Rafael Nadal: 10 ನೇ ಇಟಾಲಿಯನ್ ಓಪನ್ ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್! ಫೈನಲ್​ನಲ್ಲಿ ಸೋತ ಜೊಕೊವಿಕ್

ಈ ಗೆಲುವಿನೊಂದಿಗೆ ನಡಾಲ್ ಮತ್ತೊಂದು ಸಾಧನೆ ಮಾಡಿದ್ದಾರೆ. ಇದು ಅವರ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿ. ಇದರೊಂದಿಗೆ, ಅವರು ನಾಲ್ಕು ವಿಭಿನ್ನ ಪಂದ್ಯಾವಳಿಗಳನ್ನು 10 ಅಥವಾ ಹೆಚ್ಚಿನ ಬಾರಿ ಗೆದ್ದ ಆಟಗಾರರಾಗಿದ್ದಾರೆ.

Rafael Nadal: 10 ನೇ ಇಟಾಲಿಯನ್ ಓಪನ್ ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್! ಫೈನಲ್​ನಲ್ಲಿ ಸೋತ ಜೊಕೊವಿಕ್
ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್
Follow us
ಪೃಥ್ವಿಶಂಕರ
|

Updated on: May 17, 2021 | 6:35 PM

ಸ್ಪೇನ್‌ನ ರಾಫೆಲ್ ನಡಾಲ್ ಮತ್ತೊಮ್ಮೆ ಇಟಾಲಿಯನ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ಪಡೆದಿದ್ದು, ತಮ್ಮ ಸಾಮಥ್ಯ್ರವನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಭಾನುವಾರ ತಡವಾಗಿ ಆಡಿದ ಪಂದ್ಯದಲ್ಲಿ ನಡಾಲ್ ತನ್ನ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿಯನ್ನು 7-5, 1-6, 6-3 ಸೆಟ್‌ಗಳಿಂದ ತನ್ನ ತೀವ್ರ ಎದುರಾಳಿ ಸೆರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಗೆದ್ದುಕೊಂಡರು. ಈ ಪಂದ್ಯಾವಳಿಯ ಫೈನಲ್‌ನಲ್ಲಿ ನಡಾಲ್ ಜೊಕೊವಿಕ್ ವಿರುದ್ಧ ತಮ್ಮ ದಾಖಲೆಯನ್ನು 4-2ಕ್ಕೆ ಸುಧಾರಿಸಿದರು. ಇಲ್ಲಿಯವರೆಗೆ 57 ಪಂದ್ಯಗಳನ್ನು ಆಡಲಾಗಿದ್ದು, ಈ ಪೈಕಿ 29 ಜೊಕೊವಿಕ್ ಜಯಗಳಿಸಿದ್ದರೆ, 28 ಪಂದ್ಯಗಳಲ್ಲಿ ನಡಾಲ್ ಜಯಗಳಿಸಿದ್ದಾರೆ.

ಇದು ನಡಾಲ್ ಅವರ 36 ನೇ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿಯಾಗಿದೆ. ನಡಾಲ್ ಈ ವಿಚಾರದಲ್ಲಿ ಜೊಕೊವಿಕ್ ಅವರನ್ನು ಸರಿಗಟ್ಟಿದ್ದಾರೆ. ಇಬ್ಬರು 36-36 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿ 28 ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿಗಳನ್ನು ಹೊಂದಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಟಾಪ್​ನಲ್ಲಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಫೆಡರರ್ ನಂತರ ಆಂಡ್ರೆ ಅಗಾಸ್ಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಡಾಲ್ ಬಲವಾದ ಪುನರಾಗಮನ 2016 ರಿಂದ ನಡಾಲ್ ವಿರುದ್ಧದ ಮೊದಲ ಜಯವನ್ನು ಹುಡುಕುತ್ತಿರುವ ಜೊಕೊವಿಕ್, ಮೊದಲ ಸೆಟ್‌ನಲ್ಲಿ ಸ್ವಲ್ಪ ದಣಿದಂತೆ ಕಾಣುತ್ತಿದ್ದರು. ಜೊಕೊವಿಕ್ 2-0 ಮುನ್ನಡೆ ಸಾಧಿಸಿದರು, ಆದರೆ ನಡಾಲ್ ಮತ್ತೆ ಪುಟಿದೇಳುವ ಮೂಲಕ ಸ್ಕೋರ್ ಅನ್ನು 5-5ರಲ್ಲಿ ಸಮಗೊಳಿಸಿದರು. ಒಂದು ಗಂಟೆ 15 ನಿಮಿಷಗಳ ಕಾಲ ಆಡಿದ ನಡಾಲ್ ಮೊದಲ ಸೆಟ್‌ ಗೆದ್ದರು. ಆದಾಗ್ಯೂ ಎರಡನೇ ಸೆಟ್‌ನಲ್ಲಿ ಜೊಕೊವಿಕ್ ಪ್ರಾಬಲ್ಯ ಮೆರೆದರು. ಜೊಕೊವಿಕ್ 3-1 ರಿಂದ ಮುನ್ನಡೆ ಸಾಧಿಸಿದರು.

ಮೂರನೇ ಸೆಟ್‌ನಲ್ಲಿ ಪಂದ್ಯವು 2-2ರಲ್ಲಿತ್ತು. ಇಲ್ಲಿ ಜೊಕೊವಿಕ್ ಎರಡು ಬ್ರೇಕ್ ಪಾಯಿಂಟ್ ಗಳಿಸಿದರು. ಆದಾಗ್ಯೂ, ನಡಾಲ್ ಧೈರ್ಯವನ್ನು ಕಳೆದುಕೊಳ್ಳದೆ 4-2 ಮುನ್ನಡೆ ಸಾಧಿಸಿದರು. ಇಲ್ಲಿಂದ, ಪಂದ್ಯವನ್ನು ತಮ್ಮ ಹೆಸರನ್ನಾಗಿ ಮಾಡುವಲ್ಲಿ ನಡಾಲ್ ಅವರಿಗೆ ತೊಂದರೆ ಇರಲಿಲ್ಲ. ಈ ಪಂದ್ಯವು ಒಟ್ಟು ಎರಡು ಗಂಟೆ 49 ನಿಮಿಷಗಳ ಕಾಲ ನಡೆಯಿತು.

10 ನೇ ಇಟಾಲಿಯನ್ ಓಪನ್ ಪ್ರಶಸ್ತಿ ಈ ಗೆಲುವಿನೊಂದಿಗೆ ನಡಾಲ್ ಮತ್ತೊಂದು ಸಾಧನೆ ಮಾಡಿದ್ದಾರೆ. ಇದು ಅವರ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿ. ಇದರೊಂದಿಗೆ, ಅವರು ನಾಲ್ಕು ವಿಭಿನ್ನ ಪಂದ್ಯಾವಳಿಗಳನ್ನು 10 ಅಥವಾ ಹೆಚ್ಚಿನ ಬಾರಿ ಗೆದ್ದ ಆಟಗಾರರಾಗಿದ್ದಾರೆ. 10 ನೇ ಬಾರಿಗೆ ಇಟಾಲಿಯನ್ ಓಪನ್ ಗೆಲ್ಲುವ ಮೊದಲು ನಡಾಲ್ ಬಾರ್ಸಿಲೋನಾದಲ್ಲಿ 12 ಮತ್ತು ಮಾಂಟೆ ಕಾರ್ಲಾನ್‌ನಲ್ಲಿ 11 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅದೇ ಸಮಯದಲ್ಲಿ, ಅವರು ಫ್ರೆಂಚ್ ಓಪನ್‌ನಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಅವರು ವರ್ಷದ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಅನ್ನು 13 ಬಾರಿ ಗೆದ್ದಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್