Tokyo Olympics: ಬೆಳ್ಳಿಯೊಂದಿಗೆ ತವರಿಗೆ ವಾಪಸ್ಸಾದ ಮೀರಾಬಾಯಿ ಚಾನು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
Tokyo Olympics: ಚಾನು ಮಣಿಪುರದವರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು ಚಾನುಗೆ 1 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದರು ಮತ್ತು ಅವರಿಗೆ ಸರ್ಕಾರದಲ್ಲಿ ವಿಶೇಷ ಉದ್ಯೋಗದ ಭರವಸೆ ನೀಡಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸೋಮವಾರ ದೆಹಲಿಗೆ ಆಗಮಿಸಿದರು. ಪದಕ ಗೆದ್ದು ತವರಿಗೆ ವಾಪಸ್ಸಾದ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ನಂತರ ಅವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತುವ ಮೂಲಕ ಚಾನು ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಚಾನು ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಪದಕಕ್ಕಾಗಿ ಭಾರತದ 21 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಈ ಹಿಂದೆ ಕರ್ಣಂ ಮಲ್ಲೇಶ್ವರಿ 2000 ನೇ ಇಸವಿಯಲ್ಲಿ ಸಿಡ್ನಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮನೆಗೆ ಹಿಂತಿರುಗುತ್ತಿದ್ದೇನೆ ಇದಕ್ಕೂ ಮುನ್ನ ಸೋಮವಾರ, ಟೋಕಿಯೊದಿಂದ ನಿರ್ಗಮಿಸುವ ಬಗ್ಗೆ ಚಾನು ಟ್ವೀಟ್ ಮಾಡಿದ್ದು, ಮನೆಗೆ ಹಿಂತಿರುಗುತ್ತಿದ್ದೇನೆ. ನನ್ನ ಜೀವನದ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು ಟೋಕಿಯೊ 2020 ಎಂದು 26 ವರ್ಷದ ಚಾನು ಟ್ವೀಟ್ ಮಾಡಿದ್ದರು.
ಚಾನು ಮಣಿಪುರದವರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು ಚಾನುಗೆ 1 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದರು ಮತ್ತು ಅವರಿಗೆ ಸರ್ಕಾರದಲ್ಲಿ ವಿಶೇಷ ಉದ್ಯೋಗದ ಭರವಸೆ ನೀಡಿದರು.
Delhi: Olympic silver medallist Mirabai Chanu arrives at the airport from Tokyo.
She underwent a mandatory RT-PCR test at the airport#Olympics pic.twitter.com/c3wvvrI07A
— ANI (@ANI) July 26, 2021
ನನ್ನ ದೇಶಕ್ಕೆ ಅರ್ಪಿಸಲು ನಾನು ಬಯಸುತ್ತೇನೆ ದೊಡ್ಡ ಆಟಗಾರನಾಗಲು ಅಥವಾ ದೊಡ್ಡದನ್ನು ಸಾಧಿಸಲು, ನೀವು ತ್ಯಾಗ ಮಾಡಬೇಕು ಮತ್ತು ನಾನು ಅನೇಕ ತ್ಯಾಗಗಳನ್ನು ಮಾಡಿದ್ದೇನೆ ಎಂದು ಬೆಳ್ಳಿ ಪದಕವನ್ನು ಗೆದ್ದ ನಂತರ ಎನ್‌ಡಿಟಿವಿಗೆ ಮಾತನಾಡುವ ಚಾನು ಹೇಳಿದರು. ಟೋಕಿಯೊದಲ್ಲಿ ಪದಕ ಗೆದ್ದ ನಂತರ ಚಾನು ತನ್ನ ಹಿತೈಷಿಗಳು ಮತ್ತು ಬೆಂಬಲಿಗರಿಗೆ ಸಂದೇಶ ಬರೆದಿದ್ದರು. ನನ್ನ ದೇಶಕ್ಕಾಗಿ ಟೋಕಿಯೊ 2020 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇಂದು ನಿಜಕ್ಕೂ ನನ್ನ ಕನಸು ನನಸಾಗಿದೆ. ಈ ಪದಕವನ್ನು ನನ್ನ ದೇಶಕ್ಕೆ ಅರ್ಪಿಸಲು ನಾನು ಬಯಸುತ್ತೇನೆ ಮತ್ತು ಈ ಪ್ರಯಾಣದ ಸಮಯದಲ್ಲಿ ನನ್ನೊಂದಿಗಿದ್ದ ಎಲ್ಲ ಭಾರತೀಯರ ಒಂದು ಬಿಲಿಯನ್ ಪ್ರಾರ್ಥನೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು.