ಶ್ರೀಲಂಕಾ ಕ್ರಿಕೆಟ್ ಟೀಮಿನ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್ಗೆ ಕೊವಿಡ್-19 ಸೋಂಕು
ಶ್ರೀಲಂಕಾ ಮತ್ತು ಭಾರತ ನಡುವೆ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳ ಸರಣಿಗಳು ಜುಲೈ 13ರಿಂದ ಆರಂಭವಾಗಲಿವೆ. ಸ್ವದೇಶಕ್ಕೆ ಮರಳಿರುವ ಶ್ರೀಲಂಕಾ ತಂಡದ ಆಟಗಾರರನ್ನೆಲ್ಲ ಕ್ವಾರಂಟೀನ್ ಮಾಡಲಾಗಿದ್ದರೆ, ಫ್ಲಾವರ್ ಅವರನ್ನು ತಂಡದ ಇತರ ಸದಸ್ಯರಿಂದ ಪ್ರತ್ಯೇಕಿಸಲಾಗಿದೆ.
ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಿದ ನಂತರ ಇಂಗ್ಲೆಂಡ್ನ ಕೆಲ ಆಟಗಾರರು ಕೋವಿಡ್-19 ಸೋಂಕಿಗೊಳಗಾದರು. ಆ ಕಾರಣದಿಂದಾಗೇ ಪಾಕಿಸ್ತಾನದ ವಿರುದ್ದ ಗುರುವಾರ ಆರಂಭವಾಗಿರುವ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಅನೇಕ ಹೊಸಮುಖಗಳೊಂದಿಗೆ ಮೈದಾನಕ್ಕೆ ಇಳಿಯಬೇಕಾಯಿತು. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮುಂದಿನ ವಾರದಿಂದ ಭಾರತದ ವಿರುದ್ಧ ಎರಡು ಸೀಮಿತ ಓವರಗಳ ಸರಣಿ ಆಡಬೇಕಿರುವ ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್ ಕೊವಿಡ್-19 ಸೋಂಕು ತಾಕಿಸಿಕೊಂಡಿದ್ದಾರೆ. ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಿಂದ ವಾಪಸ್ಸಾದ ಕೇವಲ 48 ಗಂಟೆಗಳ ಅವಧಿಯಲ್ಲಿ ಫ್ಲಾವರ್ಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಶ್ರೀಲಂಕಾ ಮತ್ತು ಭಾರತ ನಡುವೆ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳ ಸರಣಿಗಳು ಜುಲೈ 13ರಿಂದ ಆರಂಭವಾಗಲಿವೆ. ಸ್ವದೇಶಕ್ಕೆ ಮರಳಿರುವ ಶ್ರೀಲಂಕಾ ತಂಡದ ಆಟಗಾರರನ್ನೆಲ್ಲ ಕ್ವಾರಂಟೀನ್ ಮಾಡಲಾಗಿದ್ದರೆ, ಫ್ಲಾವರ್ ಅವರನ್ನು ತಂಡದ ಇತರ ಸದಸ್ಯರಿಂದ ಪ್ರತ್ಯೇಕಿಸಲಾಗಿದೆ.
‘ಶ್ರೀಲಂಕಾ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್ ಕೋವಿಡ್-19 ಸೋಂಕಿಗೊಳಗಾಗಿದ್ದಾರೆ,’ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.
‘ಫ್ಲಾವರ್ ಅವರು ಸಾಧಾರಣ ಸ್ವರೂಪದ ರೋಗಲಕ್ಷಣಗಳನ್ನು ತೋರಿದ ನಂತರ ಅವರ ಪಿಸಿಆರ್ ಟೆಸ್ಟ್ ಮಾಡಿಸಲಾಗಿ ಅದು ಪಾಸಿಟಿವ್ ಬಂದಿದೆ, ಅವರಿಗೆ ಸೋಂಕು ತಾಕಿರುವುದು ಪತ್ತೆಯಾದ ಕೂಡಲೇ ಕ್ವಾರಂಟೀನ್ನಲ್ಲಿರುವ ಟೀಮಿನ ಸದಸ್ಯರು ಮತ್ತು ಸಪೋರ್ಟ್ ಸ್ಟಾಫ್ನಿಂದ ಅವರನ್ನು ಪ್ರತ್ಯೇಕಿಸಲಾಯಿತು,’ ಎಂದು ಎಸ್ಎಲ್ಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಫ್ಲಾವರ್ ಅವರು ವೈದ್ಯಕೀಯ ನಿಯಾಮಾವಳಿಗಳ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರೆಲ್ಲರ ಟೆಸ್ಟ್ಗಳನ್ನೂ ಮಾಡಲಾಗಿದೆ,’ ಎಂದು ಹೇಳಿಕೆ ತಿಳಿಸಿದೆ.
ಜಿಂಬಾಬ್ವೆ ತಂಡದ ಮಾಜಿ ಆಟಗಾರರಾಗಿರುವ ಫ್ಲಾವರ್ ಇಂಗ್ಲೆಂಡ್ನಲ್ಲಿ ಒಡಿಐ ಮತ್ತು ಟಿ20ಐ ಸರಣಿಗಳೆರಡನ್ನೂ ಸೋತ ಶ್ರೀಲಂಕಾ ತಂಡದೊಂದಿಗಿದ್ದರು.
ಫ್ಲಾವರ್ಗೆ ಹೇಗೆ ಸೋಂಕು ತಗುಲಿತು ಎನ್ನುವುದು ಎಸ್ಎಲ್ಸಿ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ ಅವರು ಆಟಗಾರರೊಂದಿಗೆ ಬಯೋ-ಬಬಲ್ನಲ್ಲೇ ಇದ್ದರು ಮತ್ತು ಟೀಮಿನೊಂದಿಗೆ ಅದೇ ಚಾರ್ಟರ್ಡ್ ವಿಮಾನದಲ್ಲಿ ಲಂಕಾಗೆ ಮರಳಿದರು.
ಇಂಗ್ಲೆಂಡ್ನಲ್ಲಿ ಕೊವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ ನಿರೋಶನ್ ಡಿಕ್ವೆಲ್ಲಾ, ಕುಸಾಲ ಮೆಂಡಿಸ್ ಮತ್ತು ಧನುಷ್ಕಾ ಗುಣತಿಲಕೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಈ ಮೂವರು ಡರ್ಹಮ್ನಲ್ಲಿ ಬಯೋ-ಬಬಲ್ನಿಂದ ಆಚೆ ಹೋಗಿ ಬೀದಿಗಳಲ್ಲಿ ತಿರುಗಾಡಿದ್ದರಿಂದ ಅವರನ್ನು ಕೂಡಲೇ ಲಂಕಾಗೆ ವಾಪಸ್ಸು ಕಳಿಸಲಾಗಿತ್ತು. ವಿಚಾರಣೆ ಮುಗಿಯುವವರಗೆ ಅವರನ್ನು ಎಲ್ಲ ಬಗೆಯ ಕ್ರಿಕೆಟ್ನಿಂದ ಸಸ್ಪೆಂಡ್ ಮಾಡಲಾಗಿದೆ.
ಇಂಗ್ಲೆಂಡ್ನಿಂದ ವಾಪಸ್ಸು ಬಂದ ನಂತರ ಲಂಕಾ ಆಟಗಾರರಿಗೆ ತಮ್ಮ ಮನೆಗಳಿಗೆ ಹೋಗುವ ಅವಕಾಶ ನೀಡಲಾಗಿಲ್ಲ. ಬಬಲ್ ನಿಂದ ಬಬಲ್ಗೆ ಟ್ರಾನ್ಸ್ಫರ್ ಅಗಿರುವುದು ಅವರ ವಿಷಯದಲ್ಲಿ ಜರುಗಿದೆ.
ಭಾರತದ ವಿರುದ್ಧ ಹೈ ಪ್ರೊಫೈಲ್ ಸರಣಯಲ್ಲಿ ಆಡಬೇಕಿರುವುದರಿಂದ ಲಂಕಾ ಆಟಗಾರರನ್ನು ಪಂಚತಾರಾ ಸೌಲಭ್ಯದ ಸ್ಥಳವೊಂದರಲ್ಲಿ ಕ್ವಾರಂಟೀನ್ ಮಾಡಲಾಗಿದೆ. ಸದರಿ ಸರಣಿಯು ಹಣಕಾಸಿನ ತೀವ್ರ ಅಭಾವ ಎದುರಿಸುತ್ತಿರುವ ಶ್ರೀಲಂಕಾಗೆ ಉತ್ತಮ ಆದಾಯ ತಂದುಕೊಡುವ ನಿರೀಕ್ಷೆಯಿದೆ.
ಆಟಗಾರರು ಮತ್ತು ಲಂಕಾ ಕ್ರಿಕೆಟ್ ಮಂಡಳಿ ನಡುವೆ ಸಂಭಾವನೆಗೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದ್ದಾಗ್ಯೂ, 30 ಟಾಪ್ ಆಟಗಾರರ ಪೈಕಿ 29 ಆಟಗಾರರಿಗೆ ರಿಟೇನರ್ಶಿಪ್ ಕಂಟ್ರ್ಯಾಕ್ಟ್ ಒಂದಕ್ಕೆ ಸಹಿ ಮಾಡಿಸಿಕೊಳ್ಳುವಲ್ಲಿ ಮಂಡಳಿ ಸಫಲವಾಗಿದೆ. ಸಹಿ ಹಾಕದ ಒಬ್ಬನೇ ಆಟಗಾರನೆಂದೆ ನಿವೃತ್ತಿ ಘೋಷಿಸುವ ಬಗ್ಗೆ ಯೋಚಿಸುತ್ತಿರುವ ಏಂಜೆಲೊ ಮ್ಯಾಥ್ಯೂಸ್.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ನಡೆಯುವ ಎಲ್ಲ 6 ಪಂದ್ಯಗಳಲ್ಲಿ ಆಡುವ ಅವಕಾಶ ಸೂರ್ಯಕುಮಾರ್ ಯಾದವ್ಗೆ ನೀಡಬೇಕು: ವಿವಿಎಸ್ ಲಕ್ಷ್ಮಣ