ಎರಡನೇ ಹಂತದ ಸಂಸದ್ ಖೇಲ್ ಮಹಾಕುಂಭವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
Sansad Khel Mahakumbh: 2022-23 ನೇ ಸಾಲಿನ ಎರಡನೇ ಹಂತದ ಸಂಸದ್ ಖೇಲ್ ಮಹಾಕುಂಭ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಇಂದಿನಿಂದ ಅಂದರೆ ಜನವರಿ 18 ರಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕ್ರೀಡಾಕೂಡವನ್ನು ಉದ್ಘಾಟಿಸಿದ್ದಾರೆ.

2022-23 ನೇ ಸಾಲಿನ ಎರಡನೇ ಹಂತದ ಸಂಸದ್ ಖೇಲ್ ಮಹಾಕುಂಭ (sansad khel mahakumbh) ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಇಂದಿನಿಂದ ಅಂದರೆ ಜನವರಿ 18 ರಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕ್ರೀಡಾಕೂಡವನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಕಾರ್ಯಕ್ರಮದ ಸ್ಥಳವಾದ ಶಹೀದ್ ಸತ್ಯವಾನ್ ಸಿಂಗ್ ಕ್ರೀಡಾಂಗಣದಲ್ಲಿ ಆಟಗಾರರು ಮತ್ತು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು, “ಕಳೆದ 8 ವರ್ಷಗಳಲ್ಲಿ ಇಡೀ ದೇಶ ಹಾಗೂ ವಿಶ್ವವೇ ನವ ಭಾರತಕ್ಕೆ ಸಾಕ್ಷಿಯಾಗಿದೆ. ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಭಾರತಕ್ಕೆ ಜಗತ್ತನ್ನು ಮುನ್ನಡೆಸುವ ಸಾಮರ್ಥ್ಯ ಬರಲು ಪ್ರಧಾನಿ ಮೋದಿ ಕಾರಣ ಎಂದು ಇಡೀ ಜಗತ್ತು ಒಪ್ಪಿಕೊಂಡಿದೆ” ಎಂದರು.
ಆಟವೂ ಒಂದು ಸಾಧನಾ ಮತ್ತೆ ತಪಸ್ಸಿನಂತೆ- ಮೋದಿ
ಬಳಿಕ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಇದು ನಮ್ಮ ಬಸ್ತಿ ಮಹರ್ಷಿ ವಶಿಷ್ಟ ಕೀ ಪವನ್ ಧರ್ತಿ ಹೈ ಅವರ ತಪಸ್ಸು ಮತ್ತು ತ್ಯಾಗದ ಭೂಮಿಯಾಗಿದೆ. ಆಟಗಾರನಿಗೆ ಅವನ ಆಟವೂ ಒಂದು ಸಾಧನಾ ಮತ್ತೆ ತಪಸ್ಸಿನಂತೆ. ಯಶಸ್ವಿ ಆಟಗಾರನು ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ಗೆಲುವನ್ನು ಸಾಧಿಸಬೇಕು. ನಮ್ಮ ಸಂಸತ್ತಿನ ಪ್ರಯತ್ನದಿಂದ ಬಸ್ತಿಯಲ್ಲಿ ಬೃಹತ್ ಖೇಲ್ ಮಹಾಕುಂಭವನ್ನು ಆಯೋಜಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.
ಭಾರತೀಯ ಕ್ರೀಡೆಗಳಲ್ಲಿ ಸಾಂಪ್ರದಾಯಿಕವಾಗಿ ನುರಿತ ಸ್ಥಳೀಯ ಆಟಗಾರರಿಗೆ ಖೇಲ್ ಮಹಾಕುಂಭವು ಹೊಸ ಅವಕಾಶವನ್ನು ನೀಡುತ್ತದೆ. ಭಾರತದಲ್ಲಿ ಸುಮಾರು ಇನ್ನೂರು ಸಂಸದೀಯ ಕ್ಷೇತ್ರಗಳಲ್ಲಿ ಇದೇ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಸಂಸದ ಖೇಲ್ ಮಹಾಕುಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಕ್ರೀಡಾ ಪಟುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಹೆಚ್ಚಿನ ತರಬೇತಿಗೆ ಆಯ್ಕೆ ಮಾಡಲಾಗುತ್ತಿದೆ. ಇದರಿಂದ ದೇಶದ ಯುವ ಶಕ್ತಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಮಹಾಕುಂಭದಲ್ಲಿ 44000 ಕ್ಕೂ ಹೆಚ್ಚು ಯುವಕರು ಭಾಗವಹಿಸುತ್ತಿದ್ದು, ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು ಎಂದು ನನಗೆ ತಿಳಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ನನ್ನ ಎಲ್ಲಾ ಸ್ನೇಹಿತರಿಗೆ ಶುಭಾಶಯಗಳು ಎಂದರು.
IND vs NZ: 14 ಬೌಂಡರಿ, 2 ಸಿಕ್ಸರ್; ಸತತ ಎರಡನೇ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್!
50,000 ಕ್ರೀಡಾಪಟುಗಳು ಭಾಗಿ
ಈ ಸಂಸದ ಖೇಲ್ ಮಹಾಕುಂಭದಲ್ಲಿ ಸುಮಾರು 2,90,000 ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು 50,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಎಂಟು ದಿನಗಳಲ್ಲಿ 22 ಬಗೆಯ ಕ್ರೀಡೆಗಳು ಹಾಗೂ ಎಂಟು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮವು ನಮೋ ಆಪ್ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ.
ಜನವರಿ 18 ರಿಂದ 28 ರವರೆಗೆ ಜಿಲ್ಲಾ ಮಟ್ಟದಲ್ಲಿ ಖೇಲ್ ಮಹಾಕುಂಭ ನಡೆಯಲಿದೆ. ಇದರಲ್ಲಿ ಕ್ರಿಕೆಟ್, ಕಬಡ್ಡಿ, ಖೋ-ಖೋ, ಹ್ಯಾಂಡ್‌ಬಾಲ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಹಾಕಿ, ಫುಟ್‌ಬಾಲ್, ವಾಲಿಬಾಲ್, 100, 200, 400, 800, 1500, 3000 ಮೀಟರ್ ಓಟ, ಶಾಟ್‌ಪುಟ್, ಲಾಂಗ್ ಜಂಪ್, ಎತ್ತರ ಜಿಗಿತ, ಟೇಬಲ್ ಟೆನ್ನಿಸ್, ಚೆಸ್, ಕೇರಂ ಬೋರ್ಡ್, ಟೇಕ್ವಾಂಡೋ ಸೇರಿದಂತೆ ಒಟ್ಟು 22 ಬಗೆಯ ಸ್ಪರ್ಧೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಡಿ ಪ್ರಬಂಧ, ಗಾಯನ, ಕವನ ವಾಚನ, ಪೋಸ್ಟರ್ ಸೇರಿದಂತೆ ಎಂಟು ಸ್ಪರ್ಧೆಗಳು ನಡೆಯಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Wed, 18 January 23