ರವಿ ಶಾಸ್ತ್ರೀ ಗುಡ್ಬೈ ಹೇಳಿ ರಾಹುಲ್ ದ್ರಾವಿಡ್ರನ್ನು ಟೀಮ್ ಇಂಡಿಯಾಗೆ ಕೋಚ್ ಆಗಿ ನೇಮಕ ಮಾಡುವ ಸಮಯ ಹತ್ತಿರವಾದಂತಿದೆ
ರವಿ ಶಾಸ್ತ್ರೀ ಹೆಡ್ ಕೋಚ್ ಆಗುವ ಮೊದಲು ಆ ಸ್ಥಾನದಲ್ಲಿ ಕನ್ನಡಿಗ ಮತ್ತು ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಇದ್ದರು. ಒಂದು ಷಡ್ಯಂತ್ರ ಮೂಲಕ ಕುಂಬ್ಳೆಯನ್ನು ಕೇವಲ ಒಂದು ವರ್ಷದ ಟೆನ್ಯೂರ್ ನಂತರ ಒತ್ತಡಕ್ಕೆ ಸಿಲಕುವಂಥ ಸ್ಥಿತಿಯನ್ನು ನಿರ್ಮಾಣ ಮಾಡಿ ರಾಜೀನಾಮೆ ಸಲ್ಲಿಸುವಂತೆ ಮಾಡಲಾಗಿತ್ತು.
ಗುರುವಾರ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಮುಕ್ತಾಯವಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರವಾಗಿ ಟ್ರೋಲ್ ಆಗುತ್ತಿರುವ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರೀ ಅವರು ಕೇನ್ ವಿಲಿಯಮ್ಸನ್ ತಂಡವನ್ನು ಹೊಗಳಲಾರಂಭಿಸಿದ್ದಾರೆ. ಸದರಿ ಪಂದ್ಯದ ಎರಡು ದಿನಗಳ ಆಟ ಮಳೆಯಿಂದಾಗಿ ರದ್ದಾದರೂ ಬ್ಲ್ಯಾಕ್ಕ್ಯಾಪ್ಗಳು ಪಂದ್ಯವು ರಿಸರ್ವ್ ದಿನಕ್ಕೆ (ಆರನೇ ದಿನ) ಕಾಲಿಟ್ಟ ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಭಾರತವನ್ನು ಕೇವಲ 170 ರನ್ಳಿಗೆಎ ಸೀಮಿತಗೊಳಿಸಿ ಗೆಲುವಿಗೆ ಬೇಕಿದ್ದ 139 ರನ್ಗಳನ್ನ ಎರಡು ವಿಕೆಟ್ ಮಾತ್ರ ಕಳೆದುಕೊಂಡು ಗಳಿಸಿ ಸಾಂಪ್ರದಾಯಿಕ ಆವೃತ್ತಿಯಲ್ಲಿ ವಿಶ್ವದ ಮೊದಲ ಚಾಂಪಿಯನ್ಗಳೆನಿಸಿಕೊಂಡರು. ರವಿ ಶಾಸ್ತ್ರೀ, ಲಭ್ಯವಿದ್ದ ಕಂಡೀಶನ್ಗಳಲ್ಲಿ ನ್ಯೂಜಿಲೆಂಡ್ ಭಾರತಕ್ಕಿಂತ ಉತ್ತಮ ಟೀಮ್ ಆಗಿತ್ತು ಮತ್ತು ದೀರ್ಘಾವಧಿಯ ಕ್ರಿಕೆಟ್ನಲ್ಲಿ ಚಾಂಪಿಯನ್ಸ್ ಅನಿಸಿಕೊಳ್ಳಲು ಹೆಚ್ಚು ಅರ್ಹರಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
‘ದೊಡ್ಡ ಸಾಧನೆಗಳನ್ನು ಮಾಡುವುದು ಸುಲಭವಲ್ಲ ಎನ್ನವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ನ್ಯೂಜಿಲೆಂಡ್ ಚೆನ್ನಾಗಿ ಆಡಿತು, ಅವರ ಪರಿಶ್ರಮವನ್ನು ಗೌರವಿಸಬೇಕು,’ ಎಂದು ಸಹ ಅವರು ಹೇಳಿದ್ದಾರೆ ‘ಅಲ್ಲಿನ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮು ಗೆಲುವು ಸಾಧಿಸಿದೆ. ವಿಶ್ವ ಕಿರೀಟಕ್ಕಾಗಿ ದೀರ್ಘಾವಧಿವರೆಗೆ ಕಾಯ್ದರೂ ಚಾಂಪಿಯನ್ ಪಟ್ಟಕ್ಕೆ ಅವರು ಅತ್ಯಂತ ಅರ್ಹರಾಗಿದ್ದರು. ದೊಡ್ಡ ಸಾಧನೆಗಳನ್ನು ಮಾಡುವುದು ಸುಲಭವಲ್ಲ ಎನ್ನವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಚೆನ್ನಾಗಿ ಅಡಿದ ನ್ಯೂಜಿಲೆಂಡ್ ತಂಡದ ಸಾಧನೆಯನ್ನು ಗೌರವಿಸಬೇಕು,’ ಎಂದು ರವಿ ಶಾಸ್ತ್ರೀ ಟ್ವೀಟ್ ಮಾಡಿದ್ದಾರೆ.
Better team won in the conditions. Deserved winners after the longest wait for a World Title. Classic example of Big things don't come easy. Well played, New Zealand. Respect.
— Ravi Shastri (@RaviShastriOfc) June 24, 2021
ಅಸಲಿಗೆ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ ರವಿ ಶಾಸ್ತ್ರೀಯ ಕೊಡುಗೆ ಏನು ಅಂತ ಜನ ಕೇಳುತ್ತಿದ್ದಾರೆ. ನಿಮಗೆ ನೆನಪಿರಬಹುದು, ರವಿ ಶಾಸ್ತ್ರೀ ಎರಡನೇ ಬಾರಿಗೆ ಹೆಡ್ ಕೋಚ್ (ಮೊದಲ ಆವಧಿಗೆ ಅವರನ್ನು ಟೀಮ್ ಡೈರೆಕ್ಟರ್ ಅಗಿ ನೇಮಿಸಲಾಗುತ್ತು) ಆಗುವ ಮೊದಲು ಆ ಸ್ಥಾನದಲ್ಲಿ ಕನ್ನಡಿಗ ಮತ್ತು ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಇದ್ದರು. ಒಂದು ಷಡ್ಯಂತ್ರ ಮೂಲಕ ಕುಂಬ್ಳೆಯನ್ನು ಕೇವಲ ಒಂದು ವರ್ಷದ ಟೆನ್ಯೂರ್ ನಂತರ ಒತ್ತಡಕ್ಕೆ ಸಿಲಕುವಂಥ ಸ್ಥಿತಿಯನ್ನು ನಿರ್ಮಾಣ ಮಾಡಿ ರಾಜೀನಾಮೆ ಸಲ್ಲಿಸುವಂತೆ ಮಾಡಲಾಗಿತ್ತು.
ರಾಜೀನಾಮೆ ಸಲ್ಲಿಸಿದ ನಂತರ ಅವರು ತಂಡದ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಸೌಹಾರ್ದಯತವಲ್ಲದ ಸಂಬಂಧದಿಂದಾಗಿ ಹುದ್ದೆ ತೊರೆಯುತ್ತಿರುವುದಾಗಿ ಹೇಳಿದ್ದರು. ನಿಮಗೆ ಆಶ್ಚರ್ಯವಾಗಬಹುದು, ಆ ಒಂದು ವರ್ಷದ ಅವಧಿಯಲ್ಲಿ ಸುಮಾರು 8 ತಿಂಗಳವೆರೆಗೆ ಕುಂಬ್ಳೆ ಮತ್ತು ಕೊಹ್ಲಿ ನಡುವೆ ಮಾತುಕತೆಯೇ ಇರಲಿಲ್ಲ. ಬಿಸಿಸಿಐ ಸಹ ಅವರನ್ನು ಸೂಕ್ತವಾಗಿ ನಡೆಸಿಕೊಂಡಿರಲಿಲ್ಲ. 2017 ರಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷಣ್ ಮತ್ತು ಸೌರವ್ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ರವಿ ಶಾಸ್ತ್ರೀಯನ್ನು ಟೀಮ್ ಇಂಡಿಯಾದ ಹೆಡ್ಕೋಚ್ ಆಗಿ ನೇಮಕ ಮಾಡಿತ್ತು. ಅನಿಲ್ ಕುಂಬ್ಳೆ ರೂ. 6.5 ಕೋಟಿ ವಾರ್ಷಿಕ ಸಂಭಾವನೆ ಪಡೆದರೆ, ರವಿಗೆ ರೂ. 8 ಕೋಟಿ ನೀಡಲಾಯಿತು.
ರವಿ ಹೆಡ್ ಕೋಚ್ ಆದಾಗಿನಿಂದ ಭಾರತ ಒಡಿಐ ಮತ್ತು ಟೆಸ್ಟ್ ಸರಣಿಗಳನ್ನು ಗೆದ್ದಿದೆಯಾದರೂ ಐಸಿಸಿ ಆಯೋಜಿತ ಯಾವುದೇ ಪ್ರಮುಖ ಟೂರ್ನಿ ಗೆದ್ದಿಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ಗಾಗಿ ಪ್ರತ್ಯೇಕ ಕೋಚ್ಗಳಿರುವಾಗ ರವಿಯ ಜವಾಬ್ದಾರಿ ಏನು ಅನ್ನುವುದನ್ನು ಮಂಡಳಿ ಮತ್ತು ಕೊಹ್ಲಿಯೇ ಹೇಳಬೇಕು. ಅವರ ಆಲ್ಕೋಹಾಲಿಸಮ್ ಬಗ್ಗೆಯೂ ಅನೇಕ ದೂರುಗಳಿವೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲು ಅನುಭವಿಸಿದ ನಂತರ ರವಿಯನ್ನು ತೆಗೆದುಹಾಕಿ ಶಿಸ್ತಿನ ಸಿಪಾಯ ಎನಿಸಿರುವ ರಾಹುಲ ದ್ರಾವಿಡ್ ಅವರನ್ನು ಟೀಮಿನ್ ಕೋಚ್ ಆಗಿ ನೇಮಿಸಬೇಕೆಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಅಂಡರ್-19 ಮತ್ತು ಇಂಡಿಯಾ-ಎ ಟೀಮುಗಳ ಯಶಸ್ವೀ ಕೋಚ್ ಅನಿಸಿಕೊಂಡಿರುವ ದ್ರಾವಿಡ್ರನ್ನು ಸೀನಿಯರ್ ತಂಡದ ಜವಾಬ್ದಾರಿ ಸಹ ನೀಡಿದರೆ, ಖಂಡಿತವಾಗಿಯೂ ಒಂದು ಹೊಸ ಮತ್ತು ಚೇತೋಹಾರಿ ಸನ್ನಿವೇಶ ಸೃಷ್ಟ್ಟಿಯಾಗಲಿದೆ.