ಒಲಂಪಿಕ್ಸ್ ಸ್ಪರ್ಧಿಗಳನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಸಂಸದ ತೇಜಸ್ವಿ ಸೂರ್ಯ

| Updated By: ಪೃಥ್ವಿಶಂಕರ

Updated on: Aug 09, 2021 | 8:29 PM

ಟೋಕಿಯೋದಲ್ಲಿ ಸ್ವರ್ಣ ಸಾಧನೆ ಮಾಡಿದ ಜಾವಲಿನ್ ಥ್ರೋಪಟು ನೀರಜ್ ಛೋಪ್ರಾ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಾ ಸ್ವಾಗತಿಸಿದರು.

ಒಲಂಪಿಕ್ಸ್ ಸ್ಪರ್ಧಿಗಳನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಸಂಸದ ತೇಜಸ್ವಿ ಸೂರ್ಯ
ಭಾರತದ ಹಾಕಿ ತಂಡದ ನಾಯಕರೊಂದಿಗೆ ತೇಜಸ್ವಿ ಸೂರ್ಯ
Follow us on

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಮುಗಿದ ನಂತರ ಭಾರತೀಯ ಆಟಗಾರರು ತಾಯ್ನಾಡಿಗೆ ಮರಳಲು ಆರಂಭಿಸಿದ್ದಾರೆ. ನೀರಜ್ ಚೋಪ್ರಾ, ರವಿ ದಹಿಯಾ, ಭಜರಂಗ್ ಪುನಿಯಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ಟೋಕಿಯೊದಿಂದ ದೆಹಲಿಗೆ ಮರಳಿದರು. ಈ ಎಲ್ಲ ಆಟಗಾರರು ಆಗಸ್ಟ್ 9 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಎಲ್ಲ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರನ್ನು ಸ್ವಾಗತಿಸಲು ಕ್ರೀಡಾ ಅಧಿಕಾರಿಗಳು, ವಿವಿಧ ಒಕ್ಕೂಟಗಳು, ಮಾಧ್ಯಮಗಳು ಹಾಗೂ ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಇದರಲ್ಲಿ ಕರ್ನಾಟಕದ ಯುವ ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿಗಳನ್ನು ತೇಜಸ್ವಿ ಸೂರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.

ಟೋಕಿಯೋದಲ್ಲಿ ಸ್ವರ್ಣ ಸಾಧನೆ ಮಾಡಿದ ಜಾವಲಿನ್ ಥ್ರೋಪಟು ನೀರಜ್ ಛೋಪ್ರಾ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಾ ಸ್ವಾಗತಿಸಿದರು. ಪ್ರತಿ ಆಟಗಾರರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಸೂರ್ಯ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಹಂಚಿಕೊಂಡಿದ್ದಾರೆ. ಅಥ್ಲೀಟ್ ನೀರಜ್ ಚೋಪ್ರಾ ಅವರು ಜಾವೆಲಿನ್‌ ಎಸೆತದಲ್ಲಿ ದೇಶಕ್ಕೆ ಚಿನ್ನವನ್ನು ತಂದುಕೊಟ್ಟರು. ಯಾರೂ ನಿರೀಕ್ಷಿಸಿರದ ಗಾಲ್ಫ್ ಕ್ರೀಡೆಯಲ್ಲಿ ಕರ್ನಾಟಕದ ಅದಿತಿ ಅಮೋಘ ಪ್ರದರ್ಶನ ನೀಡಿದರು. ಒಟ್ಟಾರೆಯಾಗಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚು ಸಹಿತ 7 ಮೆಡಲ್ ಪಡೆದ ಭಾರತಕ್ಕೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ.