IND vs SL: ಲಂಕಾ-ಭಾರತ ಒನ್​ಡೇ ಕದನ: ತಂಡದಲ್ಲಿ ಒಂದು ಬದಲಾವಣೆ..!

India vs Sri Lanka 2nd ODI: ಭಾರತ ತಂಡದಲ್ಲಿ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯಗೆ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ವೇಗಿಯಾಗಿ ದೀಪಕ್ ಚಹರ್ ಇದ್ದಾರೆ.

IND vs SL: ಲಂಕಾ-ಭಾರತ ಒನ್​ಡೇ ಕದನ: ತಂಡದಲ್ಲಿ ಒಂದು ಬದಲಾವಣೆ..!
Team India
TV9kannada Web Team

| Edited By: TV9 SEO

Jul 20, 2021 | 2:52 PM

India vs Sri Lanka 2nd ODI: ಭಾರತ-ಶ್ರೀಲಂಕಾ ನಡುವಣ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಕೊಲಂಬೊದ ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಲಂಕಾ ನಾಯಕ ದಾಸುನ್ ಶನಕಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮೊದಲ ಏಕದಿನ ಪಂದ್ಯ ಭಾರತ ಭರ್ಜರಿ ಜಯ ಸಾಧಿಸಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಅತ್ತ ಶ್ರೀಲಂಕಾಗೆ ಇಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಸಮಬಲಗೊಳಿಸುವ ಇರಾದೆಯಲ್ಲಿದೆ.

ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅದರಂತೆ ಇಸುರು ಉದಾನಾ ಬದಲಾಗಿ ಕಸುನ್ ರಜಿತಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಬಳಗವನ್ನೇ ಭಾರತ ಇಂದು ಕೂಡ ಕಣಕ್ಕಿಳಿಸಿದೆ. ಅದರಂತೆ ಆರಂಭಿಕ ಜೋಡಿಯಾಗಿ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬ್ಯಾಟ್ ಬೀಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್, ನಾಲ್ಕನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಆಡಲಿದ್ದಾರೆ. ಹಾಗೆಯೇ 5ನೇ ಕ್ರಮಾಂಕದಲ್ಲಿ ಬಲಗೈ ಬ್ಯಾಟ್ಸ್​ಮನ್ ಸೂರ್ಯ ಕುಮಾರ್ ಬ್ಯಾಟ್ ಬೀಸಲಿದ್ದಾರೆ.

ಇನ್ನು ತಂಡದಲ್ಲಿ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯಗೆ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ವೇಗಿಯಾಗಿ ದೀಪಕ್ ಚಹರ್ ಇದ್ದಾರೆ. ಹಾಗೆಯೇ ಸ್ಪಿನ್ ಜೋಡಿಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಹಲ್ ತಂಡದಲ್ಲಿದ್ದಾರೆ.

ಉಭಯ ತಂಡಗಳು ಹೀಗಿವೆ:-

ಭಾರತ: ಶ್ರೀಲಂಕಾ (ಪ್ಲೇಯಿಂಗ್ ಇಲೆವೆನ್): ಅವಿಷ್ಕಾ ಫರ್ನಾಂಡೊ, ಮಿನೋದ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಕಸುನ್ ರಾಜಿತಾ, ದುಶಮಂತ್ ಚಮೀರಾ, ಲಕ್ಷನ್ ಸನ್ದಕನ್

ಶ್ರೀಲಂಕಾ ಭಾರತ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada