ಲೋಗೋ ಬದಲಾಯ್ತು, ಲಕ್ಕೂ ಬದಲಾಗುತ್ತಾ? ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ?
ಬೆಂಗಳೂರು: ಐಪಿಎಲ್ ಸೀಸನ್-13ರಲ್ಲಿ ಟ್ರೋಫಿ ಗೆಲ್ಲಲೇಬೇಕೆಂದು ಪಣತೊಟ್ಟಿರೋ ಆರ್ಸಿಬಿ, ಲೋಗೋವನ್ನ ಬದಲಾಯಿಸಿದೆ. ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದ್ದ ಹೊಸ ಲೋಗೋವನ್ನ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿದೆ. ಇದ್ರೊಂದಿಗೆ ಕಳೆದ ಮೂರು ದಿನಗಳಿಂದ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರೋ ಆರ್ಸಿಬಿ ಫ್ರಾಂಚೈಸಿ, ಹೊಸ ಲಾಂಛನವನ್ನ ಅನಾವರಣ ಮಾಡಿದೆ. ಕಳೆದ ಮೂರು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್ಗಳು ಡಿಲೀಟ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಕ್ಯಾಪ್ಟನ್ ವಿರಾಟ್ […]
ಬೆಂಗಳೂರು: ಐಪಿಎಲ್ ಸೀಸನ್-13ರಲ್ಲಿ ಟ್ರೋಫಿ ಗೆಲ್ಲಲೇಬೇಕೆಂದು ಪಣತೊಟ್ಟಿರೋ ಆರ್ಸಿಬಿ, ಲೋಗೋವನ್ನ ಬದಲಾಯಿಸಿದೆ. ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದ್ದ ಹೊಸ ಲೋಗೋವನ್ನ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿದೆ. ಇದ್ರೊಂದಿಗೆ ಕಳೆದ ಮೂರು ದಿನಗಳಿಂದ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರೋ ಆರ್ಸಿಬಿ ಫ್ರಾಂಚೈಸಿ, ಹೊಸ ಲಾಂಛನವನ್ನ ಅನಾವರಣ ಮಾಡಿದೆ.
ಕಳೆದ ಮೂರು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್ಗಳು ಡಿಲೀಟ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಿಸ್ಟರ್ 360 ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್, ಯಜ್ವಿಂದರ್ ಚಹಲ್ ಹಾಗೂ ಮೆಂಟರ್ ಮೈಕ್ ಹಸ್ಸನ್ಗೆ ಗಮನಕ್ಕೆ ತರದೇ, ಸೋಶಿಯಲ್ ಮೀಡಿಯಾದಲ್ಲಿ ಲೋಗೋ ಹಾಗೂ ಪೋಸ್ಟ್ಗಳನ್ನ ಡಿಲೀಟ್ ಮಾಡಲಾಗಿತ್ತು. ಇದು ಆಟಗಾರರು ಸೇರಿದಂತೆ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು.
ಹೊಸ ಅವತಾರದಲ್ಲಿ ಸಿಡಿದೇಳಲು ರೆಡಿಯಾದ ಗೋಲ್ಡನ್ ಲಯನ್! ಲೋಗೋ ಬಿಡುಗಡೆಯ ಮುನ್ನ ದಿನ ಆರ್ಸಿಬಿ ಫ್ರಾಂಚೈಸಿ, ಪ್ರೇಮಿಗಳ ದಿನದಂದು ಹೊಸ ಸರ್ಪ್ರೈಸ್ ಕೊಡೋ ಸೂಚನೆಯನ್ನ ತಿಳಿಸಿತ್ತು. ಇನ್ಸ್ಟಾದಲ್ಲಿ ಹೊಸ ಡಿಕೇಡ್ ಮತ್ತು ಹೊಸ ಆರ್ಸಿಬಿ ಎಂದು ಪೋಸ್ಟ್ ಮಾಡಿದ್ದ ಫ್ರಾಂಚೈಸಿ, ಹೊಸ ದಶಕದಲ್ಲಿ ನೂತನ ಅವತಾರದಲ್ಲಿ ಕಾಣಿಸಿಕೊಳ್ಳೋ ಸೂಚನೆಯನ್ನ ನೀಡಿತ್ತು. ಅದ್ರಂತೆ ನಿನ್ನೆ ಬೆಳಗ್ಗೆ 9.30ಕ್ಕೆ ಆರ್ಸಿಬಿ ತಂಡದ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲೋಗೋವನ್ನ ಬಿಡುಗಡೆ ಮಾಡಿದೆ.
ನೂತನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಲೋಗೋದಲ್ಲಿ, ಕೆಂಪು ಬಣ್ಣದ ಹಿನ್ನಲೆಯನ್ನ ಹೊಂದಿದ್ದು, ಗೋಲ್ಡನ್ ಲಯನ್ ಮತ್ತು ಕಪ್ಪು ಬಣ್ಣದಲ್ಲಿ ತಂಡದ ಹೆಸರನ್ನ ಹೊಂದಿದೆ. ಲೋಗೋದಲ್ಲಿ ಗೋಲ್ಡನ್ ಲಯನ್ ತುಂಬಾನೇ ಹೈಲೆಟ್ ಆಗಿದ್ದು, ಧೈರ್ಯ ಹಾಗೂ ನಿರ್ಭೀತಿಯಿಂದ ಆಡುವ ಸೂಚನೆಯನ್ನ ಹೊಂದಿದೆ. ಲೋಗೋದಲ್ಲಿ ಬೆಂಗಳೂರು ಅನ್ನೋ ಶೀರ್ಷಿಕೆಯನ್ನ ಚಿನ್ನದ ಅಕ್ಷರದಲ್ಲಿ ಉಲ್ಲೇಖಿಸಲಾಗಿದ್ದು, ರಾಯಲ್ ಚಾಲೆಂಜರ್ಸ್ ಅನ್ನೋ ಅಕ್ಷರಗಳನ್ನ ಕಪ್ಪುಬಣ್ಣದ ಹಿನ್ನಲೆಯ ಮೇಲೆ ಬಿಳಿ ಬಣ್ಣದಿಂದ ಬರೆಯಲಾಗಿದೆ.
Cricket is in our heart and so are you. Happy Valentine's Day ♥️#PlayBold #NewDecadeNewRCB pic.twitter.com/KCIEs23PHM
— Royal Challengers Bangalore (@RCBTweets) February 14, 2020
ಮೊನ್ನೆ ಆರ್ಸಿಬಿಗೆ ಜೈ ಎಂದಿದ್ದ ಅಭಿಮಾನಿಗಳು ಈಗ ತಿರುಗಿಬಿದ್ದಿದ್ಯಾಕೆ? ಆರ್ಸಿಬಿ ತಂಡಕ್ಕೆ ಕೋಟ್ಯಂತರ ಕನ್ನಡದ ಅಭಿಮಾನಿಗಳಿದ್ದಾರೆ. ಆರ್ಸಿಬಿ ಸೋತ್ರೂ ಗೆದ್ರೂ ಆರ್ಸಿಬಿ ಸಪೋರ್ಟ್ ಮಾಡೋದನ್ನ ಬಿಟ್ಟಿಲ್ಲ. ಪ್ರತಿ ಸೀಸನ್ನಲ್ಲೂ ಕೊಹ್ಲಿ ಸೈನ್ಯಕ್ಕೆ ಆತ್ಮವಿಶ್ವಾಸ ತುಂಬುತ್ತಲೇ ಬಂದಿದ್ದಾರೆ. ಇದನ್ನ ಚೆನ್ನಾಗಿ ಅರಿತಿರೋ ಆರ್ಸಿಬಿ ಫ್ರಾಂಚೈಸಿ, ಮೊನ್ನೆ ಕನ್ನಡ ಕವನವೊಂದನ್ನ ಪೋಸ್ಟ್ ಮಾಡಿ, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು.
ಹೆಸರಲ್ಲೂ ನೀವೇ, ಉಸಿರಲ್ಲೂ ನೀವೇ, ಎಲ್ಲೆಲ್ಲೂ ನೀವೇ ಸ್ಫೂರ್ತಿ ಅನ್ನೋ ಕವನವನ್ನ ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಹೀಗೆ ಆರ್ಬಿಸಿ ಕನ್ನಡದ ಮೇಲೆ ಪ್ರೇಮ ಮೆರೆದಿದ್ದನ್ನ ಕಂಡ ಅಭಿಮಾನಿಗಳು, ಆರ್ಸಿಬಿ ಫ್ರಾಂಚೈಸಿಗೆ ಜೈಕಾರ ಹಾಕಿದ್ರು. ಆರ್ಸಿಬಿ ತನ್ನ ಟ್ವಿಟರ್ನಲ್ಲಿ ಕನ್ನಡ ಕವನದ ಪೋಸ್ಟ್ ಹಾಕಿ ಅಭಿಮಾನಿಗಳ ಖುಷಿ ಪಡಿಸಿದ್ದು ನಿಜ. ಆದ್ರೆ, ನಿನ್ನೆ ಬಿಡುಗಡೆ ಮಾಡಿರೋ ಲೋಗೋ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
With love, RCB ♥️ #NewDecadeNewRCB pic.twitter.com/zLfT9KLNDM
— Royal Challengers Bangalore (@RCBTweets) February 13, 2020
ಲೋಗೋದಲ್ಲಿ ಬೆಂಗಳೂರ್.. ಬೆಂಗಳೂರು ಆಗಲೇ ಇಲ್ಲ! ಆರ್ಸಿಬಿ ತಂಡದ ಲೋಗೋದಲ್ಲಿ ಬೆಂಗಳೂರ್ ಬದಲಾಗಿ, ಬೆಂಗಳೂರು ಅನ್ನೋದನ್ನ ಬಳಸಬೇಕಿತ್ತು. ಆದ್ರೆ, ಲಾಂಛನದಲ್ಲಿ ಮತ್ತೆ ಬೆಂಗಳೂರ್ ಅಂತಾನೇ ಬಳಸಿರೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ಲೋಗೋವನ್ನ ನೋಡಿದ್ದೇ ತಡ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ವಿರುದ್ಧ ಕಿಡಿಕಾರೋದಕ್ಕೆ ಶುರುಮಾಡಿದ್ದಾರೆ. ಆರ್ಸಿಬಿ ತಂಡಕ್ಕೆ ಕನ್ನಡಿಗರು ಬೆಂಬಲಿಸುತ್ತಾನೇ ಬಂದಿದ್ದಾರೆ. ಆದ್ರೆ, ಲೋಗೋ ವಿಚಾರದಲ್ಲಿ ಬೆಂಗಳೂರು ಹೆಸರನ್ನ ಕನ್ನಡದಲ್ಲಿ ಬಳಸಬೇಕಿತ್ತು ಅಂತ ಅಭಿಮಾನಿಗಳು ಆಗ್ರಹಿಸ್ತಿದ್ದಾರೆ.
A new chapter begins #PlayBold #NewDecadeNewRCB pic.twitter.com/tUp46ISTDH
— Royal Challengers Bangalore (@RCBTweets) February 14, 2020
3ನೇ ಬಾರಿ ಲೋಗೋ ಚೇಂಜ್.. ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ ಆರ್ಸಿಬಿ? ಐಪಿಎಲ್ ಟೂರ್ನಿಯಲ್ಲಿ ಮೊದಲ ಸೀಸನ್ನಿಂದ್ಲೂ ಆಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದುವರೆಗೂ ಒಂದೇ ಒಂದು ಟ್ರೋಫಿಯನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಅಲ್ಲದೇ, ಲೋಗೋ ಬದಲಾಯಿಸಿದ್ರೆ ಆರ್ಸಿಬಿ ಹಣೆಬರಹವಾದ್ರೂ ಬದಲಾಗುತ್ತಾ, ಮೊದಲೆರೆಡು ಬಾರಿ ತಂಡದ ಲಾಂಛನವನ್ನ ಬದಲಾಯಿಸಲಾಗಿತ್ತು. ಮೊದಲ ಲಾಂಛದಲ್ಲಿ 8ಸೀಸನ್ ಆಡಿದ್ದ ಆರ್ಸಿಬಿ, 2016ರಲ್ಲಿ ಹೊಸ ಲೋಗೋವನ್ನ ಬಿಡುಗಡೆಗೊಳಿಸಿತ್ತು. ಆದ್ರೂ ಆರ್ಸಿಬಿ ಅದೃಷ್ಟ ಮಾತ್ರ ಬದಲಾಗಿದ್ದಿಲ್ಲ.
ಆದ್ರೀಗ 2020ರ ಹೊಸ ದಶಕದಲ್ಲಿ ಹೊಸ ಅವತಾರದಲ್ಲಿ, ನೂತನ ಕನಸುಗಳೊಂದಿಗೆ ಆರ್ಸಿಬಿ ಲೋಗೋವನ್ನ ಬಿಡುಗಡೆ ಮಾಡಿದೆ. ಲೋಗೋ ಬದಲಾಯಿಸಿರೋ ಆರ್ಸಿಬಿ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡೋದಕ್ಕೆ ಮುಂದಾಗಿದೆ. ಘೋಷಣೆ ಮಾಡಬೇಕಿರೋದು ಬಾಕಿ ಇದೆ.. ವೈಟ್ ಮಾಡಿ ಅನ್ನೋ ಪೋಸ್ಟ್ನ್ನ ಫೇಸ್ಬುಕ್ನಲ್ಲಿ ಪ್ರಕಟಿಸಿದೆ.
ಆರ್ಸಿಬಿ ಲೋಗೋ ನೋಡಿ ಥ್ರಿಲ್ ಆದ ನಾಯಕ ಕೊಹ್ಲಿ! ಇನ್ನು ಆರ್ಸಿಬಿ ತಂಡ ಹೀಗೆ ಹೊಸ ಲೋಗೋ ಲಾಂಚ್ ಮಾಡಿರೋದಕ್ಕೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಪುಳಕಿತಗೊಂಡಿದ್ದಾರೆ. ಈ ಹೊಸ ಲೋಗೋ, ನಮ್ಮ ಆಟಗಾರರ ಮನೋಭಾವವನ್ನ ಹೆಚ್ಚಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಒಟ್ನಲ್ಲಿ ಹೊಸ ದಶಕದೊಂದಿಗೆ ಟ್ರೋಫಿ ಎತ್ತಿಹಿಡಿಯೋ ಕನಸಿನೊಂದಿಗೆ ಆರ್ಸಿಬಿ ಲೋಗೋ ಬದಲಾವಣೆ ಮಾಡಿದೆ. ಈ ಬಾರಿಯಾದ್ರೂ, ಆರ್ಸಿಬಿ ತಂಡದ ಲಕ್ ಬದಲಾಗಿ ಕಪ್ ಗೆಲ್ಲುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.
LOGO ka kaam hai kehna. ? Thrilled to see our new @rcbtweets logo. It embodies the Bold pride and challenger spirit that our players bring to the field. Can’t wait for #IPL2020 #NewDecadeNewRCB ? https://t.co/n8c24JqbAl
— Virat Kohli (@imVkohli) February 14, 2020
Published On - 9:36 am, Sat, 15 February 20