Singapore Open: ಭಾರತಕ್ಕೆ ಸಿಹಿ- ಕಹಿ; ಸೆಮಿಫೈನಲ್‌ಗೆ ಸಿಂಧು ಎಂಟ್ರಿ! ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಸೈನಾ

Singapore Open: ಸಿಂಧು ಅವರು ಚೀನಾದ ಆಟಗಾರ್ತಿ ಹಾನ್ ಯುಯಿ ಅವರನ್ನು 17-21, 21-11, 21-19 ರಿಂದ ಮೂರು ಗೇಮ್‌ಗಳ ತೀವ್ರ ಮತ್ತು ನಿಕಟ ಪಂದ್ಯದಲ್ಲಿ ಸೋಲಿಸಿದರು.

Singapore Open: ಭಾರತಕ್ಕೆ ಸಿಹಿ- ಕಹಿ; ಸೆಮಿಫೈನಲ್‌ಗೆ ಸಿಂಧು ಎಂಟ್ರಿ! ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಸೈನಾ
ಪಿವಿ ಸಿಂಧು
Updated By: ಪೃಥ್ವಿಶಂಕರ

Updated on: Jul 15, 2022 | 5:02 PM

ಬ್ಯಾಡ್ಮಿಂಟನ್ ಅಂಗಳದಿಂದ ಭಾರತಕ್ಕೆ ಒಂದು ಸಿಹಿ ಮತ್ತು ಒಂದು ಕಹಿ ಸುದ್ದಿ ಕೇಳಿ ಬಂದಿದೆ. ಈ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತದ ದೊಡ್ಡ ಶಟ್ಲರ್‌ಗಳು ಸಿಂಗಾಪುರ ಓಪನ್‌ (Singapore Open)ನಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಭಾರತದ ಅಗ್ರ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು (PV Sindhu) ಜುಲೈ 15 ಶುಕ್ರವಾರದಂದು ಚೀನಾದ ಆಟಗಾರ್ತಿ ಹಾನ್ ಯುಯಿ ಅವರನ್ನು 17-21, 21-11, 21-19 ರಿಂದ ಮೂರು ಗೇಮ್‌ಗಳ ತೀವ್ರ ಮತ್ತು ನಿಕಟ ಪಂದ್ಯದಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಆದರೆ, ಭಾರತದ ಎರಡನೇ ಪ್ರಮುಖ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ (Saina Nehwal) ತಮ್ಮ ಹೋರಾಟವನ್ನು ಕ್ವಾರ್ಟರ್ ಫೈನಲ್‌ನಲ್ಲಿಯೇ ಕೊನೆಗೊಳಿಸಬೇಕಾಯಿತು. ಮತ್ತೊಂದು ರೋಚಕ ಪಂದ್ಯದಲ್ಲಿ ಸೈನಾ ಜಪಾನ್‌ನ ಅಯಾ ಒಹೊರಿ ವಿರುದ್ಧ 13-21, 21-15, 22-20 ಸೆಟ್‌ಗಳಿಂದ ಪರಾಭವಗೊಂಡರು. ಸುಮಾರು 15 ತಿಂಗಳ ಬಳಿಕ ಸೈನಾ ಟೂರ್ನಿಯೊಂದರ ಕ್ವಾರ್ಟರ್ ಫೈನಲ್ ತಲುಪಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಮೂರನೇ ಶ್ರೇಯಾಂಕದ ಸಿಂಧು ಅವರು ಚೀನಾದ ಪ್ರತಿಸ್ಪರ್ಧಿಯನ್ನು 17-21 21-11 21-19 ರಿಂದ ಮೇಲುಗೈ ಸಾಧಿಸುವ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕದನದಲ್ಲಿ ಹಾನ್ ಯುಯೆ ಅವರ ಪ್ರಬಲ ಸವಾಲನ್ನು ಮೆಟ್ಟಿ ನಿಂತು ಮೇನಲ್ಲಿ ನಡೆದ ಥಾಯ್ಲೆಂಡ್ ಓಪನ್ ನಂತರ ಮೊದಲ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿದರು.

ಇದನ್ನೂ ಓದಿ
ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
IND vs WI: ರೋಹಿತ್ ಶರ್ಮಾ ಹೊಗಳುವ ಆಟಗಾರರಿಗೆಲ್ಲ ಸಿಗ್ತಿದೆ ತಂಡದಿಂದ ಕೋಕ್! ಏನಿದರ ಮರ್ಮ?

ಆರನೇ ಶ್ರೇಯಾಂಕದ ಥಾಯ್ಲೆಂಡ್‌ನ ಪೋರ್ನ್‌ಪಾವೀ ಚೊಚುವಾಂಗ್‌ ಅವರನ್ನು 21-17 21-19 ಸೆಟ್‌ಗಳಿಂದ ಸೋಲಿಸುವ ಮೂಲಕ ಸೇಮಿಸ್​ಗೆ ಎಂಟ್ರಿಕೊಟ್ಟಿರುವ ಜಪಾನಿನ ಸೈನಾ ಕವಾಕಮಿ ಅವರನ್ನು ಸಿಂಧು ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಸಿಂಧು ಈಗ ಕಣದಲ್ಲಿರುವ ಏಕೈಕ ಭಾರತೀಯ ಆಟಗಾರ್ತಿ ಆಗಿರುವುದರಿಂದ, ಮಾಜಿ ವಿಶ್ವ ಚಾಂಪಿಯನ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲ್ಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಮುನ್ನ ಕೊನೆಯ ಈವೆಂಟ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Published On - 4:04 pm, Fri, 15 July 22