Malaysia Masters 2022: 26 ನಿಮಿಷದಲ್ಲಿ ಎದುರಾಳಿಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು..!

| Updated By: ಪೃಥ್ವಿಶಂಕರ

Updated on: Jul 07, 2022 | 3:29 PM

Malaysia Masters 2022: ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ, ಸಿಂಧ್ ಅವರು ಚೀನಾದ ಶಟ್ಲರ್ ಜಾಂಗ್ ಯಿ ಮಾನ್ ಅವರನ್ನು ಸೋಲಿಸುವ ಮೂಲಕ ಮಲೇಷ್ಯಾ ಮಾಸ್ಟರ್ಸ್‌ನ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Malaysia Masters 2022: 26 ನಿಮಿಷದಲ್ಲಿ ಎದುರಾಳಿಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು..!
PV Sindhu
Follow us on

ಎರಡು ಬಾರಿ ಒಲಿಂಪಿಕ್ ವಿಜೇತ ಭಾರತೀಯ ಶಟ್ಲರ್ ಪಿವಿ ಸಿಂಧು (PV Sindhu) ಪ್ರಸ್ತುತ ಮಲೇಷ್ಯಾ ಮಾಸ್ಟರ್ಸ್‌ (Malaysia Masters 2022) ನಲ್ಲಿ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ, ಸಿಂಧ್ ಅವರು ಚೀನಾದ ಶಟ್ಲರ್ ಜಾಂಗ್ ಯಿ ಮಾನ್ ಅವರನ್ನು ಸೋಲಿಸುವ ಮೂಲಕ ಮಲೇಷ್ಯಾ ಮಾಸ್ಟರ್ಸ್‌ನ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕೊನೆಯ-16ರ ಹೋರಾಟದಲ್ಲಿ ಸಿಂಧು ಕೇವಲ 26 ನಿಮಿಷಗಳಲ್ಲಿ ಚೀನಾದ ಷಟ್ಲರ್ ಅನ್ನು 21-12, 21-10 ನೇರ ಗೇಮ್‌ನಲ್ಲಿ ಸೋಲಿಸಿದರು. ಸಿಂಧು ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರೂ, ಪುರುಷರ ಸಿಂಗಲ್ಸ್‌ ಕೊನೆಯ-16ರಲ್ಲಿ ಭಾರತದ ಬಿ ಸಾಯಿ ಪ್ರಣಿತ್ ಮತ್ತು ಪರುಪಳ್ಳಿ ಕಶ್ಯಪ್‌ (Parupalli Kashyap) ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ಜರ್ಮನ್ ಓಪನ್‌ನ ಎರಡನೇ ಸುತ್ತಿನಲ್ಲಿ ಭಾರತದ ಷಟ್ಲರ್ ಪಿವಿ ಸಿಂಧು ಚೀನಾದ ಶಟ್ಲರ್ ಜಾಂಗ್ ಯಿ ಮಾನ್ ವಿರುದ್ಧ ಸೋತಿದ್ದರು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.ಅಂದಿನ ಪಂದ್ಯದಲ್ಲಿ ಜಾಂಗ್ ವಿರುದ್ಧ ಒಂದು ಗಂಟೆಯೊಳಗೆ ಆ ಪಂದ್ಯವನ್ನು ಸಿಂಧು ಕಳೆದುಕೊಂಡಿದ್ದರು. ಆದರೆ, ಮಲೇಷ್ಯಾ ಮಾಸ್ಟರ್ಸ್‌ನ ಎರಡನೇ ಸುತ್ತಿನಲ್ಲಿ ಹೈದರಾಬಾದಿ ಷಟ್ಲರ್ ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಆದಾಗ್ಯೂ, ಸಿಂಧ್‌ಗೆ ಕೊನೆಯ ಎಂಟರ ಘಟದ ಹೋರಾಟ ಸುಲಭವಲ್ಲ. ಮಲೇಷ್ಯಾ ಮಾಸ್ಟರ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ತಮ್ಮ ಕಠಿಣ ಎದುರಾಳಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ
England Playing XI: ಟಿ20 ಸ್ಪೆಷಲಿಸ್ಟ್​​​ಗಳನ್ನೇ ಹೊಂದಿರುವ ಇಂಗ್ಲೆಂಡ್​ಗೆ ಭಾರತದ ಸವಾಲು; ಹೇಗಿರಲಿದೆ ಪ್ಲೇಯಿಂಗ್ XI?
‘ಹೆಸರಿಗೆ ಮಾತ್ರ ಟೀಂ ಇಂಡಿಯಾ ಪರ ಆಡಿದ್ದಾರೆ’: ಪದೇ ಪದೇ ರಜೆ ಕೇಳುವ ಹಿರಿಯ ಆಟಗಾರರ ಮೇಲೆ ಬಿಸಿಸಿಐ ಗರಂ

ಇದನ್ನೂ ಓದಿ: Malayisa Matsers: ಕಠಿಣ ಪಂದ್ಯದಲ್ಲಿ ಗೆದ್ದ ಪಿವಿ ಸಿಂಧು; ಮತ್ತೆ ಮೊದಲ ಸುತ್ತಿನಲ್ಲೇ ಸೋತ ಸೈನಾ ನೆಹ್ವಾಲ್ ಔಟ್

ಆದರೆ ಇಂಡೋನೇಷ್ಯಾ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಸಾಯಿ ಪ್ರಣಿತ್, ಚೀನಾದ ಶಟ್ಲರ್ ಲಿ ಶೀ ಫೆಂಗ್ ವಿರುದ್ಧ ಸೋಲನುಭವಿಸಿದರು. ಫೆಂಗ್ ವಿರುದ್ಧದ 42 ನಿಮಿಷಗಳ ಹೋರಾಟದಲ್ಲಿ ಪ್ರಣಿತ್ 21-14, 21-18 ಅಂತರದಲ್ಲಿ ಸೋಲನುಭವಿಸಿದರು.

ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಭಾರತದ ಮತ್ತೋರ್ವ ಷಟ್ಲರ್ ಪರುಪಳ್ಳಿ ಕಶ್ಯಪ್ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಸೋತರು. ಗಿಂಟಿಂಗ್ 34 ನಿಮಿಷಗಳಲ್ಲಿ 21-10, 34-15ರಲ್ಲಿ ಪರುಪಳ್ಳಿಗೆ ಸೋಲಿನ ಆಘಾತ ನೀಡಿದರು.

Published On - 3:29 pm, Thu, 7 July 22