Tokyo Olympics: ಹುಸಿಯಾಯ್ತು ಪದಕ ಭರವಸೆ; ಚೀನಾದ ಬಾಕ್ಸರ್ ಎದುರು ಸೋತ ಭಾರತದ ಆಶಿಶ್ ಕುಮಾರ್
Tokyo Olympics: 75 ಕೆಜಿ ತೂಕದ ಮಿಡಲ್ ವೇಟ್ ವಿಭಾಗದಲ್ಲಿ ಭಾರತದ ಆಶಿಶ್ ಕುಮಾರ್ 32ನೇ ಸುತ್ತಿನಲ್ಲಿ ಸೋತು ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಚೀನಾದ ಬಾಕ್ಸರ್ ಎರ್ಬಿಕ್ ತೋಹೆಟಾ ಅವರನ್ನು 5-0 ಅಂತರದಿಂದ ಸೋಲಿಸಿದರು.
ಟೋಕಿಯೊ ಒಲಿಂಪಿಕ್ಸ್‌ನ ಅಖಾಡದಲ್ಲಿ ನಡೆಯುತ್ತಿರುವ ಪುರುಷರ ಬಾಕ್ಸಿಂಗ್ ಪಂದ್ಯದಲ್ಲಿ, ಭಾರತೀಯ ಬಾಕ್ಸರ್‌ಗಳ ಹೊಡೆತಗಳು ಒಂದರ ನಂತರ ಒಂದರಂತೆ ಖಾಲಿಯಾಗುತ್ತಿವೆ. 75 ಕೆಜಿ ತೂಕದ ಮಿಡಲ್ ವೇಟ್ ವಿಭಾಗದಲ್ಲಿ ಭಾರತದ ಆಶಿಶ್ ಕುಮಾರ್ 32ನೇ ಸುತ್ತಿನಲ್ಲಿ ಸೋತು ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಚೀನಾದ ಬಾಕ್ಸರ್ ಎರ್ಬಿಕ್ ತೋಹೆಟಾ ಅವರನ್ನು 5-0 ಅಂತರದಿಂದ ಸೋಲಿಸಿದರು. ಪುರುಷರ ಬಾಕ್ಸಿಂಗ್‌ನಲ್ಲಿ ಪದಕ ಓಟದಿಂದ ಹೊರಗುಳಿದ ಮೂರನೇ ಭಾರತೀಯ ಬಾಕ್ಸರ್ ಆಶಿಶ್ ಕುಮಾರ್. ಅವರಿಗೂ ಮೊದಲು, ವಿಕಾಸ್ ಕೃಷ್ಣನ್ ಮತ್ತು ಮನೀಶ್ ಕೂಡ ಸೋತು ಒಲಂಪಿಕ್ಸ್ನಿಂದ ಔಟ್ ಆಗಿದ್ದಾರೆ. ವಿಜೇಂದರ್ ಸಿಂಗ್ ನಂತರ ಮೊದಲ ಬಾರಿಗೆ ಭಾರತೀಯ ಬಾಕ್ಸರ್ ಮಿಡಲ್ ವೇಟ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಆಶಿಶ್ಗೆ ವಿಜೇಂದರ್ ಅವರ ಯಶಸ್ಸನ್ನು ಮರುಕಳಿಸುವಂತೆ ಮಾಡಲಾಗಲಿಲ್ಲ.
ತಮ್ಮ ಮೊದಲ ಒಲಿಂಪಿಕ್ಸ್ ಆಡುತ್ತಿರುವ ಆಶಿಶ್ ಕುಮಾರ್ ಅವರು ಟೋಕಿಯೊದ ಅಖಾಡದಲ್ಲಿ ಒಮ್ಮೆ ಕೂಡ ತೀರ್ಪುಗಾರರ ನಿರೀಕ್ಷೆಗೆ ತಕ್ಕಂತೆ ಆಟವಾಡಲು ಸಾಧ್ಯವಾಗಲಿಲ್ಲ. ಎಲ್ಲಾ ಮೂರು ಸುತ್ತುಗಳಲ್ಲಿ, ಐದು ತೀರ್ಪುಗಾರರ ತೀರ್ಮಾನವು ಅವರ ವಿರುದ್ಧ ಬಂದಿತು. ಆದಾಗ್ಯೂ, ಮೊದಲ ಸುತ್ತಿನಲ್ಲಿ ಸೋತ ನಂತರ, ಅವರು ಎರಡನೇ ಸುತ್ತಿನಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದರು. ಆದರೆ ಹಾಗೆ ಮಾಡುವ ಮೂಲಕ ಅವರು ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ವಿಫಲರಾದರು. ಇದರ ನಂತರ, ಮೂರನೇ ಸುತ್ತಿನಲ್ಲಿ ಚೀನೀ ಬಾಕ್ಸರ್ ಮೇಲುಗೈ ಸಾಧಿಸಿದರು. ಚೀನಾದ ಬಾಕ್ಸರ್ ಎರ್ಬಿಕ್ ತೋಹೆಟಾ ಈಗ ಬ್ರೆಜಿಲ್ ಬಾಕ್ಸರ್ ಜೊತೆ ಸ್ಪರ್ಧಿಸಲಿದ್ದಾರೆ.
ಆಶಿಶ್ ಕನಸು ನುಚ್ಚುನೂರು ಟೋಕಿಯೋ ಒಲಿಂಪಿಕ್ ರಿಂಗ್‌ಗೆ ಪ್ರವೇಶಿಸುವ ಮೊದಲು ಆಶಿಶ್ ಕುಮಾರ್ ಸಂದರ್ಶನವೊಂದರಲ್ಲಿ ಒಲಿಂಪಿಕ್ ಪದಕದ ವಾಲ್ ಪೇಪರ್ ಅನ್ನು ತನ್ನ ಮೊಬೈಲ್ ವಾಲ್ಪೇಪರ್ ಆಗಿ ಹಾಕಿಕೊಂಡಿದ್ದೇನೆ. ಅದನ್ನು ನೋಡಿಯೇ ನಾನು ಮಲಗುವುದು ಮತ್ತು ಅದನ್ನು ನೋಡಿದ ನಂತರವೇ ನಾನು ಹಾಸಿಗೆಯಿಂದ ಏಳುವುದು ಎಂದಿದ್ದರು. ಜೊತೆಗೆ ಪದಕ ಗೆದ್ದೆ ಭಾರತಕ್ಕೆ ವಾಪಸ್ಸಾಗುತ್ತೇನೆ ಎಂಬ ವಿಶ್ವಾಸ ನೀಡಿದ್ದರು. ಆದರೆ, ಅವರು ಅಖಾಡಕ್ಕೆ ಪ್ರವೇಶಿಸಿದ ಕೂಡಲೇ ಹಿಮಾಚಲದ ಬಾಕ್ಸರ್ ಅವರ ಎಲ್ಲಾ ನಿರೀಕ್ಷೆಗಳು ಸತ್ತುಹೋದವು.
ಆಶಿಶ್ ಅವರು 2019 ರಲ್ಲಿ ನಡೆದ ಏಷ್ಯನ್ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. 2020 ರಲ್ಲಿ ಅವರು ಅಮನ್‌ನಲ್ಲಿ ನಡೆದ ಬಾಕ್ಸಿಂಗ್ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯ ಸೆಮಿಫೈನಲ್ ತಲುಪಿದರು. ಇದರ ಜೊತೆಗೆ ಟೋಕಿಯೊಗೆ ಟಿಕೆಟ್ ಪಡೆದರು.
Published On - 6:24 pm, Mon, 26 July 21