ಅಖ್ತರ್ ಎಸೆತ ನನ್ನ ಪಕ್ಕೆಲುಬುಗಳನ್ನು ಘಾಸಿಗೊಳಿಸಿತ್ತು.. 2 ತಿಂಗಳು ನೋವಿನಿಂದ ನರಳಿದ್ದೆ; ಸಚಿನ್ ತೆಂಡೂಲ್ಕರ್

ಏಕದಿನ ಪಂದ್ಯವೊಂದರಲ್ಲಿ ಅಖ್ತರ್ ಎಸೆತ, ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ಅವರ ಪಕ್ಕೆಲುಬುಗಳಿಗೆ ನೋವನ್ನುಂಟು ಮಾಡಿತ್ತು ಎಂದು ಸಚಿನ್ ಹೇಳಿದ್ದಾರೆ.

ಅಖ್ತರ್ ಎಸೆತ ನನ್ನ ಪಕ್ಕೆಲುಬುಗಳನ್ನು ಘಾಸಿಗೊಳಿಸಿತ್ತು.. 2 ತಿಂಗಳು ನೋವಿನಿಂದ ನರಳಿದ್ದೆ; ಸಚಿನ್ ತೆಂಡೂಲ್ಕರ್
ಶೋಯೆಬ್ ಅಖ್ತರ್‌ ,ಸಚಿನ್ ತೆಂಡೂಲ್ಕರ್
Follow us
ಪೃಥ್ವಿಶಂಕರ
|

Updated on: May 17, 2021 | 5:48 PM

2007 ರಲ್ಲಿ ಶೋಯೆಬ್ ಅಖ್ತರ್‌ ಘಾತಕ ಎಸೆತದಿಂದ ಆದ ಗಾಯದ ಬಗ್ಗೆ ಸಚಿನ್ ತೆಂಡೂಲ್ಕರ್ ಈಗ ಮಾತಾನಾಡಿದ್ದಾರೆ. 2007 ರಲ್ಲಿ ಪಾಕಿಸ್ತಾನದ ತಂಡವು ಭಾರತಕ್ಕೆ ಭೇಟಿ ನೀಡಿದಾಗ, ಏಕದಿನ ಪಂದ್ಯವೊಂದರಲ್ಲಿ ಅಖ್ತರ್ ಎಸೆತ, ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ಅವರ ಪಕ್ಕೆಲುಬುಗಳಿಗೆ ನೋವನ್ನುಂಟು ಮಾಡಿತ್ತು ಎಂದು ಸಚಿನ್ ಹೇಳಿದ್ದಾರೆ. ಇದರಿಂದಾಗಿ ಸಚಿನ್ ತುಂಬಾ ನೋವಿನಿಂದ ನರಳಬೇಕಾಯಿತು. ಆದರೆ ನೋವಿನ ನಂತರವೂ ಸಚಿನ್ ತೆಂಡೂಲ್ಕರ್ ಮುಂದಿನ ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದರು. ಅಖ್ತರ್ ಎಸೆತ ಮಾಡಿದ್ದ ಕೆಲಸದಿಂದಾಗಿ ಸಚಿನ್ ಕೆಮ್ಮುವಾಗ ಅಥವಾ ಮಕಾಡೆ ಮಲಗುವಾಗ ಬರೋಬ್ಬರಿ ಎರಡು ತಿಂಗಳ ಕಾಲ ನೋವಿನಿಂದ ಬಳಲಿದ್ದರಂತೆ.

ಚೆಂಡು ನನ್ನ ಪಕ್ಕೆಲುಬುಗಳಿಗೆ ಬಿದ್ದಿತ್ತು ಈ ಬಗ್ಗೆ ಮಾತಾನಾಡಿದ ಸಚಿನ್ ತೆಂಡೂಲ್ಕರ್, 2007 ರಲ್ಲಿ ನನ್ನ ಪಕ್ಕೆಲುಬುಗಳು ಚೆಂಡಿನ ಹೊಡೆತದಿಂದ ನೋವಿಗೆ ಒಳಗಾಗಿದ್ದವು. ನಾವು ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡುತ್ತಿದ್ದೆವು. ಈ ವೇಳೆ ಮೊದಲ ಓವರ್‌ನಲ್ಲಿಯೇ ಶೋಯೆಬ್ ಅಖ್ತರ್ ಅವರು ಎಸೆದ ಚೆಂಡು ನನ್ನ ಪಕ್ಕೆಲುಬುಗಳಿಗೆ ಬಿದ್ದಿತ್ತು. ಇದರಿಂದ ಸಾಕಷ್ಟು ನೋವು ಅನುಭವಿಸಬೇಕಾಯಿತು. ಎರಡು ತಿಂಗಳವರೆಗೆ ನನಗೆ ಕೆಮ್ಮಲು ಅಥವಾ ಮಲಗಲು ಸಾಧ್ಯವಾಗಲಿಲ್ಲ. ಆದರೆ ನಾನು ನಿರಂತರವಾಗಿ ಆಟವಾಡುತ್ತಿದ್ದೆ. ಜೊತೆಗೆ ಉಳಿದ ನಾಲ್ಕು ಏಕದಿನ ಮತ್ತು ಟೆಸ್ಟ್ ಸರಣಿಯಲ್ಲೂ ಆಡಿದ್ದೇನೆ.

ಗಾಯದ ಸ್ಕ್ಯಾನ್ ಮಾಡಿದಾಗ ಪಕ್ಕೆಲುಬು ಗಾಯ ಪತ್ತೆ 2007 ರಲ್ಲಿ, ಪಾಕಿಸ್ತಾನ ವಿರುದ್ಧ ಮೂರು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳ ನಂತರ, ಭಾರತ ನಾಲ್ಕು ಟೆಸ್ಟ್ ಸರಣಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತು. ಈ ಸರಣಿಯಲ್ಲಿ ಶ್ರೀಲಂಕಾ ತಂಡವು ಒಂದು ಬಾಗವಾಗಿತ್ತು. ಈ ಅವಧಿಯಲ್ಲಿ ಸಚಿನ್ ತಂಡದಲ್ಲಿದ್ದರು. ಆದಾಗ್ಯೂ, ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರಿಗೆ ಸ್ನಾಯು ಸೆಳೆತದ ತೊಂದರೆ ಕಾಣಿಸಿಕೊಂಡಿತ್ತು. ಸಚಿನ್ ಭಾರತಕ್ಕೆ ಹಿಂದಿರುಗಿದ ನಂತರ, ಪೂರ್ಣ ದೇಹ ತಪಾಸಣೆ ಮಾಡಿದರು. ಆ ಸಮಯದಲ್ಲಿ, ವೈದ್ಯರು ಸಚಿನ್ ಅವರ ಪಕ್ಕೆಲುಬಿನಲ್ಲಿ ಗಾಯವಾಗಿದೆ ಎಂದು ಹೇಳಿದ್ದರು.

ಪಕ್ಕೆಲುಬು ಕೂಡ ಮುರಿದು ಹೋಗಿರಬಹುದು ಆದರೆ ನಾನು ವೈದ್ಯರನ್ನು ಪಕ್ಕೆಲುಬಿನ ಬಗ್ಗೆ ಕೇಳಲಿಲ್ಲ. ಕೇವಲ ಸ್ನಾಯು ಸೆಳೆತದ ಗಾಯದ ಬಗ್ಗೆ ನಾನು ಚಿಂತೆ ಮಾಡುತ್ತಿದ್ದೆ. ಏಕೆಂದರೆ ಐಪಿಎಲ್ ಇನ್ನೇನೂ ಪ್ರಾರಂಭವಾಗಲಿತ್ತು. ಆದರೆ ನಾನು ಐಪಿಎಲ್‌ನ ಮೊದಲ ಏಳು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಜೊತೆಗೆ ಬೇರೆ ಸ್ಥಳದಲ್ಲಿ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದರು. ಬಹುಶಃ ನಿಮ್ಮ ಪಕ್ಕೆಲುಬು ಕೂಡ ಮುರಿದು ಹೋಗಿರಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಅಖ್ತರ್ ಎಸೆದ ಎಸೆತ ನನ್ನನ್ನು ಎರಡು ತಿಂಗಳಿಂದ ಕಾಡುತ್ತಿತ್ತು ಎಂದಿದ್ದಾರೆ.

ಇದನ್ನೂ ಓದಿ:ಮೊದಲ ಭೇಟಿಯಲ್ಲಿ ಸಚಿನ್ ಕಾಲಿಗೆ ಬಿದ್ದಿದ್ದ ಕೊಹ್ಲಿ; ಯುವಿ, ಬಜ್ಜಿ, ಪಠಾಣ್ ಕುಚೇಷ್ಟೆಗೆ ಬಲಿಯಾಗಿದ್ದ ವಿರಾಟ್

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು