆ. ಆದರೆ ಫೈನಲ್​ನಲ್ಲಿ ಯಾವ ತಂಡ ಅದ್ಭುತ ಪ್ರದರ್ಶನ ನೀಡುತ್ತದೋ ಅದಕ್ಕೆ ಪ್ರಶಸ್ತಿ ಲಭಿಸಲಿದೆ. ಇನ್ನೊಂದು ವಿಶೇಷ ಸಂಗತಿಯೆಂದರೆ ಉಭಯ ತಂಡಗಳೂ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸುವ ಗುರಿಯೊಂದಿಗೆ ಅಖಾಡಕ್ಕಿಳಿಯುತ್ತಿವೆ.

ಇನ್ನು ಈ ಫೈನಲ್ ಪಂದ್ಯದ ಬಗ್ಗೆ ಹೇಳುವುದಾದರೆ.. 10ನೇ ಸೀಸನ್​ನ ಫೈನಲ್ ಪಂದ್ಯ ಮಾರ್ಚ್ 1 ರಂದು ಅಂದರೆ ಇಂದು ನಡೆಯಲಿದೆ. ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಈ ಫೈನಲ್ ಹಣಾಹಣಿಗೆ ಆತಿಥ್ಯವಹಿಸುತ್ತಿದೆ. ಪಂದ್ಯವು ರಾತ್ರಿ 08 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತದೆ.

ಎರಡೂ ತಂಡಗಳು

ಪುಣೇರಿ ಪಲ್ಟನ್ ತಂಡ: ಅಭಿನೇಶ್ ನಡರಾಜನ್, ಗೌರವ್ ಖಾತ್ರಿ, ಸಂಕೇತ್ ಸಾವಂತ್, ಪಂಕಜ್ ಮೋಹಿತೆ, ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ಆಕಾಶ್ ಶಿಂಧೆ, ಬಾದಲ್ ಸಿಂಗ್, ಆದಿತ್ಯ ಶಿಂಧೆ, ಮೊಹಮ್ಮದ್ರೇಜಾ ಶಾದ್ಲೂಯಿ ಚಿಯಾನ್ನೆ, ವಾಹಿದ್ ರೆಜೈಮರ್, ಅಹ್ಮದ್ ಮುಸ್ತಫಾ ಇನಾಮದಾರ್.

ಹರಿಯಾಣ ಸ್ಟೀಲರ್ಸ್ ತಂಡ: ಚಂದ್ರನ್ ರಂಜಿತ್, ಕೆ ಪ್ರಪಂಜನ್, ಸಿದ್ದಾರ್ಥ್ ದೇಸಾಯಿ, ವಿನಯ್, ತೇಜಸ್ ಪಾಟೀಲ್, ಶಿವಂ ಪತಾರೆ, ವಿಶಾಲ್ ಟೈಟ್, ಘನಶ್ಯಾಮ್ ಮಗರ್, ಹಸನ್ ಬಲ್ಬೂಲ್, ಹರ್ದೀಪ್, ಜೈದೀಪ್ ದಹಿಯಾ, ರಾಹುಲ್ ಸೇಠಪಾಲ್, ರವೀಂದ್ರ ಚೌಹಾಣ್, ಮೋಹಿತ್ ನಂದಲ್, ಮೋನು ಕು ಹೂಡ, ಹರ್ಷ್, ಸನ್ನಿ ಸೆಹ್ರಾವತ್, ಮೋಹಿತ್, ಹಿಮಾಂಶು ಚೌಧರಿ, ಆಶಿಶ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ