AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್, ಧೋನಿ, ಕೊಹ್ಲಿ, ರೋಹಿತ್ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ? ನೆಟ್ಟಿಗರ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ಉತ್ತರವೇನು?

Suryakumar Yadav : ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 108 ಪಂದ್ಯಗಳಲ್ಲಿ 2197 ರನ್ ಗಳಿಸಿದ್ದಾರೆ. ಐಪಿಎಲ್‌ನ 14 ನೇ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಏಳು ಪಂದ್ಯಗಳಲ್ಲಿ 173 ರನ್ ಗಳಿಸಿದ್ದಾರೆ.

ಸಚಿನ್, ಧೋನಿ, ಕೊಹ್ಲಿ, ರೋಹಿತ್ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ? ನೆಟ್ಟಿಗರ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ಉತ್ತರವೇನು?
ಟೀಂ ಇಂಡಿಯಾ ಆಟಗಾರರು
ಪೃಥ್ವಿಶಂಕರ
| Updated By: ರಶ್ಮಿ ಕಲ್ಲಕಟ್ಟ|

Updated on: May 24, 2021 | 10:16 AM

Share

ಸೂರ್ಯಕುಮಾರ ಯಾದವ್.. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ಅವರಂತೆಯೇ ಬ್ಯಾಟಿಂಗ್ ಮಾಡುವ ಸಾಮಥ್ಯ್ರ ಹೊಂದಿರುವ ಆಟಗಾರ. ಅಲ್ಪಾವಧಿಯಲ್ಲಿಯೇ ಅವರು ತಮ್ಮ ಬ್ಯಾಟಿಂಗ್‌ನ ಮ್ಯಾಜಿಕ್ ಅನ್ನು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ತೋರಿಸಿದ್ದಾರೆ. ಅವರು ನಿಧಾನವಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿದ್ದಾರೆ. ಅವರು ಐಪಿಎಲ್‌ನಲ್ಲೂ ಆಡುತ್ತಾರೆ. ಪ್ರಸ್ತುತ, ಐಪಿಎಲ್ ಅನ್ನು ಮುಂದೂಡಲಾಗಿದೆ. ಹೀಗಾಗಿ ಈ ಆಟಗಾರರಿಗೆ ಯಾವುದೇ ಕೆಲಸವಿಲ್ಲ. ಅವರು ತಮ್ಮ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಿದ್ದಾರೆ. ಲೈವ್​ಗೆ ಬಂದ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸೂರ್ಯಕುಮಾರ ಯಾದವ್ ಉತ್ತರಿಸಿದ್ದು ಹೀಗೆ.

ಇತ್ತೀಷಿನ ದಿನಗಳಲ್ಲಿ ಶ್ರೇಷ್ಠ ಕ್ರಿಕೆಟಿಗ ಯಾರು ಎಂದು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಹೆಸರುಗಳು ಸಹಜವಾಗಿಯೇ ಬರುತ್ತವೆ. ಸ್ವಾಭಾವಿಕವಾಗಿ, ಕ್ರಿಕೆಟ್ ಅಭಿಮಾನಿಗಳಿಗೆ ಇದೇ ರೀತಿಯ ಪ್ರಶ್ನೆಗಳಿವೆ. ಇದೇ ರೀತಿಯ ಪ್ರಶ್ನೆಗಳಿಗೆ ಸೂರ್ಯಕುಮಾರ್ ಯಾದವ್ ಅಭಿಮಾನಿಗಳಿಗೆ ಸರಿಯಾಗಿ ಉತ್ತರಿಸಿದರು.

ಸಚಿನ್, ಧೋನಿ, ವಿರಾಟ್, ರೋಹಿತ್ ಬಗ್ಗೆ ಸೂರ್ಯಕುಮಾರ್ ಹೇಳಿದ್ದೇನು? ಅಭಿಮಾನಿಯೊಬ್ಬರು ಸೂರ್ಯಕುಮಾರ್ ಯಾದವ್ ಅವರ ಬಳಿ ಸಚಿನ್ ತೆಂಡೂಲ್ಕರ್ ಅವರನ್ನು ಒಂದೇ ಪದದಲ್ಲಿ ವಿವರಿಸಲು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, ಸಚಿನ್​ ಅವರನ್ನು ಗಾಡ್ ಆಫ್ ಕ್ರಿಕೆಟ್ ಎಂದು ಹೇಳಿದರು ಮತ್ತು ಇದು ಸಚಿನ್ ಅವರ ವೃತ್ತಿಜೀವನವನ್ನು ಸುಂದರಗೊಳಿಸುತ್ತದೆ ಎಂದು ಉತ್ತರಿಸಿದರು. ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನಿಯೊಬ್ಬರು ಒಂದೇ ಪದದಲ್ಲಿ ಉತ್ತರಿಸುವಂತೆ ಕೇಳಿದಾಗ, ಸೂರ್ಯಕುಮಾರ್ ಯಾದವ್, ಸ್ಪೂರ್ತಿದಾಯಕ ಎಂದು ಹೇಳಿದರು. ಧೋನಿಯ ಬಗ್ಗೆ ಕೇಳಿದಾಗ, ಸೂರ್ಯ ಮನಸ್ಸಿಗೆ ಬಂದ ಒಂದು ಮಾತೆಂದರೆ ಲೆಜೆಂಡರಿ ಎಂಬುದಾಗಿತ್ತು.

ಇದರ ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಮತ್ತು ಮುಂಬೈ ಇಂಡಿಯನ್ಸ್ ಓಪನರ್ ರೋಹಿತ್ ಶರ್ಮಾ ಬಗ್ಗೆ ಕೇಳಲಾಯಿತು. ಸೂರ್ಯಕುಮಾರ್ ಮತ್ತು ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಒಟ್ಟಿಗೆ ಆಡುತ್ತಾರೆ. ಸ್ವಾಭಾವಿಕವಾಗಿ, ರೋಹಿತ್ ಬಗ್ಗೆ ಸೂರ್ಯಕುಮಾರ್ ಯಾದವ್ ಏನು ಹೇಳುತ್ತಾರೆ ಎಂಬ ಬಗ್ಗೆ ಅಭಿಮಾನಿಗಳು ಕುತೂಹಲ ಹೊಂದಿದ್ದರು, ಇದಕ್ಕೆ ಸೂರ್ಯಕುಮಾರ್ ಹಿಟ್ಮ್ಯಾನ್ ಎಂದು ಉತ್ತರಿಸಿದರು.

ಐಪಿಎಲ್​ನಲ್ಲಿ ಸೂರ್ಯಕುಮಾರ್ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 108 ಪಂದ್ಯಗಳಲ್ಲಿ 2197 ರನ್ ಗಳಿಸಿದ್ದಾರೆ. ಐಪಿಎಲ್‌ನ 14 ನೇ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಏಳು ಪಂದ್ಯಗಳಲ್ಲಿ 173 ರನ್ ಗಳಿಸಿದ್ದಾರೆ. ಕೊರೊನಾ ವೈರಸ್ ಐಪಿಎಲ್​ಗೆ ಪ್ರವೇಶಿಸಿದ ಕಾರಣ ಐಪಿಎಲ್‌ನ 14 ನೇ ಆವೃತ್ತಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.