PKL 2024 Final: ಪುಣೇರಿ ಪಲ್ಟನ್​ಗೆ ಪ್ರೊ ಕಬಡ್ಡಿ ಲೀಗ್‌ ಸೀಸನ್ 10 ಕಿರೀಟ

PKL 2024 Final: ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ 10 ನೇ ಸೀಸನ್‌ನ ಅಂತಿಮ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್‌ ಟ್ರೋಫಿಯನ್ನು ಎತ್ತಿಹಿಡಿದಿದೆ.

PKL 2024 Final: ಪುಣೇರಿ ಪಲ್ಟನ್​ಗೆ ಪ್ರೊ ಕಬಡ್ಡಿ ಲೀಗ್‌ ಸೀಸನ್ 10 ಕಿರೀಟ
ಪುಣೇರಿ ಪಲ್ಟನ್​
Follow us
|

Updated on:Mar 01, 2024 | 10:23 PM

ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ (Pro Kabaddi League) 10 ನೇ ಸೀಸನ್‌ನ ಅಂತಿಮ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಹರಿಯಾಣ ಸ್ಟೀಲರ್ಸ್ ತಂಡವನ್ನು (Haryana Steelers vs Puneri Paltan) ಸೋಲಿಸಿ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್‌ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಪುಣೇರಿ ಪಲ್ಟನ್ 28-25 ಅಂತರದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ಪರ ಅದ್ಭುತ ಪ್ರದರ್ಶನ ನೀಡಿದ ಪಂಕಜ್ ಮೋಹಿತೆ ಮತ್ತು ಮೋಹಿತ್ ಗೋಯೆಟ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಆರಂಭದಿಂದಲೇ ಪಲ್ಟನ್ ಪ್ರಾಬಲ್ಯ

ಈ ಲೀಗ್​ನಲ್ಲಿ ಪುಣೇರಿ ಪಲ್ಟನ್ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತು. ಅದರಂತೆ ಲೀಗ್ ಹಂತದಲ್ಲಿ ಒಟ್ಟು 96 ಅಂಕಗಳನ್ನು ಗಳಿಸಿದ್ದ ಪಲ್ಟನ್ ಪಡೆ ಅಂತಿಮ ಪಂದ್ಯದ ಮೊದಲಾರ್ಧದಲ್ಲಿಯೂ ಅದೇ ಆಟವನ್ನು ಮುಂದುವರೆಸಿತು. ಅದರಂತೆ ಮೊದಲಾರ್ಧವನ್ನು 13-10 ಮುನ್ನಡೆಯೊಂದಿಗೆ ಕೊನೆಗೊಳಿಸಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪುಣೇರಿ ಪರ ಪಂಕಜ್ ಮೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ನಾಲ್ಕು ಪ್ರಮುಖ ಅಂಕಗಳನ್ನು ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಸಮಬಲದ ಹೋರಾಟ

ಮೊದಲಾರ್ಧದಲ್ಲಿ 3 ಅಂಕಗಳ ಹಿನ್ನಡೆ ಅನುಭವಿಸಿದ್ದ ಹರಿಯಾಣ ತಂಡ ದ್ವಿತೀಯಾರ್ಧದಲ್ಲಿ ಪಂದ್ಯದಲ್ಲಿ ಕಂಬ್ಯಾಕ್ ಮಾಡಲು ಪ್ರಯತ್ನಿಸಿತು. ಆದರೆ ಇದಕ್ಕೆ ಪುಣೇರಿ ತಂಡ ಅವಕಾಶ ನೀಡಲಿಲ್ಲ. ದ್ವಿತೀಯಾರ್ಧದಲ್ಲಿ  ಉಭಯ ತಂಡಗಳು ತಲಾ 15 ಅಂಕ ಸಂಪಾದಿಸಿ ಪಂದ್ಯವನ್ನು ರೋಚಕಗೊಳಿಸಿದರು. ಆದರೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ ಸಾಧಿಸಿದ ಮುನ್ನಡೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ ತಲಾ 43 ರೇಡ್‌ಗಳು ನಡೆದವು. ಇದರಲ್ಲಿ ಹರಿಯಾಣ ಸ್ಟೀಲರ್ಸ್ 15 ಯಶಸ್ವಿ ರೈಡ್‌ಗಳನ್ನು ಮಾಡಿದ್ದರೆ, ಪುಣೇರಿ ಪಲ್ಟನ್ 12 ಯಶಸ್ವಿ ರೈಡ್‌ಗಳನ್ನು ಮಾಡಿತು. ಅಂತಿಮವಾಗಿ  ಲೀಗ್ ಉದ್ದಕ್ಕೂ ಅತ್ಯುತ್ತಮವಾಗಿ ಡಿಫೆಂಡರ್ ಪಾತ್ರನಿರ್ವಹಿಸಿದ ಇರಾನ್ ಆಟಗಾರ ಮೊಹಮ್ಮದ್ರೇಜಾ ಅವರಿಗೆ ಈ ಸೀಸನ್ ಅತ್ಯುತ್ತಮ ಡಿಫೆಂಡರ್ ಆಟಗಾರ ಪ್ರಶಸ್ತಿಯೂ ಲಭಿಸಿತು.

ಎರಡೂ ತಂಡಗಳು

ಪುಣೇರಿ ಪಲ್ಟನ್ ತಂಡ: ಅಭಿನೇಶ್ ನಡರಾಜನ್, ಗೌರವ್ ಖಾತ್ರಿ, ಸಂಕೇತ್ ಸಾವಂತ್, ಪಂಕಜ್ ಮೋಹಿತೆ, ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ಆಕಾಶ್ ಶಿಂಧೆ, ಬಾದಲ್ ಸಿಂಗ್, ಆದಿತ್ಯ ಶಿಂಧೆ, ಮೊಹಮ್ಮದ್ರೇಜಾ ಶಾದ್ಲೂಯಿ ಚಿಯಾನ್ನೆ, ವಾಹಿದ್ ರೆಜೈಮರ್, ಅಹ್ಮದ್ ಮುಸ್ತಫಾ ಇನಾಮದಾರ್.

ಹರಿಯಾಣ ಸ್ಟೀಲರ್ಸ್ ತಂಡ: ಚಂದ್ರನ್ ರಂಜಿತ್, ಕೆ ಪ್ರಪಂಜನ್, ಸಿದ್ದಾರ್ಥ್ ದೇಸಾಯಿ, ವಿನಯ್, ತೇಜಸ್ ಪಾಟೀಲ್, ಶಿವಂ ಪತಾರೆ, ವಿಶಾಲ್ ಟೈಟ್, ಘನಶ್ಯಾಮ್ ಮಗರ್, ಹಸನ್ ಬಲ್ಬೂಲ್, ಹರ್ದೀಪ್, ಜೈದೀಪ್ ದಹಿಯಾ, ರಾಹುಲ್ ಸೇಠಪಾಲ್, ರವೀಂದ್ರ ಚೌಹಾಣ್, ಮೋಹಿತ್ ನಂದಲ್, ಮೋನು ಕು ಹೂಡ, ಹರ್ಷ್, ಸನ್ನಿ ಸೆಹ್ರಾವತ್, ಮೋಹಿತ್, ಹಿಮಾಂಶು ಚೌಧರಿ, ಆಶಿಶ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Fri, 1 March 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್