India vs Pakistan: ಪಂದ್ಯದ ನಡುವೆ ಜಗಳಕ್ಕಿಳಿದ ಭಾರತ-ಪಾಕಿಸ್ತಾನ್ ಆಟಗಾರರು
SAFF Championship 2023: ಟೀಮ್ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರೆ, ಪಾಕಿಸ್ತಾನದ ಮ್ಯಾನೇಜರ್ ಶಹಜಾದ್ ಅನ್ವರ್‌ಗೆ ಹಳದಿ ಕಾರ್ಡ್ ನೀಡಿದರು.

SAFF Championship 2023: ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ SAFF ಚಾಂಪಿಯನ್‌ಶಿಪ್ 2023 ಫುಟ್ಬಾಲ್ ಪಂದ್ಯದ ವೇಳೆ ಭಾರತ-ಪಾಕಿಸ್ತಾನ್ (India vs Pakistan) ಆಟಗಾರರು ಜಗಳಕ್ಕಿಳಿದ ಘಟನೆ ನಡೆದಿದೆ. ಪಂದ್ಯದ ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಈ ಘಟನೆ ನಡೆದಿದ್ದು, ಆ ಬಳಿಕ ಪರಿಸ್ಥಿತಿ ತಿಳಿಗೊಳಿಸಿ ಪಂದ್ಯವನ್ನು ಮುಂದುವರೆಸಲಾಯಿತು. ಪಂದ್ಯದ 44ನೇ ನಿಮಿಷದಲ್ಲಿ ಚೆಂಡು ಸೈಡ್ ಲೈನ್ ದಾಟಿತು. ಈ ವೇಳೆ ಲೈನ್ ಅಂಪೈರ್ ನಿರ್ಧಾರಕ್ಕೂ ಮುನ್ನ ಪಾಕಿಸ್ತಾನ್ ಆಟಗಾರ ಅಬ್ದುಲ್ಲಾ ಇಕ್ಬಾಲ್ ಚೆಂಡನ್ನು ಥ್ರೋ ಇನ್ ಮಾಡಲು ಮುಂದಾದರು.
ಈ ವೇಳೆ ಅಲ್ಲೇ ಇದ್ದ ಭಾರತ ತಂಡದ ಮ್ಯಾನೇಜರ್ ಇಗೊರ್ ಸ್ಟಿಮ್ಯಾಕ್ ಪಾಕಿಸ್ತಾನಿ ಆಟಗಾರನ ಕೈಯಿಂದ ಚೆಂಡನ್ನು ಎಳೆದರು. ಇದರಿಂದ ಕುಪಿತಗೊಂಡ ಪಾಕ್ ತಂಡದ ಮ್ಯಾನೇಜರ್ ಹಾಗೂ ಆಟಗಾರರು ಭಾರತ ತಂಡದ ಕೋಚ್ ವಿರುದ್ಧ ಜಗಳಕ್ಕಿಳಿದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರರ ಆಗಮನದೊಂದಿಗೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು.
Whether it is cricket Or football, the match between India and Pakistan is always on ?#IndianFootball #INDvsPAK #indpic.twitter.com/1Y4s4qhsyR
— Hari (@Harii33) June 21, 2023
ತಕ್ಷಣವೇ ರೆಫರಿಗಳು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಲ್ಲದೆ ಟೀಮ್ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರೆ, ಪಾಕಿಸ್ತಾನದ ಮ್ಯಾನೇಜರ್ ಶಹಜಾದ್ ಅನ್ವರ್‌ಗೆ ಹಳದಿ ಕಾರ್ಡ್ ನೀಡಿದರು. ಇದಾಗ್ಯೂ ಭಾರತ ತಂಡವು ಪಂದ್ಯವನ್ನು 4-0 ಅಂತರದಿಂದ ಗೆದ್ದುಕೊಂಡಿದೆ.
Published On - 9:17 pm, Wed, 21 June 23
