The Hundred rules: ಕ್ರಿಕೆಟ್ ಜಗತ್ತಿಗೆ ಹೊಸ ಲೀಗ್: ದಿ ಹಂಡ್ರೆಡ್ ಲೀಗ್ ನಿಯಮಗಳೇನು..?

ಕ್ರಿಕೆಟ್…ಟೆಸ್ಟ್ ಕ್ರಿಕೆಟ್ ಆಯ್ತು…ಬಳಿಕ ಏಕದಿನ ಕ್ರಿಕೆಟ್ ಪರಿಚಯವಾಯ್ತು…ಇದಾದ ಬಳಿಕ ಟಿ20 ಕ್ರಿಕೆಟ್ ಶುರುವಾಯ್ತು…ಇದರ ಬೆನ್ನಲ್ಲೇ ಟಿ10 ಕ್ರಿಕೆಟ್ ಕೂಡ ಸದ್ದು ಮಾಡಿತು…ಮುಂದೇನು ಎಂಬ ಪ್ರಶ್ನೆಗೆ ಸದ್ಯದ ಉತ್ತರ ದಿ ಹಂಡ್ರೆಡ್. ಹೌದು, ಕ್ರಿಕೆಟ್ ಜಗತ್ತಿಗೆ ಮತ್ತೊಂದು ಹೊಸ ಲೀಗ್ ಪರಿಚಯಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಜ್ಜಾಗಿದೆ. ಜುಲೈ 21 ರಿಂದ ಆಗಸ್ಟ್ 21 ರವರೆಗೆ ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ಕ್ರಿಕೆಟ್ ಲೀಗ್ ನಡೆಯಲಿದೆ. ಈ ಟೂರ್ನಿಯು ಟಿ20 ಸ್ವರೂಪವನ್ನು ಹೋಲುತ್ತಿದ್ದರೂ, ಇಲ್ಲಿ ಕೆಲ ನಿಯಮಗಳಲ್ಲಿ ಮಹತ್ವದ ಬದಲಾವಣೆ […]

The Hundred rules: ಕ್ರಿಕೆಟ್ ಜಗತ್ತಿಗೆ ಹೊಸ ಲೀಗ್: ದಿ ಹಂಡ್ರೆಡ್ ಲೀಗ್ ನಿಯಮಗಳೇನು..?
The Hundred
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 20, 2021 | 4:57 PM

ಕ್ರಿಕೆಟ್…ಟೆಸ್ಟ್ ಕ್ರಿಕೆಟ್ ಆಯ್ತು…ಬಳಿಕ ಏಕದಿನ ಕ್ರಿಕೆಟ್ ಪರಿಚಯವಾಯ್ತು…ಇದಾದ ಬಳಿಕ ಟಿ20 ಕ್ರಿಕೆಟ್ ಶುರುವಾಯ್ತು…ಇದರ ಬೆನ್ನಲ್ಲೇ ಟಿ10 ಕ್ರಿಕೆಟ್ ಕೂಡ ಸದ್ದು ಮಾಡಿತು…ಮುಂದೇನು ಎಂಬ ಪ್ರಶ್ನೆಗೆ ಸದ್ಯದ ಉತ್ತರ ದಿ ಹಂಡ್ರೆಡ್. ಹೌದು, ಕ್ರಿಕೆಟ್ ಜಗತ್ತಿಗೆ ಮತ್ತೊಂದು ಹೊಸ ಲೀಗ್ ಪರಿಚಯಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಜ್ಜಾಗಿದೆ. ಜುಲೈ 21 ರಿಂದ ಆಗಸ್ಟ್ 21 ರವರೆಗೆ ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ಕ್ರಿಕೆಟ್ ಲೀಗ್ ನಡೆಯಲಿದೆ. ಈ ಟೂರ್ನಿಯು ಟಿ20 ಸ್ವರೂಪವನ್ನು ಹೋಲುತ್ತಿದ್ದರೂ, ಇಲ್ಲಿ ಕೆಲ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಾಗಿದ್ರೆ ದಿ ಹಂಡ್ರೆಡ್ ಲೀಗ್ ನಿಯಮಗಳೇನು…ಎಷ್ಟು ತಂಡಗಳಿರಲಿವೆ ಎಂಬುದನ್ನು ನೋಡೋಣ.

ದಿ ಹಂಡ್ರೆಡ್ ಲೀಗ್ ನಿಯಮಗಳು:

– ದಿ ಹಂಡ್ರೆಡ್ ಲೀಗ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ 20 ಓವರ್​ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.

– ಈ ಲೀಗ್​ನಲ್ಲಿ ಬೌಲರ್​ ಸತತ 5 ಅಥವಾ 10 ಬೌಲ್​ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್​ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.

– ಒಂದು ಇನಿಂಗ್ಸ್​ನಲ್ಲಿ ಒಬ್ಬ ಬೌಲರ್​ಗೆ 20 ಎಸೆತಗಳು ಮಾತ್ರ ಇರಲಿದೆ.

– ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್​ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬೇಕಾಗುತ್ತದೆ.

– ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಒಂದು ಓವರ್​ ಬಳಿಕ ಬ್ಯಾಟ್ಸ್​ಮನ್​ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್​ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.

– ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್‌ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಅವಕಾಶ ಇರಲಿದೆ.

– ಒಟ್ಟಾರೆಯಾಗಿ ಲೀಗ್‌ನಲ್ಲಿ 32 ಪಂದ್ಯಗಳು ನಡೆಯಲಿವೆ. ಅದರಂತೆ ತಂಡವೊಂದಕ್ಕೆ 8 ಪಂದ್ಯಗಳು ಇರಲಿದ್ದು, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಹೋಮ್​​ಗ್ರೌಂಡ್​ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್​ನಲ್ಲಿ (ಎದುರಾಳಿ ತಂಡದ ಹೋಮ್​ಗ್ರೌಂಡ್) ಆಡಲಿದೆ.

– ದಿ ಹಂಡ್ರೆಡ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.

– 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.

ಜುಲೈ 21 ರಿಂದ ಆಗಸ್ಟ್ 21 ರವರೆಗೆ ದಿ ಹಂಡ್ರೆಡ್ ಲೀಗ್ ನಡೆಯಲಿದ್ದು, ಹೊಸ ಲೀಗ್​ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವೆಸ್ಟ ಇಂಡೀಸ್ ತಂಡಗಳ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಇದಪ್ಪಾ ಸೇಡು ಅಂದ್ರೆ!; ಶ್ರೀಲಂಕಾ ವಿರುದ್ದ ಭಾರತ ಸೋತು ಎಷ್ಟು ವರ್ಷಗಳಾಗಿವೆ ಗೊತ್ತಾ..?

ಇದನ್ನೂ ಓದಿ: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ