Rohit Sharma: ಇಂಗ್ಲೆಂಡ್ ಪಿಚ್‌ಗಳಲ್ಲಿ ರೋಹಿತ್‌ಗೆ ಕೊಂಚ ಸಮಸ್ಯೆಗಳಾಗಬಹುದು; ರೋಹಿತ್ ಶರ್ಮಾ ಬಾಲ್ಯದ ಕೋಚ್ ದಿನೇಶ್ ಲಾಡ್
Rohit Sharma: ರೋಹಿತ್ ಅಲ್ಲಿ ಸ್ವಲ್ಪ ಹೆಚ್ಚು ಗಮನ ಹರಿಸಬೇಕಾಗಿದೆ. ಪ್ರತಿಯೊಂದು ಎಸೆತದ ಯೋಗ್ಯತೆಗೆ ಅನುಗುಣವಾಗಿ ಆಡಬೇಕಾಗುತ್ತದೆ ಏಕೆಂದರೆ ಅಲ್ಲಿ ಚೆಂಡು ಸಾಕಷ್ಟು ಟರ್ನ್ ತೆಗೆದುಕೊಳ್ಳುತ್ತದೆ.
ರೋಹಿತ್ ಶರ್ಮಾ 2013 ರಿಂದ ಕ್ರಿಕೆಟ್ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಈ ಆಟಗಾರ ಏಕದಿನ ಮತ್ತು ಟಿ 20 ಕ್ರಿಕೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಅನೇಕ ದಾಖಲೆಗಳನ್ನು ಅಳಿಸಿಹಾಕಿದ್ದಾರೆ ಮತ್ತು ಅನೇಕ ಹೊಸ ದಾಖಲೆಯನ್ನು ಮಾಡಿದ್ದಾರೆ. ಈ 34 ವರ್ಷದ ಕ್ರಿಕೆಟಿಗ ಈಗ ಈ ಸ್ವರೂಪದಲ್ಲಿ ಟೀಮ್ ಇಂಡಿಯಾಕ್ಕೆ ಓಪನರ್ ಆಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ತಂಡವು ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರಲಿದೆ. ಹೀಗಾಗಿ ತಂಡವು ರೋಹಿತ್ ಅವರ ಹೆಗಲ ಮೇಲೆ ದೊಡ್ಡ ಜವಬ್ದಾರಿಯನ್ನು ನೀಡಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ರೋಹಿತ್ ಶರ್ಮಾ ಅವರ ಬಾಲ್ಯದ ತರಬೇತುದಾರ ದಿನೇಶ್ ಲಾಡ್ ಅವರು ಭಾರತದ ಆರಂಭಿಕ ಆಟಗಾರ ಇಂಗ್ಲೆಂಡ್‌ನ ಸ್ಥಿತಿ ಮತ್ತು ಡ್ಯೂಕ್ ಬಾಲ್ ಅನ್ನು ಚೆನ್ನಾಗಿ ಎದುರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಆದಾಗ್ಯೂ, ಅಲ್ಲಿ ಹೆಚ್ಚು ಗಮನ ಮತ್ತು ತಾಳ್ಮೆಯನ್ನು ಇಟ್ಟುಕೊಳ್ಳಬೇಕೆಂದು ಅವರು ತಮ್ಮ ಶಿಷ್ಯನಿಗೆ ಎಚ್ಚರಿಕೆ ನೀಡಿದರು.
ಸ್ವಲ್ಪ ಹೆಚ್ಚು ಗಮನ ಹರಿಸಬೇಕಾಗಿದೆ ಇತ್ತೀಚೆಗೆ ನಡೆದ ಇಂಗ್ಲೆಂಡ್ ಪ್ರವಾಸದಲ್ಲಿ ದಿನೇಶ್ ಲಾಡ್ ರೋಹಿತ್ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು. ಸ್ಪೋರ್ಟ್ಸ್‌ಕಿಡಾದೊಂದಿಗಿನ ಸಂಭಾಷಣೆಯಲ್ಲಿ ಅವರು, ರೋಹಿತ್ ಅಲ್ಲಿ ಸ್ವಲ್ಪ ಹೆಚ್ಚು ಗಮನ ಹರಿಸಬೇಕಾಗಿದೆ. ಪ್ರತಿಯೊಂದು ಎಸೆತದ ಯೋಗ್ಯತೆಗೆ ಅನುಗುಣವಾಗಿ ಆಡಬೇಕಾಗುತ್ತದೆ ಏಕೆಂದರೆ ಅಲ್ಲಿ ಚೆಂಡು ಸಾಕಷ್ಟು ಟರ್ನ್ ತೆಗೆದುಕೊಳ್ಳುತ್ತದೆ. ಆದರೆ ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ರೋಹಿತ್ ಸಂಪೂರ್ಣವಾಗಿ ಕ್ರಿಕೆಟಿಂಗ್ ಹೊಡೆತಗಳನ್ನು ಆಡಿದರು. ಹೀಗಾಗಿ ಅವರು ಇಂಗ್ಲೆಂಡ್‌ನಲ್ಲೂ ತಮ್ಮ ಆಟವನ್ನು ಬದಲಾಯಿಸುತ್ತಾರೆ ಎಂಬ ವಿಶ್ವಾಸವಿದೆ, ಏಕೆಂದರೆ ಕ್ರಿಕೆಟ್‌ನ ಉನ್ನತ ಮಟ್ಟದಲ್ಲಿ, ಪರಿಸ್ಥಿತಿಗೆ ಹೊಂದಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.
ಇತರೆ ದೇಶಕ್ಕಿಂತ ಹೆಚ್ಚು ಸ್ವಿಂಗ್ ಆಗುತ್ತದೆ ಇಂಗ್ಲೆಂಡ್ ಪಿಚ್‌ಗಳಲ್ಲಿ ರೋಹಿತ್‌ಗೆ ಕೊಂಚ ಸಮಸ್ಯೆಗಳಾಗಬಹುದು ಎಂದು ಲಾಡ್ ಒಪ್ಪಿಕೊಂಡರು. ಹೌದು, ರೋಹಿತ್‌ಗೆ ಇಂಗ್ಲೆಂಡ್ ಪಿಚ್‌ಗಳಲ್ಲಿ ಕೊಂಚ ತೊಂದರೆಯಾಗಬಹುದು ಏಕೆಂದರೆ ಇಂಗ್ಲೆಂಡ್‌ನಲ್ಲಿ, ಚೆಂಡು ಇತರೆ ದೇಶಕ್ಕಿಂತ ಹೆಚ್ಚು ಸ್ವಿಂಗ್ ಆಗುತ್ತದೆ ಮತ್ತು ಅದನ್ನು ಎದುರಿಸಲು, ಅದರ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಆದರೆ ಅವರು ನೆಟ್ ಸೆಷನ್ ಅಥವಾ ಇಂಟ್ರಾ ಸ್ಕ್ವಾಡ್ ಪಂದ್ಯಗಳಲ್ಲಿ ಭಾರತದ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸಿದರೆ, ಅದು ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಈ ದೇಶದಲ್ಲಿ ಐದು ಶತಕಗಳನ್ನು ದಾಖಲಿಸಿದ್ದಾರೆ ರೋಹಿತ್ ಇದುವರೆಗೆ ಇಂಗ್ಲೆಂಡ್‌ನಲ್ಲಿ ಏಳು ಶತಕಗಳ ಸಹಾಯದಿಂದ ಏಕದಿನ ಮತ್ತು ಟಿ 20 ಫಾರ್ಮ್ಯಾಟ್‌ನಲ್ಲಿ 1335 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸರಾಸರಿ 66.75. 2019 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು ಈ ದೇಶದಲ್ಲಿ ಐದು ಶತಕಗಳನ್ನು ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಇಂಗ್ಲೆಂಡ್ನಲ್ಲಿ ಟೆಸ್ಟ್ ಸ್ವರೂಪದಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. 2014 ರಲ್ಲಿ ನಡೆದ ಈ ಪಂದ್ಯದಲ್ಲಿ ಅವರು ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ, ರೋಹಿತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಗಳಿಸಿದರು. ಆದರೆ 2019 ರಲ್ಲಿ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲೂ ಓಪನಿಂಗ್ ಪ್ರಾರಂಭಿಸಿದರು. ಅಂದಿನಿಂದ, ಅವರ ದಾಖಲೆ ಸುಧಾರಿಸಿದೆ. ಆರಂಭಿಕ ಹಂತದಲ್ಲಿ ರೋಹಿತ್ 11 ಟೆಸ್ಟ್ ಪಂದ್ಯಗಳಲ್ಲಿ 66 ಸರಾಸರಿಯಲ್ಲಿ 1029 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ನಾಲ್ಕು ಶತಕಗಳನ್ನು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.