PHOTOS: ಭಾರತಕ್ಕೆ ವಾಪಸ್ಸಾದ ಬೆಳ್ಳಿ ಹುಡುಗಿ ಮೀರಾಬಾಯಿ ಚಾನು; ಡಿವೈಎಸ್​ಪಿ ಹುದ್ದೆ ನೀಡಿ ಗೌರವಿಸಿದ ಮಣಿಪುರ ಸರ್ಕಾರ

| Updated By: ಪೃಥ್ವಿಶಂಕರ

Updated on: Jul 26, 2021 | 7:53 PM

Mirabai Chanu: ಮೀರಾಬಾಯಿ ಚಾನು ಅವರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಸೋಮವಾರ ಪ್ರಕಟಿಸಿದ್ದಾರೆ.

1 / 5
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಜುಲೈ 26 ರಂದು ಭಾರತಕ್ಕೆ ಮರಳಿದರು. ಭಾರತಕ್ಕೆ ಆಗಮಿಸಿದ ನಂತರ ಅವರನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಭದ್ರತಾ ಸಿಬ್ಬಂದಿಯ ಮಧ್ಯೆ ಚಾನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದರು. ತುಂಬಾ ಪ್ರೀತಿ ಮತ್ತು ಬೆಂಬಲದ ನಡುವೆ ಇಲ್ಲಿಗೆ ಮರಳಲು ಸಂತೋಷವಾಗಿದೆ ಎಂದು ಇಲ್ಲಿಗೆ ತಲುಪಿದ ನಂತರ ಅವರು ಟ್ವೀಟ್ ಮಾಡಿದ್ದಾರೆ.

2 / 5
ಮೀರಾಬಾಯಿ ಚಾನು ಅವರನ್ನು 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಭಾರತದ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಅನೇಕರು ಅವರನ್ನು ಸನ್ಮಾನಿಸಿದರು. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಅವರ ಮಾದರಿಯನ್ನು ಕೊರೊನಾ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಅದೇ ಸಮಯದಲ್ಲಿ, ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಮಾಧ್ಯಮಗಳು ಚಾನು ಅವರನ್ನು ಸುತ್ತುವರಿದವು. ಇದರಿಂದಾಗಿ ಅಲ್ಲಿ ಸಾಕಷ್ಟು ಜನಸಂದಣಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಚಾನು ಭದ್ರತಾ ಸಿಬ್ಬಂದಿಯ ನೆರವು ಪಡೆಯಬೇಕಾಯ್ತು.

3 / 5
 ಮಣಿಪುರದ ಈ ಆಟಗಾರ್ತಿ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದಕ್ಕೂ ಮೊದಲು 2000 ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ನಾಮ್ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

4 / 5
ಚಾನು ಮಾಜಿ ವಿಶ್ವ ಚಾಂಪಿಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಈ ಕ್ರೀಡಾಕೂಟಕ್ಕೆ ಮುಂಚಿತವಾಗಿ ಅವರು ಯುಎಸ್ನಲ್ಲಿ ಅಭ್ಯಾಸ ಮಾಡುತ್ತಿದ್ದರು ಮತ್ತು ಅವರ ಆತ್ಮವಿಶ್ವಾಸದ ಪ್ರದರ್ಶನದೊಂದಿಗೆ ಪದಕ ಭರವಸೆಗೆ ತಕ್ಕಂತೆ ಆಟವಾಡಿದ್ದಾರೆ.

5 / 5
ಮೀರಾಬಾಯಿ ಚಾನು ಅವರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಸೋಮವಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಅವರಿಗೆ ಒಂದು ಕೋಟಿ ರೂಪಾಯಿಗಳನ್ನು ಸಹ ನೀಡಲಾಗುವುದು. ಮಣಿಪುರದಲ್ಲಿ ವಿಶ್ವ ದರ್ಜೆಯ ವೇಟ್‌ಲಿಫ್ಟಿಂಗ್ ಅಕಾಡೆಮಿ ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿ ಘೋಷಿಸಿದರು.

Published On - 7:52 pm, Mon, 26 July 21