PV Sindhu: ಎರಡನೇ ಸುತ್ತಿನಲ್ಲೇ ಚೀನಾ ಆಟಗಾರ್ತಿ ಎದುರು ಸೋತು ಜರ್ಮನ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು!

Badminton: ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಗುರುವಾರ ಜರ್ಮನ್ ಓಪನ್‌ನಿಂದ ಹೊರಬಿದಿದ್ದಾರೆ.

PV Sindhu: ಎರಡನೇ ಸುತ್ತಿನಲ್ಲೇ ಚೀನಾ ಆಟಗಾರ್ತಿ ಎದುರು ಸೋತು ಜರ್ಮನ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು!
ಪಿವಿ ಸಿಂಧು
Follow us
TV9 Web
| Updated By: ಪೃಥ್ವಿಶಂಕರ

Updated on: Mar 10, 2022 | 5:53 PM

ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಗುರುವಾರ ಜರ್ಮನ್ ಓಪನ್‌ (German Open)ನಿಂದ ಹೊರಬಿದಿದ್ದಾರೆ. ಸಿಂಧು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರನಡೆದಿದ್ದಾರೆ. ಜಾಂಗ್ 21-14, 15-21, 21-14 ಅಂತರದಲ್ಲಿ ಸಿಂಧು ಅವರನ್ನು ಸೋಲಿಸಿದರು. ಸಿಂಧು ಅವರಿಗಿಂತ ಕೆಳ ಕ್ರಮಾಂಕದ ಆಟಗಾರ್ತಿಯಾಗಿರುವ ಜಾಂಗ್ ಎದುರು ಅವರ ಸೋಲು ಅಚ್ಚರಿ ಮೂಡಿಸಿದೆ. 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಸಿಂಧು ಅವರನ್ನು ಸೋಲಿಸಿದರು. ಸಿಂಧುಗೆ ಇದು ನಿರಾಶಾದಾಯಕ ಆರಂಭವಾಗಿದೆ. ಮುಂದಿನ ವಾರ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವ ಪ್ರಬಲ ಸ್ಪರ್ಧಿಗಳಲ್ಲಿ ಸಿಂಧು ಕೂಡ ಒಬ್ಬರಾಗಿದ್ದಾರೆ. ಸಿಂಧು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರಾಂಗ್‌ಫಾನ್ ಅವರನ್ನು ಸೋಲಿಸಿದ್ದರು.

ಒತ್ತಡ ಸೃಷ್ಟಿಸಿದ ಜಾಂಗ್ ಸಿಂಧು ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲಿ 5-5ರಲ್ಲಿ ಸಮಬಲ ಸಾಧಿಸಿದ ಜಾಂಗ್ ನಂತರ ವಿರಾಮದವರೆಗೂ 11-5 ಮುನ್ನಡೆ ಸಾಧಿಸಿದರು. ವಿರಾಮದ ನಂತರ ಮುನ್ನಡೆ ಕಾಯ್ದುಕೊಂಡ ಅವರು ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದುಕೊಂಡರು. ಆದರೆ, ಎರಡನೇ ಗೇಮ್‌ನಲ್ಲಿ ಸಿಂಧು ಪ್ರಬಲ ತಿರುಗೇಟು ನೀಡಿ ಗೇಮ್‌ ಗೆದ್ದರು. ಇಬ್ಬರ ನಡುವಿನ ಪೈಪೋಟಿ ತೀರಾ ಕಠಿಣವಾಗಿದ್ದರೂ ವಿರಾಮದವರೆಗೂ ಸಿಂಧು 11-10ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ವಿರಾಮದ ನಂತರ ನಿಧಾನವಾಗಿ ಗೆಲುವಿನತ್ತ ಸಾಗಿದ ಸಿಂಧು ಎರಡನೇ ಗೇಮ್ ಗೆದ್ದು ಪಂದ್ಯವನ್ನು ಮೂರನೇ ಗೇಮ್​ಗೆ ಕೊಂಡೊಯ್ದರು.

ಮೂರನೇ ಗೇಮ್‌ನಲ್ಲಿ ಜಾಂಗ್ ಪ್ರಬಲ ಪೈಪೋಟಿ ಆದರೂ ಎರಡನೇ ಗೇಮ್ ಸೋತರೂ ಚೀನಾದ ಆಟಗಾರ್ತಿ ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರಬಲ ಆಟ ಪ್ರದರ್ಶಿಸಿದ ಅವರು ವಿರಾಮದವರೆಗೆ 11-8 ಅಂಕಗಳನ್ನು ಗಳಿಸಿದ, ಮೂರು ಅಂಕಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದರು. ವಿರಾಮದ ನಂತರ ಸಿಂಧುಗೆ ಹೆಚ್ಚಿನ ಅವಕಾಶ ನೀಡದೆ ಸುಲಭವಾಗಿ ಪಂದ್ಯ ಗೆದ್ದು ಪಂದ್ಯ ಗೆದ್ದರು. ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ತೈ ತ್ಸು ಯಿಂಗ್ ಮತ್ತು ಜಪಾನ್‌ನ ಸಯಾಕಾ ತಕಾಶಿ ನಡುವಿನ ಪಂದ್ಯದ ವಿಜೇತರನ್ನು ಜಾಂಗ್ ಎದುರಿಸಲಿದ್ದಾರೆ.

ಆದರೆ, ಸಿಂಧು ಸೋಲಿನಿಂದ ಭಾರತದ ಸವಾಲು ಮುಗಿದಿಲ್ಲ. ಸೈನಾ ನೆಹ್ವಾಲ್ ಕೂಡ ಈ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಪಂದ್ಯವನ್ನು ಆಡಬೇಕಿದೆ. ಇದಲ್ಲದೆ ಪುರುಷರ ವಿಭಾಗದಲ್ಲಿ ಎಚ್.ಎಸ್.ಪ್ರಣೋಯ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಕೂಡ ಈ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ:Syed Modi Tournament: ಸೆಮಿಫೈನಲ್ ತಲುಪಿದ ಪಿವಿ ಸಿಂಧು! ಕ್ವಾರ್ಟರ್‌ಫೈನಲ್​ನಲ್ಲಿ ಸೋತ ಎಚ್ ಎಸ್ ಪ್ರಣಯ್

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ