Tokyo Olympics: ಒಲಂಪಿಕ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಸತತ ಎರಡನೇ ಸೋಲು; ಬ್ರಿಟನ್ ವಿರುದ್ಧ ಮುಂದಿನ ಪಂದ್ಯ

Tokyo Olympics: ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಸತತ ಎರಡನೇ ಸೋಲನ್ನು ಅನುಭವಿಸಿದೆ. ಜರ್ಮನಿ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಟೀಮ್ ಇಂಡಿಯಾ 2-0 ಗೋಲುಗಳಿಂದ ಸೋತಿದೆ.

Tokyo Olympics: ಒಲಂಪಿಕ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಸತತ ಎರಡನೇ ಸೋಲು; ಬ್ರಿಟನ್ ವಿರುದ್ಧ ಮುಂದಿನ ಪಂದ್ಯ
ಭಾರತದ ಮಹಿಳಾ ಹಾಕಿ ತಂಡಕ್ಕೆ ಸತತ ಎರಡನೇ ಸೋಲು
Follow us
TV9 Web
| Updated By: ಪೃಥ್ವಿಶಂಕರ

Updated on: Jul 26, 2021 | 8:37 PM

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಸತತ ಎರಡನೇ ಸೋಲನ್ನು ಅನುಭವಿಸಿದೆ. ಜರ್ಮನಿ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಟೀಮ್ ಇಂಡಿಯಾ 2-0 ಗೋಲುಗಳಿಂದ ಸೋತಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಜರ್ಮನಿಯ ಮುಂದೆ ರಾಣಿ ರಾಂಪಾಲ್ ನೇತೃತ್ವದ ತಂಡವು ಅನೇಕ ಪ್ರಮುಖ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಇದರ ಲಾಭವನ್ನು ಪಡೆದುಕೊಂಡ ಜರ್ಮನಿ ಸತತ ಎರಡನೇ ಜಯ ದಾಖಲಿಸಿತು. ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭಾರತ ವಿಶ್ವ ನಂಬರ್ ಒನ್ ತಂಡವಾದ ನೆದರ್‌ಲ್ಯಾಂಡ್ಸ್ ತಂಡವನ್ನು 5-1ರಿಂದ ಎದುರಿಸಬೇಕಾಯಿತು. ಜರ್ಮನಿ ವಿರುದ್ಧದ ಪಂದ್ಯದಲ್ಲಿ, ಭಾರತದ ತಂಡದ ಆಟವು ಸುಧಾರಣೆಯನ್ನು ತೋರಿಸಿದರೂ ಗೆಲುವು ಸಾಧಿಸಲು ಸಾಕಾಗಲಿಲ್ಲ.

ವಿಶ್ವದ ಮೂರನೇ ಕ್ರಮಾಂಕದ ತಂಡ ಜರ್ಮನಿ ಮೊದಲಾರ್ಧದಲ್ಲಿ ಪೆನಾಲ್ಟಿ ಕಾರ್ನರ್ ಗಳಿಸಿ 1-0 ಮುನ್ನಡೆ ಸಾಧಿಸಿತು. ತಂಡದ ನಾಯಕಿ ನಿಕಿ ಲೊರೆನ್ಜ್ 12 ನೇ ನಿಮಿಷದಲ್ಲಿ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಸಮಾನ ಅವಕಾಶ ಸಿಕ್ಕಿತು. ಆದರೆ ಮೊದಲು ಅವರು ಪೆನಾಲ್ಟಿ ಕಾರ್ನರ್ ಅನ್ನು ತಪ್ಪಿಸಿಕೊಂಡರು. ಏತನ್ಮಧ್ಯೆ, ಜರ್ಮನಿಯ ರಕ್ಷಕಿ ಚೆಂಡನ್ನು ತಪ್ಪಾಗಿ ನಿಲ್ಲಿಸಿದ್ದಾರೆ ಎಂದು ಹೇಳಿ ಭಾರತದ ನಾಯಕಿ ರಾಣಿ ರಾಂಪಾಲ್ ಪೆನಾಲ್ಟಿ ಸ್ಟ್ರೋಕ್ ಕೇಳಿದರು. ವೀಡಿಯೊ ಅಂಪೈರ್ ಭಾರತದ ಬೇಡಿಕೆಯನ್ನು ಸಮರ್ಥಿಸಿಕೊಂಡರು ಮತ್ತು ಪೆನಾಲ್ಟಿ ಸ್ಟ್ರೋಕ್ ನೀಡಿದರು. ಆದರೆ ಗುರ್ಜಿತ್ ಕೌರ್ ಚೆಂಡನ್ನು ಗೋಲಿಗೆ ಹಾಕಲು ಸಾಧ್ಯವಾಗಲಿಲ್ಲ. ಜರ್ಮನಿಯ ಗೋಲ್ಕೀಪರ್ ಚೆಂಡನ್ನು ಸುಲಭವಾಗಿ ನಿಲ್ಲಿಸಿದರು.

35 ನೇ ನಿಮಿಷದಲ್ಲಿ ಜರ್ಮನಿಗೆ ಬಂಪರ್ ಕೆಲವು ನಿಮಿಷಗಳ ನಂತರ, ಜರ್ಮನಿ ಎರಡನೇ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಈ ಬಾರಿ ಅನ್ನಾ ಶ್ರೋಡರ್ 35 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರ ನಂತರ, 37 ನೇ ನಿಮಿಷದಲ್ಲಿ, ವಂದನಾ ಕಟಾರಿಯಾ ಚೆಂಡಿನೊಂದಿಗೆ ಎದುರಾಳಿ ಶಿಬಿರವನ್ನು ಪ್ರವೇಶಿಸಿದರು ಆದರೆ ಆಕೆಗೆ ಶಾಟ್ ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಗೋಲು ಅವಕಾಶ ಮುಂದುವರಿಯಿತು. ಜರ್ಮನಿ ಮೊದಲ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದರು. ಭಾರತ ಮುಂದಿನ ಬುಧವಾರ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ