Malaysia Open 2022: ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಎಚ್‌ಎಸ್ ಪ್ರಣಯ್, ಪಿವಿ ಸಿಂಧು..!

Malaysia Open 2022: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಥಾಮಸ್ ಕಪ್‌ನಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‌ಎಸ್ ಪ್ರಣಯ್ ಅವರು ಗುರುವಾರ ಮಲೇಷ್ಯಾ ಓಪನ್ ಸೂಪರ್ 750 ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Malaysia Open 2022: ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಎಚ್‌ಎಸ್ ಪ್ರಣಯ್,  ಪಿವಿ ಸಿಂಧು..!
ಪ್ರಣಯ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 30, 2022 | 6:29 PM

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಥಾಮಸ್ ಕಪ್‌ನಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‌ಎಸ್ ಪ್ರಣಯ್ ಅವರು ಗುರುವಾರ ಮಲೇಷ್ಯಾ ಓಪನ್ ಸೂಪರ್ 750 ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಥಾಮಸ್ ಕಪ್‌ನಲ್ಲಿ ಭಾರತದ ಐತಿಹಾಸಿಕ ಪ್ರಶಸ್ತಿ ಗೆಲುವಿನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದ ಶ್ರೇಯಾಂಕ ರಹಿತ ಪ್ರಣಯ್, 30 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ. 4 ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು 15 21-7 ರಿಂದ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪ್ರಣಯ್ ನಿಧಾನಗತಿಯ ಆರಂಭ

ಕಳೆದ ವಾರ ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ 29 ವರ್ಷದ ಪ್ರಣಯ್, ಎರಡೂ ಪಂದ್ಯಗಳಲ್ಲಿ ನಿಧಾನಗತಿಯ ಆರಂಭವನ್ನು ಮಾಡಿದರು. ಆದರೆ ಒಮ್ಮೆ ಆವೇಗ ಪಡೆದ ಅವರು, ಭಾರತೀಯ ಆಟಗಾರ ಎದುರಾಳಿಗೆ ಯಾವುದೇ ಅವಕಾಶವನ್ನು ನೀಡದೆ ಸತತ 12 ಪಾಯಿಂಟ್ ಗಳಿಸಿದರು. ವಿಶ್ವದ ನಂ. 21 ನೇ ಶ್ರೇಯಾಂಕಿತ ಪ್ರಣಯ್ ಅವರು ಏಳನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ. ಅವರ ವಿರುದ್ಧ ಮೂರು ಪಂದ್ಯಗಳನ್ನು ಗೆದ್ದಿರುವ ಪ್ರಣಯ್, ಐದು ಪಂದ್ಯಗಳಲ್ಲಿ ಸೋತಿದ್ದಾರೆ.

ಇದನ್ನೂ ಓದಿ
Image
IND vs ENG 5th Test Match, Live Streaming: ಭಾರತ- ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯ ಯಾವ ಚಾನೆಲ್​ನಲ್ಲಿ ಪ್ರಸಾರ?
Image
ಕಾಮನ್‌ವೆಲ್ತ್ ಗೇಮ್ಸ್​ ತಯಾರಿಯಲ್ಲಿರುವ ಭಾರತ ಹಾಕಿ ಅಭ್ಯಾಸ ಶಿಬಿರದಲ್ಲಿ ಕೊರೊನಾ ಹಾವಳಿ; ಐವರಿಗೆ ಸೋಂಕು..!

ಚೆನ್ ಪ್ರಣಯ್ ವಿರುದ್ಧದ ಮೊದಲ ಗೇಮ್‌ನಲ್ಲಿ 4-1 ಮುನ್ನಡೆ ಸಾಧಿಸಲು ಉತ್ತಮ ಆರಂಭವನ್ನು ಮಾಡಿದರು. ಆದರೆ ಪ್ರಣಯ್ ತನ್ನ ತೀಕ್ಷ್ಣವಾದ ಸ್ಮ್ಯಾಷ್‌ಗಳ ಮೂಲಕ ವಿಶ್ವದ ನಾಲ್ಕನೇ ಶ್ರೇಯಾಂಕಿತನನ್ನು ಹಿಮ್ಮೆಟ್ಟಿಸಲು ಪುನರಾಗಮನ ಮಾಡಿದರು. ಪ್ರಣಯ್ 6-6 ರಲ್ಲಿ ಸಮಬಲ ಸಾಧಿಸಿ ನಂತರ 12-8ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು. ಪ್ರಣಯ್ ಈ ಮುನ್ನಡೆಯನ್ನು 18-13ಕ್ಕೆ ಏರಿಸಿದರು ನಂತರ ಕ್ರಾಸ್ ಕೋರ್ಟ್ ಸ್ಮ್ಯಾಶ್‌ನೊಂದಿಗೆ 17 ನಿಮಿಷಗಳಲ್ಲಿ ಮೊದಲ ಗೇಮ್ ಅನ್ನು ಗೆದ್ದರು. ಎರಡನೇ ಗೇಮ್‌ನಲ್ಲೂ, ಚೆನ್ 7-9 ರಿಂದ ಹಿನ್ನಡೆಯಲ್ಲಿದ್ದ ಪ್ರಣಯ್ ನಂತರ 4-4 ರಲ್ಲಿ ಸ್ಕೋರ್ ಸಮ ಮಾಡಿದರು. ಆದರೆ ನಂತರ ಪ್ರಣಯ್ ಸತತ 12 ಅಂಕಗಳೊಂದಿಗೆ ಗೇಮ್ ಮತ್ತು ಪಂದ್ಯವನ್ನು ಗೆದ್ದರು. ಇದಕ್ಕೂ ಮೊದಲು ಸಿಂಧು ಥಾಯ್ಲೆಂಡ್‌ನ ಆಟಗಾರ್ತಿಯೊಂದಿಗೆ ಮೊದಲ ಬಾರಿಗೆ ಆಡುತ್ತಿದ್ದು, ಭಾರತದ ಆಟಗಾರ್ತಿ ಎದುರಾಳಿಯ ಆಟವನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಂಡರು.

ಪಿವಿ ಸಿಂಧುಗೆ ಮೊದಲ ಗೇಮ್‌ನಲ್ಲಿ ಸೋಲು

ಮಾಜಿ ವಿಶ್ವ ಚಾಂಪಿಯನ್ ಸಿಂಧು ಥಾಯ್ಲೆಂಡ್‌ನ ಫಿತಯಾಪೋರ್ನ್ ಚೀವಾನ್ ಅವರ ಆಟಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡರು. ಮೊದಲ ಗೇಮ್ ಸೋತ 57 ನಿಮಿಷಗಳ ನಂತರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.7 ನೇ ಶ್ರೇಯಾಂಕಿತೆ ಸಿಂಧು 19-21 21-9 21-14 ರಲ್ಲಿ ತಮ್ಮ ಎದುರಾಳಿಯನ್ನು ಸೋಲಿಸಿದರು. ಏಳನೇ ಶ್ರೇಯಾಂಕದ ಸಿಂಧು ಮುಂದಿನ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಸಿಂಧು ಅವರು ತೈ ತ್ಸು ವಿರುದ್ಧ 15 ಪಂದ್ಯಗಳಲ್ಲಿ ಸೋತಿದ್ದು, ಕೇವಲ ಐದು ಪಂದ್ಯಗಳನ್ನು ಗೆದ್ದಿದ್ದಾರೆ.

ಸಿಂಧು ಕಠಿಣ ಹೋರಾಟ ನೀಡಿದರೂ 21ರ ಹರೆಯದ ಆಟಗಾರ್ತಿ ಅಂತಿಮವಾಗಿ ಮೊದಲ ಗೇಮ್ ಗೆದ್ದುಕೊಂಡರು. ಸಿಂಧು ಎರಡನೇ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ಆಟಗಾರ್ತಿಯರು 10-10ರಲ್ಲಿ ಸಮಬಲ ಹೊಂದಿದ್ದರು ಆದರೆ ಸಿಂಧು ಪಂದ್ಯದ ಅತ್ಯುತ್ತಮ ರ್ಯಾಲಿಯನ್ನು ಗೆದ್ದು 11-10ರಲ್ಲಿ ಮುನ್ನಡೆ ಸಾಧಿಸಿದರು. 13-10 ಮುನ್ನಡೆ ಸಾಧಿಸಿದ ಸಿಂಧು ನಂತರ ಅದನ್ನು 18-14ಕ್ಕೆ ಕೊಂಡೊಯ್ದರು. ಹೀಗಾಗಿ ಸುಲಭವಾಗಿ ಗೇಮ್ ಮತ್ತು ಪಂದ್ಯವನ್ನು ಗೆದ್ದರು. ಆದರೆ ಮಾಜಿ ಕಾಮನ್‌ವೆಲ್ತ್‌ ಚಾಂಪಿಯನ್‌ ಪರುಪಳ್ಳಿ ಕಶ್ಯಪ್‌ 19-21, 10-21ರಿಂದ ಥಾಯ್‌ಲೆಂಡ್‌ನ ಕುನ್ಲಾವುಟ್‌ ವಿಟಿದಾಸರ್ನ್‌ ವಿರುದ್ಧ ನಡೆದ 44 ನಿಮಿಷಗಳ ಪಂದ್ಯದಲ್ಲಿ ಸೋಲನುಭವಿಸಿದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಔಟ್

ಏತನ್ಮಧ್ಯೆ, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸ್ಥಳೀಯ ಜೋಡಿ ಗೋಹ್ ಜಿ ಫೀ ಮತ್ತು ನೂರ್ ಇಜುದ್ದೀನ್‌ಗೆ ವಾಕ್‌ಓವರ್ ನೀಡಿದರು. ಸಾತ್ವಿಕ್‌ಗೆ ಸ್ನಾಯು ಸೆಳೆತವಿದಿದ್ದರಿಂದ ಅವರ ಆಡಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಮುಂದೆ ಕಾಮನ್‌ವೆಲ್ತ್ ಗೇಮ್ಸ್‌ ಇರುವ ಕಾರಣ, ಕೋಚ್ ಮತ್ತು ಫಿಸಿಯೋ ಅವರನ್ನು ಆಡದಂತೆ ಸಲಹೆ ನೀಡಿದರು. ಹಾಗಾಗಿ ಸಾತ್ವಿಕ್-ಚಿರಾಗ್ ಆಡದಿರಲು ನಿರ್ಧರಿಸಿದ್ದಾರೆ.

Published On - 6:05 pm, Thu, 30 June 22