AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಡಕ್ಕೆ ಮರಳಲು ಅಮೀರ್ ಹೂಡಿರುವ ಬ್ಲ್ಯಾಕ್ ಮೇಲ್ ತಂತ್ರವಿದು; ಪಾಕ್ ಮಾಜಿ ಕ್ರಿಕೆಟಿಗ

ತಂಡಕ್ಕೆ ಮರಳಲು ಅಮೀರ್ ತಮ್ಮ ಹೇಳಿಕೆಗಳ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಹೇಳಿಕೆಯಿಂದ ನೀವು ಅವರ ಮನಸ್ಥಿತಿಯ ಕಲ್ಪನೆಯನ್ನು ಅರಿಯಬಹುದು.

ತಂಡಕ್ಕೆ ಮರಳಲು ಅಮೀರ್ ಹೂಡಿರುವ ಬ್ಲ್ಯಾಕ್ ಮೇಲ್ ತಂತ್ರವಿದು; ಪಾಕ್ ಮಾಜಿ ಕ್ರಿಕೆಟಿಗ
ಮೊಹಮ್ಮದ್ ಅಮೀರ್
ಪೃಥ್ವಿಶಂಕರ
|

Updated on: May 17, 2021 | 8:16 PM

Share

ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಪಿಸಿಬಿ ನಡುವಿನ ಮುಸುಕಿನ ಗುದ್ದಾಟ ಹೊಸದೇನಲ್ಲ. ಅಂತಹ ಒಂದು ಪ್ರಕರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮತ್ತೆ ಕೇಳಿಬಂದಿದೆ. ಈ ಪ್ರಕರಣವು ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಅಮೀರ್‌ಗೆ ಸಂಬಂಧಿಸಿದೆ. ವಾಸ್ತವವಾಗಿ, ಮೊಹಮ್ಮದ್ ಅಮೀರ್ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದರು. ಅಮೀರ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ತಂಡದ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಮಾನಸಿಕ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂದು ಅಮೀರ್ ಮಂಡಳಿ ವಿರುದ್ಧ ಆರೋಪ ಹೊರಿಸಿದ್ದರು. ಆದರೆ, ಈಗ ಅಮೀರ್​ ಅವರ ಈ ಕುತಂತ್ರದ ಹಿಂದೆ ಇರುವ ಸಂಗತಿಯನ್ನು ಪಾಕಿಸ್ತಾನ ತಂಡದ ಪಾಕಿಸ್ತಾನ ಕ್ರಿಕೆಟಿಗರಾಗಿರುವ ಡ್ಯಾನಿಶ್ ಕನೇರಿಯಾ ಬಹಿರಂಗಪಡಿಸಿದ್ದಾರೆ.

ವಾಸ್ತವವಾಗಿ, ಇಂತಹ ಆರೋಪಗಳನ್ನು ಮಾಡುವ ಮೂಲಕ ತಂಡಕ್ಕೆ ಮರಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಬ್ಲ್ಯಾಕ್ ಮೇಲ್ ಮಾಡಲು ಮೊಹಮ್ಮದ್ ಅಮೀರ್ ಪ್ರಯತ್ನಿಸುತ್ತಿದ್ದಾರೆ ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅಮೀರ್ ಪಿಸಿಬಿಯ ಆಯ್ಕೆ ನೀತಿಯನ್ನೂ ಪ್ರಶ್ನಿಸಿದ್ದಾರೆ. ಅಮೀರ್ ಅವರು ಇಂಗ್ಲೆಂಡ್ನಲ್ಲಿ ವಾಸಿಸುವ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು. ಈ ಕುರಿತು, ಡ್ಯಾನಿಶ್ ಕನೇರಿಯಾ ಈಗ ಪ್ರಶ್ನೆಗಳನ್ನು ಎತ್ತಿದ್ದಾರೆ.

ಅಮೀರ್ ಅವರ ಸಾಧನೆ ಒಂದೂವರೆ ವರ್ಷ ಶೂನ್ಯವಾಗಿತ್ತು: ಕನೇರಿಯಾ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಂಡದ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ, ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ. ತಂಡಕ್ಕೆ ಮರಳಲು ಅಮೀರ್ ತಮ್ಮ ಹೇಳಿಕೆಗಳ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಹೇಳಿಕೆಯಿಂದ ನೀವು ಅವರ ಮನಸ್ಥಿತಿಯ ಕಲ್ಪನೆಯನ್ನು ಅರಿಯಬಹುದು, ಅದರಲ್ಲಿ ಅವರು ಇಂಗ್ಲೆಂಡ್‌ನ ಪೌರತ್ವವನ್ನು ತೆಗೆದುಕೊಂಡು ಐಪಿಎಲ್‌ನಲ್ಲಿ ಆಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಪಿಸಿಬಿ ಅಮೀರ್ ತಂಡಕ್ಕೆ ಮರಳಲು ಅವಕಾಶ ನೀಡಿದೆ ಎಂದು ಕನೆರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಆದರೆ ಕಳೆದ 1.5 ವರ್ಷಗಳಲ್ಲಿ ಅವರ ಸಾಧನೆ ಶೂನ್ಯವಾಗಿದೆ. ಖಂಡಿತವಾಗಿಯೂ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು ಆದರೆ ಅದರ ನಂತರ ಅವರ ಸಾಧನೆ ಗಮನಾರ್ಹವಾಗಿ ಕುಸಿಯಿತು ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಕನೇರಿಯಾ ತಿಳಿಸಿದ್ದಾರೆ. ಆದಾಗ್ಯೂ, ಮೊಹಮ್ಮದ್ ಅಮೀರ್ ಪ್ರಸ್ತುತ ಇಂಗ್ಲೆಂಡ್ನಲ್ಲಿದ್ದಾರೆ ಮತ್ತು ಹಲವಾರು ಫ್ರ್ಯಾಂಚೈಸ್ ಲೀಗ್ಗಳ ಭಾಗವಾಗಿದ್ದಾರೆ.