Roger Federer Retires: 16ನೇ ವಯಸ್ಸಿಗೆ ಸ್ಕೂಲ್ ಬಿಟ್ಟಿದ್ದ ಫೆಡರರ್ ಇಂದು 4372 ಕೋಟಿಯ ಒಡೆಯ..!

Roger Federer Retires: ರೋಜರ್ ಫೆಡರರ್ ಎರಡು ದೇಶಗಳ ಪೌರತ್ವ ಹೊಂದಿದ್ದು, ಸ್ವಿಟ್ಜರ್ಲೆಂಡ್ ಹೊರತುಪಡಿಸಿ, ಅವರು ದಕ್ಷಿಣ ಆಫ್ರಿಕಾದ ನಾಗರಿಕತ್ವ ಕೂಡ ಹೊಂದಿದ್ದಾರೆ.

Roger Federer Retires: 16ನೇ ವಯಸ್ಸಿಗೆ ಸ್ಕೂಲ್ ಬಿಟ್ಟಿದ್ದ ಫೆಡರರ್ ಇಂದು 4372 ಕೋಟಿಯ ಒಡೆಯ..!
Roger Federer
Follow us
TV9 Web
| Updated By: ಪೃಥ್ವಿಶಂಕರ

Updated on: Sep 15, 2022 | 8:38 PM

ಟೆನಿಸ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್ (Roger Federer) ವೃತ್ತಿ ಬದಕಿನಿಂದ ನಿವೃತ್ತಿಯಾಗಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ (Grand Slams) ಗೆದ್ದಿರುವ ಈ ಆಟಗಾರ ಗುರುವಾರ ಟ್ವೀಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. 21ನೇ ವಯಸ್ಸಿನಲ್ಲಿ ವಿಂಬಲ್ಡನ್ (Wimbledon) ಗೆದ್ದಿರುವ ಈ ಆಟಗಾರ ವೃತ್ತಿ ಜೀವನದಲ್ಲಿ 103 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೆಡರರ್ 8 ಬಾರಿ ವಿಂಬಲ್ಡನ್ ಗೆದ್ದಿದ್ದು ವಿಶ್ವದಾಖಲೆಯಾಗಿದೆ. ಫೆಡರರ್ 310 ವಾರಗಳ ಕಾಲ ನಂಬರ್ 1 ಟೆನಿಸ್ ಆಟಗಾರರಾಗಿದ್ದರು. ಫೆಡರರ್ ಅವರ ಸಂಪೂರ್ಣ ವೃತ್ತಿಜೀವನವು ಒಂದಕ್ಕಿಂತ ಹೆಚ್ಚು ದಾಖಲೆಗಳಿಂದ ತುಂಬಿದೆ. ಆದರೆ ಅವರ ದಾಖಲೆಯ ಹೊರತಾಗಿ, ಕೆಲವೇ ಜನರಿಗೆ ತಿಳಿದಿರುವ ಅವರ ಬಗ್ಗೆ ಕೆಲವು ವಿಷಯಗಳನ್ನು ನಾವು ನಿಮಗೆ ಹೇಳುತ್ತೇವೆ.

  1. ರೋಜರ್ ಫೆಡರರ್ ಎರಡು ದೇಶಗಳ ಪೌರತ್ವ ಹೊಂದಿದ್ದು, ಸ್ವಿಟ್ಜರ್ಲೆಂಡ್ ಹೊರತುಪಡಿಸಿ, ಅವರು ದಕ್ಷಿಣ ಆಫ್ರಿಕಾದ ನಾಗರಿಕತ್ವ ಕೂಡ ಹೊಂದಿದ್ದಾರೆ. ಅವರ ತಂದೆ ಸ್ವಿಸ್ ಮತ್ತು ತಾಯಿ ದಕ್ಷಿಣ ಆಫ್ರಿಕಾದವರಾಗಿದ್ದಾರೆ.
  2. ರೋಜರ್ ಫೆಡರರ್ 16 ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಡಬೇಕಾಯಿತು . ಇದಕ್ಕೆ ಪ್ರಮುಖ ಕಾರಣವೇ ಟೆನಿಸ್,  ಅವರು ಟೆನಿಸ್ ಆಟವನ್ನು ಮುಂದುವರಿಸಬೇಕಾಗಿದ್ದರಿಂದ ಶಾಲೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 21 ನೇ ವಯಸ್ಸಿನಲ್ಲಿ, ಫೆಡರರ್ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ, ಜೂಲಿಯೆಟ್ ಎಂಬ ಹೆಸರಿಸಿದ ಹಸುವನ್ನು ಉಡುಗೊರೆಯಾಗಿ ಪಡೆದಿದ್ದರು.
  3. ರೋಜರ್ ಫೆಡರರ್ ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರಾಗಿದ್ದು, ಅವರ ಆಸ್ತಿ ಮೌಲ್ಯ 4372 ಕೋಟಿ ರೂ. ಆಗಿದೆ. ಅಲ್ಲದೆ, ಫೆಡರರ್ ತಮ್ಮ ವೃತ್ತಿಜೀವನದಲ್ಲಿ 130 ಮಿಲಿಯನ್ ಡಾಲರ್ ಮೌಲ್ಯದ ಬಹುಮಾನವನ್ನು ಗಳಿಸಿದ್ದಾರೆ.
  4. 2017 ರಲ್ಲಿ, ರೋಜರ್ ಫೆಡರರ್ ಹೆಸರಿನಲ್ಲಿ ಸ್ವಿಸ್ ಸ್ಟಾಂಪ್ ಅನ್ನು ಬಿಡುಗಡೆ ಮಾಡಲಾಯಿತು. ಜೀವಂತವಾಗಿರುವಾಗ ಈ ಗೌರವವನ್ನು ಪಡೆದ ಸ್ವಿಟ್ಜರ್ಲೆಂಡ್ನ ಏಕೈಕ ಪ್ರಜೆ ಎಂಬ ಹೆಗ್ಗಳಿಕೆಗೆ ಫೆಡರರ್ ಪಾತ್ರರಾಗಿದ್ದಾರೆ.
  5. ರೋಜರ್ ಫೆಡರರ್ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮಥ್ಯ್ರ ಹೊಂದಿದ್ದು, ಅವರಿಗೆ ಇಂಗ್ಲಿಷ್, ಸ್ವಿಸ್ ಜರ್ಮನ್, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಸೇರಿದಂತೆ ಫೆಡರರ್ ಆಫ್ರಿಕಾ ಭಾಷೆಯನ್ನು ಮಾತನಾಡುತ್ತಾರೆ.
  6. ರೋಜರ್ ಫೆಡರರ್ ಅವರ ತಾಯಿ ಸ್ವತಃ ಶ್ರೇಷ್ಠ ಟೆನಿಸ್ ಆಟಗಾರ್ತಿ. ಅವರು ಸ್ವಿಸ್ ಇಂಟರ್ ಕ್ಲಬ್ ಮಟ್ಟದ ತರಬೇತುದಾರರಾಗಿದ್ದರು.  ಫೆಡರರ್ ತನ್ನ ಹೆತ್ತವರ ಆಟವನ್ನು ನೋಡಿದ ನಂತರವೇ ಟೆನಿಸ್ ಆಡಲು ಪ್ರಾರಂಭಿಸಿದರು.
  7. ರೋಜರ್ ಫೆಡರರ್ ಅವರ ವಿಶೇಷವೆಂದರೆ ಅವರು ಎಂದಿಗೂ ತರಬೇತಿ ಪಂದ್ಯಗಳಲ್ಲಿ ಗೆಲುವು ಸಾಧಿಸಿರಲಿಲ್ಲ. ತರಬೇತಿ ವೇಳೆ ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಿದರೂ ಪಂದ್ಯದ ವೇಳೆ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದರು.

ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ