ಶ್ರೇಯಸ್ ಜಾಣತನ ಮತ್ತು ಕಾರ್ತೀಕ್ ದಿಟ್ಟತನ ನಡುವಿನ ಪಂದ್ಯ
ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿ ಆರಂಭಗೊಂಡು ಎರಡು ವಾರ ಕಳೆದಿದೆ. ಟೂರ್ನಿಯ 16ನೇ ಮತ್ತು ಇಂದಿನ ಎರಡನೇ ಪಂದ್ಯ; ಪಾಯಿಂಟ್ಸ್ ಟೇಬಲ್ನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತಾ ನೈಟ್ರೈಡರ್ಸ್ ನಡುವೆ ಶಾರ್ಜಾದಲ್ಲಿ ನಡೆಯಲಿದೆ. ಇಂದು ಗೆಲುವು ಸಾಧಿಸುವ ಟೀಮು ಟೇಬಲ್ನ ಅಗ್ರಸ್ಥಾನಕ್ಕೇರಲಿದೆ. ಎರಡು ತಂಡಗಳಲ್ಲೂ ಪ್ರತಿಭಾವಂತ ಯುವ ಆಟಗಾರರಿದ್ದು ಅವರೆಲ್ಲ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಡೆಲ್ಲಿ ಟೀಮಿನ ಸಾಮರ್ಥ್ಯವನ್ನು ಗಮನಿಸಿದ್ದೇಯಾದರೆ, ಇದುವರೆಗೆ ಬೆಂಚ್ ಕಾಯಿಸುತ್ತಿದ್ದ್ದ ಅಜಿಂಕಾ ರಹಾನೆ ಅವರನ್ನು ಇವತ್ತಿನ […]
ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿ ಆರಂಭಗೊಂಡು ಎರಡು ವಾರ ಕಳೆದಿದೆ. ಟೂರ್ನಿಯ 16ನೇ ಮತ್ತು ಇಂದಿನ ಎರಡನೇ ಪಂದ್ಯ; ಪಾಯಿಂಟ್ಸ್ ಟೇಬಲ್ನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತಾ ನೈಟ್ರೈಡರ್ಸ್ ನಡುವೆ ಶಾರ್ಜಾದಲ್ಲಿ ನಡೆಯಲಿದೆ. ಇಂದು ಗೆಲುವು ಸಾಧಿಸುವ ಟೀಮು ಟೇಬಲ್ನ ಅಗ್ರಸ್ಥಾನಕ್ಕೇರಲಿದೆ.
ಎರಡು ತಂಡಗಳಲ್ಲೂ ಪ್ರತಿಭಾವಂತ ಯುವ ಆಟಗಾರರಿದ್ದು ಅವರೆಲ್ಲ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಡೆಲ್ಲಿ ಟೀಮಿನ ಸಾಮರ್ಥ್ಯವನ್ನು ಗಮನಿಸಿದ್ದೇಯಾದರೆ, ಇದುವರೆಗೆ ಬೆಂಚ್ ಕಾಯಿಸುತ್ತಿದ್ದ್ದ ಅಜಿಂಕಾ ರಹಾನೆ ಅವರನ್ನು ಇವತ್ತಿನ ಪಂದ್ಯದಲ್ಲಿ ಆಡಿಸುವ ನಿರೀಕ್ಷೆಯಿದೆ. ಈ ಮುಂಬೈ ಆಟಗಾರ ಬಿರುಗಾಳಿ ವೇಗದಲ್ಲಿ ರನ್ ಸ್ಕೋರ್ ಮಾಡುವುದಿಲ್ಲವಾದರೂ ಟಿ20 ಫಾರ್ಮಾಟ್ಗೆ ಅಗತ್ಯವಿರುವ ಆಕ್ರಮಣಕಾರಿ ಆಟದ ಮೂಲಕ ಡೆಲ್ಲಿಯ ಬ್ಯಾಟಿಂಗ್ ವಿಭಾಗಕ್ಕೆ ಸ್ಥಿರತೆಯನ್ನು ಒದಗಿಸಬಲ್ಲರು. ಆಸ್ಟ್ರೇಲಿಯಾದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಅಲೆಕ್ಸ್ ಕೇರಿಯವರನ್ನು ಸಹ ಇವತ್ತಿನ ಪಂದ್ಯದಲ್ಲಿ ಆಡಿಸುವ ಲಕ್ಷಣಗಳಿವೆ. ಯುಎಇಗೆ ಆಗಮಿಸುವ ಮೊದಲು ಕೇರಿ, ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಒಂದು ದಿನದ ಪಂದ್ಯದಲ್ಲಿ ಆಜೇಯ ಶತಕ ಬಾರಿಸಿ ಆಸ್ಟ್ರೇಲಿಯಾಗೆ ರೋಚಕ ಗೆಲುವು ದೊರಕಿಸಿದ್ದರು.
ಡೆಲ್ಲಿಯ ಮತ್ತೊಬ್ಬ ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಕೊಂಚ ಒತ್ತಡದಲ್ಲಿದ್ದಾರೆ. ಅವರ ಬ್ಯಾಟ್ನಿಂದ ರನ್ ಸಿಡಿಯುತ್ತಿಲ್ಲ. ಅವರ ಕಾಂಪಿಟೀಟರ್ಗಳಾದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಷನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಹಾಗಾಗಿ, ಪಂತ್ ಒಂದು ಬಿಗ್ ಇನ್ನಿಂಗ್ಸ್ ಆಡುವ ಒತ್ತಡದಲ್ಲಿದ್ದಾರೆ. ಶಿಖರ್ ಧವನ್ ಉತ್ತಮ ಆರಂಭಗಳನ್ನು 60-70 ರನ್ಗಳ ಕಾಣಿಕೆಯಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ. ಆದರೆ ಅವರ ಪಾರ್ಟ್ನರ್ ಪೃಥ್ವಿ ಶಾ ಯೋಗ್ಯ ಕಾಂಟ್ರಿಬ್ಯೂಷನ್ಗಳನ್ನು ನೀಡುತ್ತಿದ್ದಾರೆ. ಓವರ್ಸೀಸ್ ಆಟಗಾರ ಶರ್ಮನ್ ಹೆಟ್ಮೆಯರ್ ಆಡುವ ಅವಕಾಶ ಪಡೆಯುತ್ತಿದ್ದರೂ ತನ್ನ ಖ್ಯಾತಿಗೆ ತಕ್ಕ ಆಟವಾಡುತ್ತಿಲ್ಲ.
ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಡೆಲ್ಲಿಗೆ ಬ್ಯಾಲೆನ್ಸ್ ಒದಗಿಸುತ್ತಿದ್ದಾರೆ. ವೇಗದ ಬೌಲರ್ಗಳಾದ ಕಗಿಸೊ ರಬಾಡ, ಇಶಾಂತ್ ಶರ್ಮ, ಅನ್ರಿಖ್ ನೋರೆ ಮೊದಲಾದವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಹಾಗೆಯೇ ಸ್ಪಿನ್ನರ್ಗಳಾದ ಅಮಿತ್ ಮಿಶ್ರಾ, ಅಕ್ಸರ್ ಪಟೇಲ್ ಸಹ.
ಅತ್ತ, ಕೊಲ್ಕತಾ, ರಾಜಸ್ತಾನ ರಾಯಲ್ಸ್ ಮೇಲೆ ಸಾಧಿಸಿದ ಗೆಲುವಿನಿಂದ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದೆ. ಟೀಮಿನ ಬ್ಯಾಟಿಂಗ್ ಮೇನ್ಸ್ಟೇ ಶುಭ್ಮನ್ ಗಿಲ್ ಕೊಲ್ಕತಾ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸಲ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ಸುನಿಲ್ ನರೈನ್ ಪದೇಪದೆ ವಿಫಲರಾಗುತ್ತಿರುವುದು ನಾಯಕ್ ದಿನೇಶ್ ಕಾರ್ತೀಕ್ಗೆ ಸಂಕಟವನ್ನುಂಟು ಮಾಡುತ್ತಿದೆ.
ಮೂರನೇ ಕ್ರಮಾಂಕದಲ್ಲಾಡುವ ನಿತಿಶ್ ರಾಣಾ ಅವರಿಂದ ದೊಡ್ಡ ಇನ್ನಿಂಗ್ಸ್ ಬಂದಿಲ್ಲವಾದರೂ ಅವರಿಂದ ಅದನ್ನು ನಿರೀಕ್ಷಿಸಬಹುದಾಗಿದೆ.
ಮಿಡ್ಲ್ ಆರ್ಡರ್ನಲ್ಲಿ ಅಯಾನ್ ಮೊರ್ಗನ್ ತಮ್ಮ ಖ್ಯಾತಿಗೆ ತಕ್ಕ ಆಡವಾಡುತ್ತಿದ್ದಾರೆ. ಗಿಲ್ ಒಂದಿಗಿನ ಅವರ ಜೊತೆಯಾಟಗಳು ಟೀಮಿಗೆ ಗೆಲುವು ತಂದು ಕೊಡುತ್ತಿವೆ. ಸ್ಫೋಟಕ ಬ್ಯಾಟ್ಸ್ಮನ್ ಆಂದ್ರೆ ರಸ್ಸೆಲ್ಗೆ ಜಾಸ್ತಿ ಎಸೆತಗಳನ್ನಾಡುವ ಚಾನ್ಸ್ ಸಿಗುತ್ತಿಲ್ಲ. ಅವರನ್ನು ಮೂರನೇ ಕ್ರಮಾಂಕದಲ್ಲಾಡಿಸುವ ಬಗ್ಗೆ ಟೀಮಿನ ಥಿಂಕ್ಟ್ಯಾಂಕ್ ಆಲೋಚಿಸುತ್ತಿದೆ. ಕಾರ್ತೀಕ್ ಮಾತ್ರ ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಗೊಂದಲದಲ್ಲಿದ್ದಾರೆ. ಭಾರತದ ಮಾಜಿ ಆಲ್ರೌಂಡರ್ ಮದನ್ ಲಾಲ್ ಕಾರ್ತೀಕ್ ಓಪನರ್ ಆಗಿ ಆಡುವುದು ಸೂಕ್ತ ಅಂತ ಹೇಳಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಅವರೊಂದಿಗೆ, ಯುವ ವೇಗದ ಬೌಲರ್ಗಳಾದ ಶಿವಮ್ ಮಾವಿ, ಕಮ್ಲೇಶ್ ನಾಗರ್ಕೋಟಿ ಎದುರಾಳಿಗಳನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ವಿಕೆಟ್ಗಳನ್ನೂ ಪಡೆಯುತ್ತಿದ್ದಾರೆ. ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ಅಂದಹಾಗೆ, ಕೆಕೆಆರ್ ಮತ್ತು ಡಿಸಿ ಐಪಿಎಲ್ನಲ್ಲಿ 25 ಸಲ ಪರಸ್ಪರ ಸ್ಫರ್ಧಿಸಿದ್ದು, ಕೊಲ್ಕತಾ 23 ಸಲ ಗೆದ್ದಿದ್ದರೆ, ಡೆಲ್ಲಿ 11 ಸಲ ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.