ಆಡಿದ 40 ಪಂದ್ಯಗಳಲ್ಲಿ 11 ಬಾರಿ ಶೂನ್ಯಕ್ಕೆ ಔಟ್! ಕ್ರಿಕೆಟ್ ಬಿಟ್ಟು ವಿಮಾ ಕಂಪನಿಯಲ್ಲಿ ಕೆಲಸ ಮಾಡಿದ್ದ ಕ್ರಿಕೆಟಿಗರ್​ಗೆ ಇಂದು ಜನ್ಮದಿನ

ರಾಯ್ ಮೆಕ್‌ಲೀನ್ ದೇಶಕ್ಕಾಗಿ ಒಟ್ಟು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ ಆಡಿದ 73 ಇನ್ನಿಂಗ್ಸ್‌ಗಳಲ್ಲಿ 11 ರಲ್ಲಿ ಅವರು ಖಾತೆ ತೆರೆಯದೆ ಔಟಾಗಿದ್ದಾರೆ.

ಆಡಿದ 40 ಪಂದ್ಯಗಳಲ್ಲಿ 11 ಬಾರಿ ಶೂನ್ಯಕ್ಕೆ ಔಟ್! ಕ್ರಿಕೆಟ್ ಬಿಟ್ಟು ವಿಮಾ ಕಂಪನಿಯಲ್ಲಿ ಕೆಲಸ ಮಾಡಿದ್ದ ಕ್ರಿಕೆಟಿಗರ್​ಗೆ ಇಂದು ಜನ್ಮದಿನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Jul 09, 2021 | 7:39 PM

ಕ್ರಿಕೆಟ್ ಪಂದ್ಯವೊಂದರಲ್ಲಿ, ಪ್ರತಿಯೊಬ್ಬ ಬ್ಯಾಟ್ಸ್‌ಮನ್ ದೀರ್ಘ ಇನಿಂಗ್ಸ್ ಆಡುವ ನಿರೀಕ್ಷೆಯೊಂದಿಗೆ ಪಿಚ್‌ಗೆ ಇಳಿಯುತ್ತಾರೆ. ಯಾವುದೇ ಬ್ಯಾಟ್ಸ್‌ಮನ್‌ಗೆ ಕಿರಿಕಿರಿಯುಂಟುಮಾಡುವ ಕ್ಷಣವೆಂದರೆ ಅವನು ಕ್ರೀಸ್‌ಗೆ ಬಂದು ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳುವುದು. ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಮೊದಲ ಎಸೆತದಲ್ಲಿ ಔಟ್ ಆಗಿದ್ದರು. ಆದರೆ ನಾವು ಈಗ ಮಾತನಾಡುತ್ತಿರುವುದು ಹರಿಣಗಳ ತಂಡದ ಆಟಗಾರನ ಬಗ್ಗೆ. ಅವರು ತಮ್ಮ ಜೀವನದಲ್ಲಿ ಆಡಿದ 40 ಪಂದ್ಯಗಳಲ್ಲಿ, 11 ಬಾರಿ ಖಾತೆಯನ್ನು ತೆರೆಯದೆ ಪೆವಿಲಿಯನ್‌ಗೆ ಹಿಂತಿರುಗಿದ್ದಾರೆ. ಈ ಆಟಗಾರನ ಹೆಸರು ರಾಯ್ ಮೆಕ್ಲೀನ್, ಇಂದು ಅಂದರೆ ಜುಲೈ 9 ಸಹ ಅವರ ಜನ್ಮದಿನವಾಗಿದೆ. ಬನ್ನಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಈ ಆಟಗಾರನ ಶೂನ್ಯದೊಂದಿಗಿನ ವಿಶೇಷ ಸಂಬಂಧದ ಬಗ್ಗೆ ತಿಳಿಯೋಣ.

ರಾಯ್ ಮೆಕ್ಲೀನ್ ಜುಲೈ 9, 1930 ರಂದು ದಕ್ಷಿಣ ಆಫ್ರಿಕಾದ ನಟಾಲ್ನಲ್ಲಿ ಜನಿಸಿದರು. ಅವರು 1949 ರಲ್ಲಿ ನಟಾಲ್ ಪರ ಪ್ರಥಮ ದರ್ಜೆ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ, ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡುವ ಅವಕಾಶವೂ ಸಿಕ್ಕಿತು. ರಾಯ್ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ನ ರೂಪುರೇಷೆಯೊಂದಿಗೆ ಮೈದಾನಕ್ಕೆ ಪ್ರವೇಶಿಸುತ್ತಿದ್ದರು. ಆದರೆ ರಾಯ್ ಮೆಕ್ಲೀನ್ 1966 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದರು. ಕ್ರಿಕೆಟ್ ಬಳಿಕ ಅವರು ವಿಮೆಯನ್ನು ಮಾರಾಟ ಮಾಡುವ ಕೆಲಸವನ್ನು ಪ್ರಾರಂಭಿಸಿದರು. ದೀರ್ಘಕಾಲದ ಅನಾರೋಗ್ಯದಿಂದಾಗಿ ಅವರು ಆಗಸ್ಟ್ 26, 2007 ರಂದು ತಮ್ಮ 77 ನೇ ವಯಸ್ಸಿನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕೊನೆಯುಸಿರೆಳೆದರು.

10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ರಾಯ್ ಮೆಕ್ಲೀನ್ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 200 ಪಂದ್ಯಗಳಲ್ಲಿ 22 ಶತಕಗಳನ್ನು ಸಹ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್‌ಮನ್ ರಾಯ್ ಮೆಕ್‌ಲೀನ್ ದೇಶಕ್ಕಾಗಿ ಒಟ್ಟು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ ಆಡಿದ 73 ಇನ್ನಿಂಗ್ಸ್‌ಗಳಲ್ಲಿ 11 ರಲ್ಲಿ ಅವರು ಖಾತೆ ತೆರೆಯದೆ ಔಟಾಗಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರು 30.28 ರ ಸರಾಸರಿಯಲ್ಲಿ 2120 ರನ್ ಗಳಿಸಿದರು ಮತ್ತು ಅಜೇಯರಾಗಿ 3 ಬಾರಿ ಉಳಿದಿದ್ದಾರೆ. ಅವರ ಅತ್ಯಧಿಕ ಸ್ಕೋರ್ 142 ರನ್ ಆಗಿದ್ದರೆ, ಈ ಸ್ವರೂಪದಲ್ಲಿ ಅವರು ಐದು ಶತಕಗಳು ಮತ್ತು 10 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಆದಾಗ್ಯೂ, ಪ್ರಥಮ ದರ್ಜೆ ವಿಭಾಗದಲ್ಲೂ ಅವರ ಅನುಭವ ಬಹಳ ವಿಶೇಷವಾಗಿತ್ತು. 200 ಪ್ರಥಮ ದರ್ಜೆ ಪಂದ್ಯಗಳಲ್ಲಿ, ರಾಯ್ 22 ಶತಕಗಳನ್ನು ಮತ್ತು 65 ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. 318 ಇನ್ನಿಂಗ್ಸ್‌ಗಳಲ್ಲಿ 19 ಬಾರಿ ಅಜೇಯರಾಗಿ ಉಳಿದಿದ್ದಾರೆ. 36.68 ರ ಸರಾಸರಿಯಲ್ಲಿ 10969 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ 207 ರನ್. ಈ ಪಂದ್ಯಗಳಲ್ಲಿ ಅವರು 132 ವಿಕೆಟ್ ಪಡೆದಿದ್ದಾರೆ. ರಾಯ್ ಮೆಕ್ಲೀನ್ 200 ಪ್ರಥಮ ದರ್ಜೆ ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದಿದ್ದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ